
ನವದೆಹಲಿ: ಭಾರತ ಮೇಲೆ ವಿಧಿಸಲಾಗಿರುವ ತೀವ್ರ ಸುಂಕದ ಬೆದರಿಕೆಗಳ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಗುರಿಯಾಗಿಸಿಕೊಂಡು 'ಸಬ್ಕೆ ಬಾಸ್' (ಜಗತ್ತಿನ ದೊಡ್ಡಣ್ಣ) ಎಂದು ಬಣ್ಣಿಸಿಕೊಳ್ಳುವ ಅಮೆರಿಕಕ್ಕೆ ಜಾಗತಿಕ ಶಕ್ತಿಯಾಗಿ ಭಾರತದ ಪ್ರಗತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಭಾರತದಲ್ಲಿ ತಯಾರಾದ ಉತ್ಪನ್ನಗಳು ಬೇರೆಡೆ ತಯಾರಾಗುವುದಕ್ಕಿಂತ ಹೆಚ್ಚು ದುಬಾರಿಯಾಗುವಂತೆ ನೋಡಿಕೊಳ್ಳಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಬೆಲೆಗಳು ಹೆಚ್ಚಾದರೆ ಜಾಗತಿಕ ಖರೀದಿದಾರರನ್ನು ತಡೆಯಬಹುದು. ಈ ಪ್ರಯತ್ನ ನಡೆಯುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಈಗ ವಿಶ್ವದ ಯಾವುದೇ ಶಕ್ತಿಯು ಭಾರತವು ಪ್ರಮುಖ ಜಾಗತಿಕ ಶಕ್ತಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಂಗ್ ಪೂರ್ಣ ವಿಶ್ವಾಸದಿಂದ ಪ್ರತಿಪಾದಿಸಿದರು.
ಭಾರತ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕೆ ಪ್ರತೀಕಾರವಾಗಿ ಟ್ರಂಪ್ ಇತ್ತೀಚೆಗೆ ಭಾರತೀಯ ಆಮದುಗಳ ಮೇಲೆ ಶೇ.25 ರಷ್ಟು ಸುಂಕವನ್ನು ವಿಧಿಸಿದ್ದು ನಂತರ ಹೆಚ್ಚುವರಿಯಾಗಿ ಶೇ.25 ರಷ್ಟು ದಂಡ ವಿಧಿಸಿದರು. ಅಮೆರಿಕದ ಅಧ್ಯಕ್ಷರು ಮತ್ತಷ್ಟು ಸುಂಕ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಭಾರತ ರಷ್ಯಾದೊಂದಿಗಿನ ವ್ಯವಹಾರಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ಭಾರತದ್ದು ಸತ್ತ ಆರ್ಥಿಕತೆಯನ್ನು ಎಂದು ಹೇಳಿದ್ದರು. ನವದೆಹಲಿ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ ಎಂಬ ಅಮೆರಿಕ ಆರೋಪಿಸಿತ್ತು.
ಪ್ರಸ್ತುತ ಪರಿಸ್ಥಿತಿಯು ಭಾರತದ ರಕ್ಷಣಾ ರಫ್ತಿನ ಮೇಲೆ ಪರಿಣಾಮ ಬೀರಿಲ್ಲ. ಅದು ನಿರಂತರವಾಗಿ ಬೆಳೆಯುತ್ತಿದೆ ಎಂದು ಸಿಂಗ್ ಹೇಳಿದರು. ದೇಶವು ಈಗ ರೂ.24,000 ಕೋಟಿಗಿಂತ ಹೆಚ್ಚಿನ ಮೌಲ್ಯದ ರಕ್ಷಣಾ ವಸ್ತುಗಳನ್ನು ರಫ್ತು ಮಾಡುತ್ತಿದೆ. ಇದು ಭಾರತದ ರಕ್ಷಣಾ ಕ್ಷೇತ್ರದ ಶಕ್ತಿ ಮತ್ತು 'ನವ ಭಾರತದ' ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು. ರಫ್ತುಗಳು ವರ್ಷದಿಂದ ವರ್ಷಕ್ಕೆ ಸ್ಥಿರವಾಗಿ ಏರುತ್ತಿವೆ ಎಂದು ಸಿಂಗ್ ಹೇಳಿದರು.
Advertisement