'ಡಾಗ್ ಬಾಬು' ನಂತರ ವಸತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ 'ಕ್ಯಾಟ್‌' ಕುಮಾರ್‌!

ಅರ್ಜಿದಾರರ ಹೆಸರು ಕ್ಯಾಟ್ ಕುಮಾರ್, ತಂದೆ ಕ್ಯಾಟಿ ಬಾಸ್ ಮತ್ತು ತಾಯಿ ಕ್ಯಾಟಿಯಾ ದೇವಿ ಎಂದು ಉಲ್ಲೇಖಿಸಲಾಗಿದೆ.
Cat kumar
'ಕ್ಯಾಟ್‌' ಕುಮಾರ್‌
Updated on

ಪಾಟ್ನಾ: 'ಡಾಗ್ ಬಾಬು', 'ಸೋನಾಲಿಕಾ ಟ್ರ್ಯಾಕ್ಟರ್' ಮತ್ತು 'ಡೊನಾಲ್ಡ್ ಟ್ರಂಪ್' ನಂತರ, ಬಿಹಾರದಲ್ಲಿ ಮತ್ತೊಂದು ನಕಲಿ ಅರ್ಜಿಯ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಬೆಕ್ಕು ವಸತಿ ಪ್ರಮಾಣಪತ್ರವನ್ನು ಕೋರಿ ಅರ್ಜಿ ಸಲ್ಲಿಸಿದೆ. ಈ ನಕಲಿ ಅರ್ಜಿಗಳ ಬಗ್ಗೆ ತನಿಖೆ ನಡೆಯುತ್ತಿರುವ ನಡುವೆಯೇ ಇದೀಗ ಕ್ಯಾಟ್‌ ಕುಮಾರ್‌ ಹೆಸರಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಬೆಕ್ಕಿನ ಹೆಸರಿನಲ್ಲಿ ವಸತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿರುವ ಘಟನೆ ಬಿಹಾರದ ರೋಹ್ತಾಸ್‌ನಲ್ಲಿ ನಡೆದಿದೆ. ಅರ್ಜಿದಾರರ ಹೆಸರು ಕ್ಯಾಟ್ ಕುಮಾರ್, ತಂದೆ ಕ್ಯಾಟಿ ಬಾಸ್ ಮತ್ತು ತಾಯಿ ಕ್ಯಾಟಿಯಾ ದೇವಿ ಎಂದು ಉಲ್ಲೇಖಿಸಲಾಗಿದೆ.

ಈ ಸಂಬಂಧ ರೋಹ್ತಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಿತಾ ಸಿಂಗ್ ಅವರು ನಸ್ರಿಗಂಜ್ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ದ ಪ್ರಕರಣ ದಾಖಲಿಸಲು ಕಂದಾಯ ಅಧಿಕಾರಿ ಕೌಶಲ್ ಪಟೇಲ್‌ಗೆ ಸೂಚಿಸಲಾಗಿದ್ದು ತನಿಖೆ ನಡೆಯುತ್ತಿದೆ. ಒಂದೇ ವಾರದಲ್ಲಿ ಎರಡು ರೀತಿಯ ನಕಲಿ ಅರ್ಜಿಗಳು ಸಲ್ಲಿಕೆಯಾದ, ಕೆಲವೇ ವಾರಗಳ ನಂತರ ಕ್ಯಾಟ್‌ ಕುಮಾರ್‌ ಅರ್ಜಿ ಬಂದಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ನಸರಿಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ದೃಢಪಡಿಸಿದರು.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಸದ್ಯ ದೂರು ದಾಖಲಾಗಿದ್ದು, ಆರೋಪಿಗಳ ಬಂಧನವಾದ ಬಳಿಕ ಇತರೆ ಆರೋಪಗಳಡಿ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

Cat kumar
'ಡಾಗ್ ಬಾಬು s/o ಕುಟ್ಟ ಬಾಬು': ನಾಯಿಗೂ ನಿವಾಸಿ ಪ್ರಮಾಣಪತ್ರ!; ಬಿಹಾರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಸಿಡಿಮಿಡಿ

ಅರ್ಜಿದಾರರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಅವರು ಪ್ರತಿಪಾದಿಸಿದರು. ಜುಲೈ 29 ರಂದು ನಾಯಿಯ ಫೋಟೋದೊಂದಿಗೆ ಅರ್ಜಿ ಸಲ್ಲಿಸಲಾಗಿದ್ದರೂ, ಆಗಸ್ಟ್ 10 ರಂದು ಸಂಬಂಧಪಟ್ಟ ಪ್ರಾಧಿಕಾರವು ಅದನ್ನು ಗಮನಿಸಿದೆ ಎಂದು ಉದಿತಾ ಸಿಂಗ್ ಹೇಳಿದರು. ಸಿಂಗ್ ಅವರ ನಿರ್ದೇಶನದ ಮೇರೆಗೆ, ನಸರಿಗಂಜ್ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 132, 61 (ಬಿ), 318 (4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವ್ಯವಸ್ಥೆಯು ಅರ್ಜಿಯನ್ನು ಹೇಗೆ ಸ್ವೀಕರಿಸಿದೆ ಮತ್ತು ಯಾರು ಹೊಣೆಗಾರರು ಎಂಬುದನ್ನು ತಿಳಿಯಲು ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ರಾಹುಲ್ ಕುಮಾರ್ ಹೇಳಿದರು.

ಬಿಹಾರ ಸಾರ್ವಜನಿಕ ಸೇವಾ ಹಕ್ಕು ಕಾಯ್ದೆಯಡಿಯಲ್ಲಿ ರಾಜ್ಯದ ನಿವಾಸಿಗಳು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಸಲ್ಲಿಸಿದ ಪ್ರತಿಯೊಂದು ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಯು ಮೌಲ್ಯಮಾಪನ ಮಾಡುತ್ತಾರೆ.

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾದಾಗಿನಿಂದ, ವಸತಿ ಪ್ರಮಾಣಪತ್ರ ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದೆ. ಚುನಾವಣಾ ಆಯೋಗವು ಸ್ವೀಕರಿಸುವ 11 ದಾಖಲೆಗಳ ಪೈಕಿ ಇದೂ ಒಂದು ಆಗಿರುವುದು ಕಾರಣವಾಗಿರಬಹುದು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com