4 ತಿಂಗಳ ಹಿಂದೆ ಅಂತರ್ಜಾತಿ ವಿವಾಹ: ಮಗಳ ಮುಂದೆಯೇ ಅಳಿಯನಿಗೆ ಗುಂಡಿಕ್ಕಿ ಕೊಂದ ತಂದೆ!

ದರ್ಭಾಂಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿಎಸ್ಸಿ (ನರ್ಸಿಂಗ್) ಎರಡನೇ ವರ್ಷದ ವಿದ್ಯಾರ್ಥಿ ರಾಹುಲ್ ಕುಮಾರನಿಗೆ ಆತನ ಪತ್ನಿ ತನ್ನು ಪ್ರಿಯಾ ಮುಂದೆಯೇ ಗುಂಡು ಹಾರಿಸಿದ್ದಾನೆ.
Rahul kumar and Tannu
ರಾಹುಲ್ ಮತ್ತು ತನ್ನು
Updated on

ಪಾಟ್ನಾ: ಮಗಳು ಅಂತರ್ಜಾತಿ ವಿವಾಹವಾಗಿರುವುದನ್ನು ಸಹಿಸಲಾಗದೆ. ಆಕೆ ಓದುತ್ತಿದ್ದ ಕಾಲೇಜಿಗೆ ಗನ್‌ ಹಿಡಿದು ಬಂದ ತಂದೆ, ಆತನ ಗಂಡನನ್ನು ಕೊಲೆ ಮಾಡಿದ ಪ್ರಕರಣ ಬಿಹಾರದಲ್ಲಿ ನಡೆದಿದೆ.

ದರ್ಭಾಂಗದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ 25 ವರ್ಷದ ನರ್ಸಿಂಗ್ ವಿದ್ಯಾರ್ಥಿಯೊಬ್ಬನನ್ನು ಆತನ ಮಾವನೇ ಗುಂಡಿಕ್ಕಿ ಕೊಂದಿದ್ದಾನೆ. ದರ್ಭಾಂಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿಎಸ್ಸಿ (ನರ್ಸಿಂಗ್) ಎರಡನೇ ವರ್ಷದ ವಿದ್ಯಾರ್ಥಿ ರಾಹುಲ್ ಕುಮಾರನಿಗೆ ಆತನ ಪತ್ನಿ ತನ್ನು ಪ್ರಿಯಾ ಮುಂದೆಯೇ ಗುಂಡು ಹಾರಿಸಿದ್ದಾನೆ. ತನ್ನು ಅವರ ಕುಟುಂಬ ರಾಹುಲ್ ಜೊತೆ ಅಂತರ್ಜಾತಿ ವಿವಾಹವಾದ ನಂತರ ಅಸಮಾಧಾನಗೊಂಡಿದೆ ಎಂದು ತಿಳಿದುಬಂದಿದೆ.

ತನ್ನು ಅವರ ತಂದೆ ಪ್ರೇಮ್ ಶಂಕರ್ ಝಾ ಅವರನ್ನು ರಾಹುಲ್ ಸಹಪಾಠಿಗಳು ಕೊಲೆಯ ನಂತರ ಥಳಿಸಿದ್ದಾರೆ. ಚಿಕಿತ್ಸೆಗಾಗಿ ಪಾಟ್ನಾಕ್ಕೆ ಕಳುಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್ ಮತ್ತು ತನ್ನು ನಾಲ್ಕು ತಿಂಗಳ ಹಿಂದೆ ವಿವಾಹವಾದರು ಮತ್ತು ಒಂದೇ ಹಾಸ್ಟೆಲ್ ಕಟ್ಟಡದಲ್ಲಿ ಬೇರೆ ಬೇರೆ ಮಹಡಿಗಳಲ್ಲಿ ವಾಸಿಸುತ್ತಿದ್ದರು. ನಿನ್ನೆ ಸಂಜೆ ವ್ಯಕ್ತಿಯೊಬ್ಬರು ರಾಹುಲ್ ಬಳಿ ಬರುವುದನ್ನು ನೋಡಿದ್ದಾಳೆ, ನಂತರ ಅದು ತನ್ನ ತಂದೆ ಎಂದು ತಿಳಿದಿದ್ದಾಗಿ ಆಘಾತಕ್ಕೊಳಗಾದ ತನ್ನು ಹೇಳಿದರು. "ಅವರ ಬಳಿ ಬಂದೂಕು ಇತ್ತು. ಅದು ನನ್ನ ತಂದೆ ಪ್ರೇಮ್ ಶಂಕರ್ ಝಾ. ಅವರು ನನ್ನ ಕಣ್ಣೆದುರೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದರು. ನನ್ನ ಗಂಡ ನನ್ನ ಮಡಿಲಿಗೆ ಬಿದ್ದನು ಎಂದು ಹೇಳಿದ್ದಾರೆ.

Rahul kumar and Tannu
ಮತಾಂತರ, ಮದುವೆಗೆ ನಿರಾಕರಣೆ; ಕತ್ತು ಸೀಳಿ Bhagyashree ಯನ್ನು ಹತ್ಯೆ ಮಾಡಿದ Sheikh Raees!

ತನ್ನ ತಂದೆ ರಾಹುಲ್‌ಗೆ ಗುಂಡು ಹಾರಿಸಿದರು, ಆದರೆ ನನ್ನ ಇಡೀ ಕುಟುಂಬವು ಪಿತೂರಿಯಲ್ಲಿ ಭಾಗಿಯಾಗಿದೆ ಎಂದು ಅವರು ಹೇಳಿದರು. "ನಾವು ನ್ಯಾಯಾಲಯಕ್ಕೂ ಹೋಗಿ ನನ್ನ ತಂದೆ ಮತ್ತು ನನ್ನ ಸಹೋದರರಿಂದ ನನಗೆ ಮತ್ತು ನನ್ನ ಗಂಡನಿಗೆ ಅಪಾಯವಿರುವುದಾಗಿ ಹೇಳಿದ್ದೇವು ಎಂದು ತನ್ನು ತಿಳಿಸಿದ್ದಾರೆ. ಗುಂಡಿನ ದಾಳಿಯ ನಂತರ, ರಾಹುಲ್‌ನ ಸ್ನೇಹಿತರು ಮತ್ತು ಇತರ ಹಾಸ್ಟೆಲ್‌ನವರು ಝಾಗೆ ಥಳಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು.

ಪ್ರಾಥಮಿಕ ತನಿಖೆಗಳ ಪ್ರಕಾರ, ಮೃತ ವಿದ್ಯಾರ್ಥಿ ಅದೇ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇದರಿಂದ ಹುಡುಗಿಯ ತಂದೆ ಕೋಪಗೊಂಡು ಕೊಂದಿರುವುದು ಬೆಳಕಿಗೆ ಬಂದಿದೆ ಎಂದು ದರ್ಭಾಂಗದ SSP ಜಗುನಾಥ್ ರೆಡ್ಡಿ ಜಲಾರೆಡ್ಡಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com