
ನವದೆಹಲಿ: ಭಾರತದ ರಫ್ತಿನ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ. 50 ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಗುರುವಾರ ಆಗ್ರಹಿಸಿದ್ದಾರೆ.
ಭಾರತವು ಅಮೆರಿಕದ ಸರಕುಗಳ ಮೇಲೆ ಪ್ರಸ್ತುತ ಶೇ. 17 ರಷ್ಟು ಸುಂಕದ ಬದಲು ಶೇ. 50 ರಷ್ಟು ಸುಂಕ ವಿಧಿಸಬೇಕು ಎಂದು ತರೂರ್ ಕೇಂದ್ರ ಸರ್ಕಾವನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಅಮೆರಿಕದ ಇಂತಹ ಕ್ರಮಗಳಿಂದ ದೇಶವು ಬೆದರಬಾರದು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಯಾವುದೇ ದೇಶವು ಈ ರೀತಿ ಭಾರತಕ್ಕೆ ಬೆದರಿಕೆ ಹಾಕಲು ಬಿಡಬಾರದು ಎಂದು ಅವರು ಶಶಿ ತರೂರ್ ಹೇಳಿದ್ದಾರೆ.
"ನಮ್ಮೊಂದಿಗೆ 90 ಶತಕೋಟಿ ಡಾಲರ್‌ಗಳ ವ್ಯಾಪಾರ ಇರುವುದರಿಂದ. ಅಮೆರಿಕದ ಈ ಕ್ರಮ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಮತ್ತು ಎಲ್ಲವೂ ಶೇ. 50 ರಷ್ಟು ಹೆಚ್ಚು ದುಬಾರಿಯಾದರೆ, ಖರೀದಿದಾರರು ಭಾರತೀಯ ವಸ್ತುಗಳನ್ನು ಏಕೆ ಖರೀದಿಸಬೇಕು ಎಂದು ಯೋಚಿಸುತ್ತಾರೆ?... ಅವರು ಹೀಗೆ ಮಾಡಿದರೆ, ನಾವು ಅಮೆರಿಕದ ರಫ್ತಿನ ಮೇಲೆ ಶೇ 50 ರಷ್ಟು ಸುಂಕ ವಿಧಿಸಬೇಕು... ಯಾವುದೇ ದೇಶವು ನಮ್ಮನ್ನು ಈ ರೀತಿ ಬೆದರಿಸಬಾರದು" ಎಂದು ಹೇಳಿದ್ದಾರೆ.
"ಅಮೆರಿಕನ್ ಸರಕುಗಳ ಮೇಲಿನ ನಮ್ಮ ಸರಾಸರಿ ಶೇ. 17 ರಷ್ಟು ಸುಂಕವನ್ನು ಏಕೆ ಮುಂದುವರೆಸಬೇಕು? ನಾವು ಅದನ್ನು ಶೇ. 50ಕ್ಕೆ ಹೆಚ್ಚಿಸಬೇಕು... ನಾವು ಅವರನ್ನು ಕೇಳಬೇಕು, ಅವರು ನಮ್ಮ ಸಂಬಂಧವನ್ನು ಗೌರವಿಸುವುದಿಲ್ಲವೇ? ಭಾರತ ಅವರಿಗೆ ಮುಖ್ಯವಲ್ಲದಿದ್ದರೆ, ಅವರು ನಮಗೂ ಮುಖ್ಯವಲ್ಲ" ಎಂದು ಶಶಿ ತರೂರ್ ಕಿಡಿ ಕಾರಿದ್ದಾರೆ.
Advertisement