ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿ, ಮೋಸ್ಟ್‌ ವಾಂಟೆಡ್‌ ಶಸ್ತ್ರಾಸ್ತ್ರ ಪೂರೈಕೆದಾರ 'ಸಲೀಂ ಪಿಸ್ತೂಲ್' ಬಂಧನ

ಸಲೀಂ ಪಿಸ್ತೂಲ್‌ ಕಳೆದ ಹಲವಾರು ವರ್ಷಗಳಿಂದ ‌ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹ್ಯಾಂಗ್, ಹಾಶಿಂ ಬಾಬಾ ಸೇರಿದಂತೆ ಅನೇಕ ದರೋಡೆಕೋರರಿಗೆ ಪಾಕಿಸ್ತಾನದಿಂದ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನ ಪೂರೈಸುತ್ತಿದ್ದ.
Salim Pistol
ಸಲೀಂ ಪಿಸ್ತೂಲ್
Updated on

ಕಠ್ಮಂಡು: ಭಾರತಕ್ಕೆ ಬೇಕಿದ್ದ ಮೋಸ್ಟ್‌ ವಾಂಟೆಡ್‌, ಶಸ್ತ್ರಾಸ್ತ್ರ ಪೂರೈಕೆದಾರ ಸಲೀಂ ಅಲಿಯಾಸ್ ʻಸಲೀಂ ಪಿಸ್ತೂಲ್‌ʼನನ್ನು ನೇಪಾಳದಲ್ಲಿ ಬಂಧಿಸಲಾಗಿದೆ . ನೇಪಾಳದಲ್ಲಿ ಅಡಗಿದ್ದ ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಭದ್ರತಾ ಸಂಸ್ಥೆಗಳ ತಂಡ ಪ್ರಮುಖ ಕಾರ್ಯಾಚರಣೆಯಲ್ಲಿ ಬಂಧಿಸಿದೆ.

ಸಲೀಂ ಪಿಸ್ತೂಲ್‌ ಕಳೆದ ಹಲವಾರು ವರ್ಷಗಳಿಂದ ‌ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹ್ಯಾಂಗ್, ಹಾಶಿಂ ಬಾಬಾ ಸೇರಿದಂತೆ ಅನೇಕ ದರೋಡೆಕೋರರಿಗೆ ಪಾಕಿಸ್ತಾನದಿಂದ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನ ಪೂರೈಸುತ್ತಿದ್ದ. ಅಲ್ಲದೇ ಈತ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಡಿ-ಕಂಪನಿಯೊಂದಿಗೂ ಸಂಪರ್ಕ ಹೊಂದಿದ್ದಎಂಬ ರಹಸ್ಯವನ್ನ ತನಿಖಾಧಿಕಾರಿಗಳು ಸಾಕ್ಷಿ ಸಮೇತ ಬಯಲಿಗೆಳೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಧು ಮೂಸೆವಾಲಾ, ಬಾಬಾ ಸಿದ್ದಿಕಿ ಕೊಲೆ ಪ್ರಕರಣ ಸೇರಿದಂತೆ ಪ್ರಮುಖ ಅಪರಾಧಗಳಲ್ಲಿ ಸಲೀಂ ಪಿಸ್ತೂಲ್‌ನ ಹೆಸರು ಕಾಣಿಸಿಕೊಂಡಿದೆ. ಅಲ್ಲದೇ ಸಿಧು ಮೂಸೆವಾಲಾ ಹಂತಕರ ಪೈಕಿ ಓಬ್ಬನಿಗೆ ಈತನೇ ಮಾರ್ಗದರ್ಶಕನಾಗಿದ್ದ ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿ.

1972ರಲ್ಲಿ ದೆಹಲಿಯ ಸೀಲಾಂಪುರದಲ್ಲಿ ಜನಿಸಿದ ಶೇಖ್ ಸಲೀಂ ಆರ್ಥಿಕ ಸಮಸ್ಯೆಯಿಂದಾಗಿ 8ನೇ ತರಗತಿಗೇ ಓದನ್ನು ಬಿಟ್ಟು ಟ್ಯಾಕ್ಸಿ ಚಾಲಕನಾದ. ಆ ನಂತರ 2018ರಲ್ಲಿ ದೆಹಲಿಯಲ್ಲಿ ಅರೆಸ್ಟ್‌ ಆದ ಬಳಿಕ ಸಲೀಂ ವಿದೇಶಕ್ಕೆ ಪರಾರಿಯಾಗಿದ್ದ ಅಲ್ಲಿಂದ ಶಸ್ತ್ರಾಸ್ತ್ರ ಪೂರೈಕೆ ಜಾಲ ನಿರ್ವಹಿಸಲು ಪ್ರಾರಂಭಿಸಿದ್ದ.

Salim Pistol
Parking ವಿಚಾರಕ್ಕೆ ಗಲಾಟೆ: ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಬರ್ಬರ ಹತ್ಯೆ, ಇಬ್ಬರ ಬಂಧನ; Video

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com