
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿ ಮುಗಿಯುತ್ತಿದ್ದಂತೆಯೇ ಭಾರತದ ವೇಗಿ ಆಕಾಶ್ ದೀಪ್ ಇದೀಗ ದುಬಾರಿ ಬೆಲೆಯ ಕಾರು ಖರೀದಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಗೆಲುವಿನಲ್ಲಿ ಆಕಾಶ್ ದೀಪ್ ಪ್ರಮುಖ ಪಾತ್ರ ವಹಿಸಿದ್ದರು. ಮೂರು ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದ ಆಕಾಶ್ ದೀಪ್, ಓವೆಲ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಚೊಚ್ಚಲ ಬಾರಿಗೆ ಅರ್ಧ ಶತಕ ಬಾರಿಸುವುದರೊಂದಿಗೆ ಗಮನ ಸೆಳೆದಿದ್ದರು.
ಇದೀಗ ಕಪ್ಪು ಬಣ್ಣದ ಟೊಯೊಟಾ ಫಾರ್ಚೂನರ್ ಕಾರನ್ನು ಆಕಾಶ್ ದೀಪ್ ಖರೀದಿಸಿದ್ದಾರೆ.
ಹೊಸ ಕಾರಿನೊಂದಿಗೆ ತನ್ನ ಕುಟುಂಬದವರ ಜೊತೆಗಿರುವ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಅವರು ಹಂಚಿಕೊಂಡಿದ್ದಾರೆ. ಕನಸು ನನಸಾಗಿದೆ. ಕುಟುಂಬದ ಪ್ರಮುಖರಾದವರೊಂದಿಗೆ ಕೀಗಳನ್ನು ಸ್ವೀಕರಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಕಾರಿನ ಬೆಲೆ ರೂ. 62 ಲಕ್ಷ ಆಗಿದೆ.
ಆಕಾಶ್ ದೀಪ್ ಫೋಸ್ಟ್ ವೈರಲ್ ಆಗುತ್ತಿದ್ದು, ಭಾರತದ ಟಿ-20 ನಾಯಕ ಸೂರ್ಯ ಕುಮಾರ್ ಯಾದವ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ.
Advertisement