ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿ: IB ಅಧಿಕಾರಿಯ ಬಯಕೆ ಕೊನೆಗೂ ಈಡೇರಲಿಲ್ಲ!

ಅವರ ತಂದೆ ಇತ್ತೀಚೆಗೆ ಜಾಲ್ಡಾದ ಹಿಂದಿ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಈ ರಜೆಯ ನಂತರ ರಂಜನ್ ತನ್ನ ಪೋಷಕರನ್ನು ವೈಷ್ಣೋದೇವಿಗೆ ಕರೆದೊಯ್ಯಲು ಯೋಜಿಸಿದ್ದರು
Manish Ranjan
IB ಅಧಿಕಾರಿ ಮನೀಶ್ ರಂಜನ್ ಸಾಂದರ್ಭಿಕ ಚಿತ್ರ
Updated on

ರಾಂಚಿ: ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ಜನರ ಪೈಕಿ ಹೈದರಾಬಾದ್‌ನಲ್ಲಿ ನಿಯೋಜಿಸಲಾದ ಐಬಿಯ ಸೆಕ್ಷನ್ ಆಫೀಸರ್ ಮನೀಶ್ ರಂಜನ್ ಕೂಡ ಸೇರಿದ್ದಾರೆ.

ಈ ರಜೆಯಿಂದ ಹಿಂದಿರುಗಿದ ನಂತರ ತನ್ನ ಪೋಷಕರನ್ನು ವೈಷ್ಣೋದೇವಿ ದೇಗುಲಕ್ಕೆ ಕರೆದೊಯ್ಯಲು ಯೋಜಿಸಿದ್ದರು ಎಂದು ಅವರ ಸ್ನೇಹಿತರೊಬ್ಬರು ವಿವರಿಸಿದ್ದಾರೆ. ರಂಜನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು ಎಂದು ಗುರುವಾರ ಬೆಳಗ್ಗೆ ರಾಂಚಿ ವಿಮಾನ ನಿಲ್ದಾಣದಲ್ಲಿ ರಂಜನ್ ಅವರ ಪಾರ್ಥಿವ ಶರೀರವನ್ನು ಸ್ವೀಕರಿಸಲು ಬಂದಿದ್ದ ಸಂಜೀವ್ ಕುಮಾರ್ ಗುಪ್ತಾ ಹೇಳಿದರು.

"ಅವರ ತಂದೆ ಇತ್ತೀಚೆಗೆ ಜಾಲ್ಡಾದ ಹಿಂದಿ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಈ ರಜೆಯ ನಂತರ ರಂಜನ್ ತನ್ನ ಪೋಷಕರನ್ನು ವೈಷ್ಣೋದೇವಿಗೆ ಕರೆದೊಯ್ಯಲು ಯೋಜಿಸಿದ್ದರು. ಇಂತಹ ಭೀಕರ ಘಟನೆ ನಡೆಯುತ್ತದೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ ಎಂದು ಅವರು ತಿಳಿಸಿದರು.

ಜನರು ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದು ಹೇಳುತ್ತಾರೆ, ಆದರೆ ಅವರ ಧರ್ಮದ ಕಾರಣದಿಂದ ಅಮಾಯಕರನ್ನು ಬರ್ಬರವಾಗಿ ಕೊಲ್ಲಲಾಗಿದೆ ಎಂದು ಮತ್ತೊಬ್ಬ ಸ್ನೇಹಿತ ಆದಿತ್ಯ ಶರ್ಮಾ ಹೇಳಿದರು,

Manish Ranjan
ಪಹಲ್ಗಾಮ್‌ ಉಗ್ರ ದಾಳಿ: ಬೈಸರನ್ ಹುಲ್ಲುಗಾವಲು ಬಳಿ ಯಾವುದೇ ಭದ್ರತಾ ಪಡೆ ಇರಲಿಲ್ಲ

ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ನಾಯಕರು ಮತ್ತು ಆಡಳಿತಾಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ರಂಜನ್ ಅವರಿಗೆ ಗೌರವ ಸಲ್ಲಿಸಿದರು. ಧರ್ಮದ ಆಧಾರದಲ್ಲಿ ಅಮಾಯಕರನ್ನು ಹತ್ಯೆಗೈದ ರೀತಿ ಕ್ಷಮಾಪಣೆಯಲ್ಲ ಎಂದು ಮರಾಂಡಿ ಹೇಳಿದರು. ಅಪರಾಧ ಎಸಗಿದ ಅಪರಾಧಿಗಳಿಗೆ ಸರಕಾರದಿಂದ ನ್ಯಾಯ ದೊರಕಿಸಿಕೊಡಲಾಗುವುದು. ದಾಳಿಯ ಮಾಸ್ಟರ್‌ಮೈಂಡ್‌ಗಳನ್ನು ಸಹ ಬಿಡುವುದಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com