
ನವದೆಹಲಿ: ಇತ್ತೀಚಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಅಭಿಮಾನಿ ಜೊತೆಗೆ ಸಮಾಜವಾದಿ ಪಕ್ಷದ ರಾಜ್ಯಸಭೆ ಸದಸ್ಯೆ ಹಾಗೂ ನಟಿ ಜಯ ಬಚ್ಚನ್ ವರ್ತಿಸಿದ ರೀತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಅತ್ಯಂತ ಸವಲತ್ತು ಪಡೆದ ಹಾಗೂ ಅತ್ಯಂತ ಹಾಳಾದ ಮಹಿಳೆ ಎಂದು ಟೀಕಿಸಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಪತ್ನಿ ಎಂದು ಜನ ಆಕೆಯ ಕೋಪ, ಅಜ್ಞಾನವನ್ನು ಸಹಿಸಿಕೊಂಡಿದ್ದಾರೆ. ಈ ಸಮಾಜವಾದಿ ಪಕ್ಷದ ಟೋಪಿ ನೋಡಿ, ಕೋಳಿ ತಲೆ ಕಂಡ ಹಾಗೇ ಕಾಣುತ್ತದೆ, ಇವಳೂ ಒಬ್ಬ ಜಂಭದ ಕೋಳಿ , ಎಂಥಹ ನಾಚಿಕೆಗೇಡು ಎಂದು ಜಯಾ ಬಚ್ಚನ್ ವರ್ತನೆಯನ್ನು ಟೀಕಿಸಿದ್ದಾರೆ.
ಅನೇಕ ನೆಟ್ಟಿಗರು ಕೂಡಾ ಜಯಾ ಬಚ್ಚನ್ ವರ್ತನೆಗೆ ಕಿಡಿಕಾರಿದ್ದಾರೆ.
ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂಬ ಹೆಸರು ನೀಡಿದ್ದನ್ನು ಪ್ರಶ್ನಿಸುವ ಮೂಲಕ ಜಯಾ ಬಚ್ಚನ್ ಇತ್ತೀಚೆಗೆ ವಿವಾದ ಸೃಷ್ಟಿಸಿದ್ದರು.
Advertisement