
ಮುಂಬೈ: ಹವಾಮಾನ ವೈಫರೀತ್ಯದಿಂದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಆಗುವಾಗ ಅದರ ಹಿಂಭಾಗ ರನ್ ವೇಗೆ ಸ್ಪರ್ಶಿಸಿರುವ ಘಟನೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
ಕಡಿಮೆ ಎತ್ತರದಲ್ಲಿ ವಿಮಾನ ಹಾರಾಟ ಮಾಡುವಾಗ ಈ ಘಟನೆ ನಡೆದಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೋ ತಿಳಿಸಿದೆ.
ಬ್ಯಾಂಕಾಂಕ್ ನಿಂದ ಮುಂಬೈಗೆ ಆಗಮಿಸಿದ ಇಂಡಿಗೋದ ಏರ್‌ಬಸ್ ಎ-321 ವಿಮಾನ ಮಳೆಯ ಕಾರಣ ರನ್‌ವೇಯಲ್ಲಿ ಮೊದಲು ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಈ ವೇಳೆ ವಿಮಾನವನ್ನು ಟೇಕ್ ಆಫ್ ಮಾಡುವಾಗ ಹಿಂಭಾಗ ರನ್‌ವೇಯನ್ನು ಸ್ಪರ್ಶಿಸಿದೆ. ಆದರೆ ಪೈಲಟ್ ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ನಿಯಮಗಳ ಪ್ರಕಾರ, ಅಗತ್ಯ ತಪಾಸಣೆ, ದುರಸ್ತಿ ಮತ್ತು ನಿಯಂತ್ರಕ ಅನುಮತಿ ಪಡೆದ ನಂತರವೇ ಸಂಬಂಧಪಟ್ಟ ವಿಮಾನವನ್ನು ಹಾರಿಸಲಾಗುತ್ತದೆ ಎಂದು ಏರ್ ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಸುರಕ್ಷತೆಯು ತನ್ನ ಪ್ರಮುಖ ಆದ್ಯತೆಯಾಗಿದೆ ಎಂದು IndiGo ಹೇಳಿದೆ. ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಘಟನೆಯಿಂದ ಪ್ರಯಾಣಿಕರಿಗೆ ಆದ ಅನಾನುಕೂಲತೆ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದೆ.
Advertisement