
ಅಹಮದಾಬಾದ್: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (MGNREGA) ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಈ ಸಂಬಂದ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಅಲ್ಲದೆ 4 ಕೋಟಿ ರೂ.ಗಳಿಗಿಂತ ಹೆಚ್ಚಿನ ವೇತನ ಪಾವತಿಯಾಗಿಲ್ಲ ಎಂದು ಹೇಳಿದೆ.
ಗುಜರಾತ್‌ನ ಪ್ರಮುಖ ಗ್ರಾಮೀಣ ಉದ್ಯೋಗ ಯೋಜನೆಯಲ್ಲಿನ ಭ್ರಷ್ಟಾಚಾರವು ಈಗ ವದಂತಿಗಳಿಂದ ಅಧಿಕೃತ ದಾಖಲೆಗಳಿಗೆ ಸ್ಥಳಾಂತರಗೊಂಡಿದೆ. ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ದಾಹೋದ್ ಜಿಲ್ಲೆಯಲ್ಲಿ MNREGA ಅಕ್ರಮಗಳಿಂದ ತುಂಬಿದೆ ಎಂದು ಒಪ್ಪಿಕೊಂಡಿದ್ದು ಸರ್ಕಾರಿ ಅಧಿಕಾರಿಗಳಾದ BM ಪಟೇಲ್, SV ಬಂಬ್ರೋಲಿಯಾ ಮತ್ತು JG ರಾವತ್ ವಿರುದ್ಧ ಈಗಾಗಲೇ ಮೂರು ಪ್ರತ್ಯೇಕ FIR ಗಳನ್ನು ದಾಖಲಾಗಿದೆ.
ರಾಜಕೀಯವಾಗಿ ಸಂಪರ್ಕ ಹೊಂದಿರುವ ವ್ಯಕ್ತಿಗಳಿಂದ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪ ಹೆಚ್ಚುತ್ತಿದ್ದು ಕಾಂಗ್ರೆಸ್ ಸಂಸದ ಶಕ್ತಿಸಿನ್ಹ ಗೋಹಿಲ್ ಅಕ್ರಮಗಳ ಪ್ರಶ್ನೆ ಎತ್ತಿದ್ದರು. ಕೆಲವು ತಿಂಗಳ ಹಿಂದೆ, ಗುಜರಾತ್ ಸಚಿವ ಬಚ್ಚು ಖಬಾದ್ ಅವರ ಪುತ್ರರಾದ ಬಲವಂತ್ ಮತ್ತು ಕಿರಣ್ ಖಬಾದ್ ನನ್ನು ದೇವಗಢ್ ಬರಿಯಾ ಮತ್ತು ಧನಪುರ ತಾಲೂಕುಗಳಲ್ಲಿ MNREGA ನಿಧಿಯಿಂದ 71 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಂಧಿಸಲಾಗಿತ್ತು. ಪ್ರಸ್ತುತ ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದಾರೆ.
ರಾಜ್ಯಸಭೆಯಲ್ಲಿ ನನ್ನ ಪ್ರಶ್ನೆಗೆ ಉತ್ತರವಾಗಿ, ಕೇಂದ್ರ ಸರ್ಕಾರವು ಗುಜರಾತ್‌ನಲ್ಲಿ MNREGA ನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಒಪ್ಪಿಕೊಂಡಿದೆ. ಬಿಜೆಪಿ ನಾಯಕರು ಮತ್ತು ಅವರ ಬೆಂಬಲಿಗರು ಕೋಟ್ಯಂತರ ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ದಾಹೋದ್‌ನಲ್ಲಿ ಮಾತ್ರ, ಮೂವರು ಸರ್ಕಾರಿ ಅಧಿಕಾರಿಗಳ ವಿರುದ್ಧ FIR ದಾಖಲಿಸುವಂತೆ ಒತ್ತಾಯಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಮುಖ್ಯಮಂತ್ರಿಗಳು ಸರಪಂಚ್‌ಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಆದರೆ ತಮ್ಮದೇ ಸಂಪುಟದ ಮತ್ತು ದೊಡ್ಡ ನಾಯಕರು ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಗೋಹಿಲ್ ಹೇಳಿದ್ದಾರೆ.
ರಾಜ್ಯಸಭೆಗೆ ನೀಡಿದ ದತ್ತಾಂಶದಲ್ಲಿ ಗುಜರಾತ್‌ನಲ್ಲಿ MNREGA ವ್ಯಾಪ್ತಿಯಲ್ಲಿ ಸ್ಥಿರವಾದ ಕುಸಿತವನ್ನು ತೋರಿಸುತ್ತದೆ. 2022-23ರಲ್ಲಿ 0.16 ಕೋಟಿ ಫಲಾನುಭವಿಗಳಿಂದ 2023-24ರಲ್ಲಿ 0.15 ಕೋಟಿಗೆ ಮತ್ತು 2024-25ರಲ್ಲಿ ಕೇವಲ 0.13 ಕೋಟಿಗೆ ಇಳಿದಿದೆ. ಇದಲ್ಲದೆ, ಜುಲೈ 28, 2025ರ ಹೊತ್ತಿಗೆ, ರಾಜ್ಯವು 4.37 ಕೋಟಿ ರೂ.ಗಳ ವೇತನ ಬಾಕಿ ಉಳಿಸಿಕೊಂಡಿದೆ.
Advertisement