
ಲಖನೌ: ಪತ್ರಕರ್ತರೊಬ್ಬರ ಹತ್ಯೆ ಮತ್ತಿತರ ಅಪರಾಧಗಳಲ್ಲಿ ಬೇಕಾಗಿದ್ದ ಇಬ್ಬರು ವಾಟೆಂಡ್ ಕ್ರಿಮಿನಲ್ ಗಳನ್ನು ಉತ್ತರ ಪ್ರದೇಶದ ಪೊಲೀಸರು ಎನ್ ಕೌಂಟರ್ ನಲ್ಲಿ ಫಿನಿಶ್ ಮಾಡಿದ್ದಾರೆ. ವಿಶೇಷ ಕಾರ್ಯ ಪಡೆ (STF)ಮತ್ತು ಸೀತಾಪುರದ ಸ್ಥಳೀಯ ಪೊಲೀಸರ ಜಂಟಿ ತಂಡವೊಂದು ಕ್ರಿಮಿನಲ್ ಹಿನ್ನೆಲೆಯ ಇಬ್ಬರು ಸಹೋದರರನ್ನು ಗುರುವಾರ ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಆದರೆ, ದಿವಂಗತ ಪತ್ರಕರ್ತನ ಪತ್ನಿ ಎನ್ ಕೌಂಟರ್ ವಿರುದ್ಧ ಕಿಡಿಕಾರಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಇಂದು ನಡೆದ ಎನ್ ಕೌಂಟರ್ ಮತ್ತು ಪೊಲೀಸರ ಕಾರ್ಯಾಚರಣೆ ನಮಗೆ ಸಮಾಧಾನ ತಂದಿಲ್ಲ. ಪೊಲೀಸರು ಬಹಿರಂಗಪಡಿಸಿದ ಎಲ್ಲವೂ ಕಟ್ಟುಕಥೆಯಾಗಿದ್ದು, ಅದರಿಂದ ನಮಗೆ ತೃಪ್ತಿಯಾಗಿಲ್ಲ ಎಂದಿದ್ದಾರೆ.
ಪತ್ರಕರ್ತ ರಾಘವೇಂದ್ರ ಬಾಜಪೈ ಅವರ ಹತ್ಯೆ ಪ್ರಕರಣದಲ್ಲಿ ಬೇಕಾಗಿರುವ ಇಬ್ಬರು ಕ್ರಿಮಿನಲ್ ಗಳು ಹರ್ದೋಯಿ-ಸೀತಾಪುರ ಗಡಿಯಲ್ಲಿರುವ ಸುಳಿವು ಸಿಕ್ಕ ದೊರೆತ ನಂತರ ಎನ್ ಕೌಂಟರ್ ನಡೆಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಅಗರ್ ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೊರೆತ ಮಾಹಿತಿ ಆಧಾರದ ಮೇಲೆ ಎಸ್ ಟಿಎಫ್ ಹಾಗೂ ಸೀತಾಪುರ ಪೊಲೀಸರು ಪಿಸಾವನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬೈಕ್ ನಲ್ಲಿದ್ದ ಆರೋಪಿಗಳಾದ ರಾಜು ತಿವಾರಿ ಮತ್ತು ಆಲಿಯಾಸ್ ರಿಜ್ವಾನ್ ಖಾನ್ ಮತ್ತು ಸಂಜನ್ ತಿವಾರಿ ಆಲಿಯಾಸ್ ಅಕ್ವೀಲ್ ಖಾನ್ ಅವರನ್ನು ಬೈಕ್ ನಿಲ್ಲಿಸಿ ಶರಣಾಗುವಂತೆ ಸೂಚಿಸಿದ್ದೇವು. ಆದರೆ, ಅವರಿಬ್ಬರೂ ಪೊಲೀಸ್ ತಂಡದ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪೊಲೀಸರು ಪ್ರತಿದಾಳಿ ನಡೆಸಿದಾಗ ಅವರಿಬ್ಬರೂ ಹತ್ಯೆಯಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ಹೇಳಿದ್ದಾರೆ.
ಈ ಹಿಂದೆ ಅವರ ಬಂಧನಕ್ಕೆ ತಲಾ ರೂ.1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಮಾರ್ಚ್ 8 ರಂದು ಲಖನೌ ಮತ್ತು ದೆಹಲಿ ರಾಷ್ಟ್ರೀಯ ಹೆದ್ದಾರಿಯ ಹೆಂಪೂರ್ ರೈಲ್ವೆ ಮೇಲ್ಸುತುವೆ ಬಳಿ ಪತ್ರಕರ್ತ ಬಾಜಪೈ ಹತ್ಯೆಯಾಗಿತ್ತು.
Advertisement