'ಹೀಗೆ ಮುಂದುವರೆದ್ರೆ ಇಡೀ ರಾಜ್ಯವೇ ಭೂಪಟದಿಂದ ಕಣ್ಮರೆಯಾಗಿ ಬಿಡುತ್ತದೆ': Supreme Court ಎಚ್ಚರಿಕೆ

ಹೈಕೋರ್ಟ್‌ನ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅಧಿಸೂಚನೆ ಹೊರಡಿಸಲು ಸ್ಪಷ್ಟ ಕಾರಣವೆಂದರೆ ನಿರ್ದಿಷ್ಟ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ತಡೆಯುವುದು ಎಂದು ಹೇಳಿದೆ.
Himachal Pradesh Floods
ಹಿಮಾಚಲ ಪ್ರದೇಶ ಪ್ರವಾಹ
Updated on

ನವದೆಹಲಿ: ಅಭಿವೃದಿ ಹೆಸರಿನಲ್ಲಿ ಪ್ರಕೃತಿ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಟು ಶಬ್ದಗಳಿಂದ ಖಂಡಿಸಿರುವ ಸುಪ್ರೀಂ ಕೋರ್ಟ್, 'ಹೀಗೆ ಮುಂದುವರೆದರೆ ಇಡೀ ರಾಜ್ಯವೇ ಭೂಪಟದಿಂದ ಕಣ್ಮರೆಯಾಗಿ ಬಿಡುತ್ತದೆ' ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ.

ಹೌದು.. ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಅರಣ್ಯ ನಾಶ ಹಾಗೂ ಪರಿಸರ ಅಸಮತೋಲನವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದ್ದು, ಹಿಮಾಚಲ ಪ್ರದೇಶದ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, 'ಪರಿಸ್ಥಿತಿ ಬದಲಾಗದಿದ್ದರೆ ಇಡೀ ರಾಜ್ಯವೇ ದೇಶದ ಭೂಪಟದಿಂದ ಕಣ್ಮರೆಯಾಗುವ ಕಾಲ ದೂರವಿಲ್ಲ ಎಂದು ಹೇಳಿದೆ.

ಹಿಮಾಚಲ ಪ್ರದೇಶ ಹೈಕೋರ್ಟ್‌ನ ಆದೇಶದ ವಿರುದ್ಧದ ಅರ್ಜಿಯನ್ನು ವಿಚಾರಣೆ ನಡೆಸುವಾಗ ಜುಲೈ 28 ರಂದು ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ನೀಡಿತು. ಜೂನ್ 2025 ರಲ್ಲಿ ಕೆಲವು ಪ್ರದೇಶಗಳನ್ನು "ಹಸಿರು ಪ್ರದೇಶ" ಎಂದು ಘೋಷಿಸುವ ರಾಜ್ಯದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಹೈಕೋರ್ಟ್ ನಿರಾಕರಿಸಿತ್ತು.

ಹೈಕೋರ್ಟ್‌ನ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅಧಿಸೂಚನೆ ಹೊರಡಿಸಲು ಸ್ಪಷ್ಟ ಕಾರಣವೆಂದರೆ ನಿರ್ದಿಷ್ಟ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ತಡೆಯುವುದು ಎಂದು ಹೇಳಿದೆ.

Himachal Pradesh Floods
ಭೀಕರ: ಭಾರಿ ಮಳೆ, ಪ್ರವಾಹದ ಹೊಡೆತಕ್ಕೆ ಸಿಲುಕಿ Cofferdam ಕುಸಿತ; ಕೊಚ್ಚಿ ಹೋದ ವಾಹನಗಳು! Video

ಆದಾಯವೇ ಸರ್ವಸ್ವವಲ್ಲ..

ಇದೇ ವೇಳೆ ಆದಾಯ ಗಳಿಸುವುದೇ ಸರ್ವಸ್ವವಲ್ಲ ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಿವಿ ಹಿಂಡಿದ ನ್ಯಾಯಾಲಯ ಆದಾಯಕ್ಕಿಂತ ಪ್ರಕೃತಿ ಮುಖ್ಯ ಎಂದು ಮನವರಿಕೆ ಮಾಡಿಕೊಡಲು ನಾವು ಬಯಸುತ್ತೇವೆ. ಪರಿಸರ ಮತ್ತು ಪರಿಸರ ವಿಜ್ಞಾನವನ್ನು ಬಲಿಕೊಟ್ಟು ಆದಾಯ ಗಳಿಸಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠ ಹೇಳಿದೆ.

ಹಲವು ವರ್ಷಗಳಿಂದ ನೈಸರ್ಗಿಕ ವಿಕೋಪ

ಹಿಮಾಚಲ ಪ್ರದೇಶದ ಪರಿಸ್ಥಿತಿ ಹದಗೆಟ್ಟಿದ್ದು, ತೀವ್ರ ಪರಿಸರ ಅಸಮತೋಲನ ಮತ್ತು ಇತರ ಪರಿಸರ ಪರಿಸ್ಥಿತಿಗಳು ಹಲವು ವರ್ಷಗಳಿಂದ ಗಂಭೀರ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಿವೆ. ಹಿಮಾಚಲ ಪ್ರದೇಶದಲ್ಲಿನ ವಿಕೋಪಕ್ಕೆ ಪ್ರಕೃತಿಯನ್ನು ಮಾತ್ರ ದೂಷಿಸುವುದು ಸರಿಯಲ್ಲ.

ಪರ್ವತಗಳು ಮತ್ತು ಮಣ್ಣಿನ ನಿರಂತರ ಭೂಕುಸಿತ, ರಸ್ತೆಗಳಲ್ಲಿ ಭೂಕುಸಿತ, ಮನೆಗಳು ಮತ್ತು ಕಟ್ಟಡಗಳು ಕುಸಿಯುವುದು, ರಸ್ತೆ ಕುಸಿತ ಮುಂತಾದ ವಿದ್ಯಮಾನಗಳಿಗೆ ಪ್ರಕೃತಿಯಲ್ಲ, ಮಾನವರು ಕಾರಣ. ಈ ರಾಜ್ಯವು ಹಿಮಾಲಯ ಪರ್ವತಗಳ ಅಡಿಯಲ್ಲಿ ನೆಲೆಸಿದ್ದು, ಅಲ್ಲಿ ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳುವ ಮೊದಲು ಭೂವಿಜ್ಞಾನಿಗಳು, ಪರಿಸರ ತಜ್ಞರು ಮತ್ತು ಸ್ಥಳೀಯರ ಅಭಿಪ್ರಾಯವನ್ನು ಪಡೆಯುವುದು ಮುಖ್ಯ ಎಂದು ಕೋರ್ಟ್‌ ಆದೇಶಿಸಿದೆ.

ಹಿಮಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮವು ಪ್ರಮುಖ ಆದಾಯದ ಮೂಲವಾಗಿದೆ ಆದರೆ ಪ್ರವಾಸೋದ್ಯಮದ ಅನಿಯಂತ್ರಿತ ಬೆಳವಣಿಗೆಯು ರಾಜ್ಯದ ಪರಿಸರದ ಮೇಲೆ ಪರಿಣಾಮ ಬೀರಿದೆ. ಪ್ರವಾಸೋದ್ಯಮದ ಒತ್ತಡವನ್ನು ನಿಯಂತ್ರಿಸದಿದ್ದರೆ, ಅದು ರಾಜ್ಯದ ಪರಿಸರ ಮತ್ತು ಸಾಮಾಜಿಕ ರಚನೆಯನ್ನು ತೀವ್ರವಾಗಿ ಹಾಳುಮಾಡುತ್ತದೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತ ಈ ಕುರಿತು ಗಮನ ವಹಿಸಬೇಕೆಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com