ಮಧ್ಯ ಪ್ರದೇಶ: ಜಲಪಾತದಲ್ಲಿ ಮುಳುಗಿ 12ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಾವು

ಮೃತ ವಿದ್ಯಾರ್ಥಿಗಳನ್ನು ತನ್ಮಯ್ ಶರ್ಮಾ(ಕಂದಾಯ ಇಲಾಖೆಯ ಪಟ್ವಾರಿ ಅವರ ಮಗ), ಅಶ್ವಿನ್ ಜಾಟ್ ಮತ್ತು ಅಕ್ಷತ್ ಸೋನಿ ಎಂದು ಗುರುತಿಸಲಾಗಿದೆ.
Image used for representational purposes only
ನೀರಿನಲ್ಲಿ ಮುಳುಗಿ ಸಾವು(ಸಾಂದರ್ಭಿಕ ಚಿತ್ರ)
Updated on

ಭೋಪಾಲ್: ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಹತಿನಾಲಾ-ಬಿಲ್ಧಾ ಜಲಪಾತದಲ್ಲಿ ಸ್ನಾನ ಮಾಡುವಾಗ ಎರಡು ವಿಭಿನ್ನ ಶಾಲೆಗಳ ಹನ್ನೆರಡನೇ ತರಗತಿಯ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೃತ ವಿದ್ಯಾರ್ಥಿಗಳನ್ನು ತನ್ಮಯ್ ಶರ್ಮಾ(ಕಂದಾಯ ಇಲಾಖೆಯ ಪಟ್ವಾರಿ ಅವರ ಮಗ), ಅಶ್ವಿನ್ ಜಾಟ್ ಮತ್ತು ಅಕ್ಷತ್ ಸೋನಿ ಎಂದು ಗುರುತಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆಯು ಶುಕ್ರವಾರ ಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತು. ಪರಿಣಾಮವಾಗಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವವರನ್ನು ಹೊರತುಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿತ್ತು.

ನರಸಿಂಗ್‌ಪುರ ಪಟ್ಟಣದ ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಈ ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟುಹೋಗಿದ್ದರು.

Image used for representational purposes only
ಮಧ್ಯ ಪ್ರದೇಶ: ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ

"ಆದರೆ ಮೂವರು ಸಂಜೆಯಾದರೂ ಮನೆಗೆ ಹಿಂತಿರುಗದಿದ್ದಾಗ, ಅವರ ಕುಟುಂಬ ಸಂಜೆ 6 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಶೋಧ ಕಾರ್ಯಾಚರಣೆ ಪ್ರಾರಂಭವಾಯಿತು. ಮೂವರು ಹುಡುಗರು ಸ್ಕೂಟರ್ ಮತ್ತು ಮೋಟಾರ್‌ಸೈಕಲ್ ಸೇರಿದಂತೆ ಎರಡು ದ್ವಿಚಕ್ರ ವಾಹನಗಳಲ್ಲಿ ಮನೆಯಿಂದ ಹೊರಟಿದ್ದರು. ಸ್ಕೂಟರ್‌ನಲ್ಲಿ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದರಿಂದ, ನರಸಿಂಗ್‌ಪುರ ಜಿಲ್ಲಾ ಕೇಂದ್ರ ಕಚೇರಿಯಿಂದ ಸುಮಾರು 40 ಕಿ.ಮೀ ದೂರದಲ್ಲಿ ಕಾಡಿನಲ್ಲಿರುವ ಹತಿನಾಲಾ-ಬಿಲ್ಧಾ ಜಲಪಾತದ ಬಳಿ ಸ್ಕೂಟರ್ ಪತ್ತೆಹಚ್ಚಲಾಯಿತು" ಎಂದು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಬಿ.ಎಲ್. ತ್ಯಾಗಿ ಹೇಳಿದ್ದಾರೆ.

ಜಲಪಾತದ ಬಳಿ ಒಬ್ಬ ಬಾಲಕನ ಶಾಲಾ ಸಮವಸ್ತ್ರ ಮತ್ತು ಶಾಲಾ ಬ್ಯಾಗ್ ಹಾಗೂ ಇತರ ಇಬ್ಬರು ಬಾಲಕರ ಬಟ್ಟೆಗಳು ಪತ್ತೆಯಾದ ನಂತರ, ಗೃಹರಕ್ಷಕರು, ಸ್ಥಳೀಯ ಪೊಲೀಸರು ಮತ್ತು ಡೈವರ್‌ಗಳ ತಂಡ ರಕ್ಷಣಾ ಕಾರ್ಯಾಚರಣೆ ಚರಣೆ ನಡೆಸಿ,

ರಾತ್ರಿ 11 ರಿಂದ ಬೆಳಗ್ಗೆ 1 ಗಂಟೆಯ ನಡುವೆ ಆಳವಾದ ಜಲಪಾತದಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com