
ಲಖನೌ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶುಕ್ರವಾರ ಬೆಳಗ್ಗೆ 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್, ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಪ್ರಯಾಣಿಕರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಬಾರಾಬಂಕಿಯಿಂದ ಹೈದರ್ ಘರ್ ಗೆ ತೆರಳುತ್ತಿತ್ತು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ, ಹರ್ಖ್ ಚೌರಾಹಾ ಬಳಿ, ಇದ್ದಕ್ಕಿದ್ದಂತೆ ಒಂದು ಪ್ರಾಣಿ, ಬಸ್ ಗೆ ಅಡ್ಡ ಬಂದಿದೆ. ಅದನ್ನು ತಪ್ಪಿಸುವ ಪ್ರಯತ್ನದಲ್ಲಿ, ಚಾಲಕ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮರ ಬಸ್ ಮೇಲೆ ಉರುಳಿ ಬಿದಿದ್ದೆ.
ಮರವು ತುಂಬಾ ದೊಡ್ಡದಾಗಿದ್ದರಿಂದ ಬಸ್ಸಿನ ಸಂಪೂರ್ಣ ಛಾವಣಿ ನಜ್ಜುಗುಜ್ಜಾಗಿದೆ. ಹತ್ತಿರದ ನಿವಾಸಿಗಳು ಮತ್ತು ದಾರಿಹೋಕರು ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಸ್ ಚಾಲಕ ಸಂತೋಷ್ ಸೋನಿ ಮತ್ತು ಬರಾಬಂಕಿಯ ಇನ್ಹೌನಾದ ರಕೀಬುಲ್ ನಿಶಾ(55) ಸೇರಿದಂತೆ ಐವರು ಮೃತಪಟ್ಟಿದ್ದಾರೆ.
Advertisement