
ಬಾಲಿವುಡ್‌ನ ಸೂಪರ್ ಹಿಟ್ 'ಬಡಿ ಮುಷ್ಕಿಲ್' ಹಾಡಿಗೆ ಇಬ್ಬರು ಮಹಿಳೆಯರು ನೃತ್ಯ ಮಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಅವರಿಂದ ಅಲ್ಲ. ಬದಲಾಗಿ ಶೋ ಕದ್ದ ಕ್ಯಾಮರಾ ಮ್ಯಾನ್ ನಿಂದಲೇ ಹೆಚ್ಚಿನ ವೈರಲ್ ಆಗಿದೆ.
ಹೌದು, ಯುವತಿಯರು ಹಾಡಿಗೆ ತಕ್ಕಂತೆ ಡ್ಯಾನ್ಸ್ ಮಾಡುತ್ತಿದ್ದರೆ ಅವರನ್ನು ಕ್ಯಾಮರಾ ಮ್ಯಾನ್ ಸೆರೆ ಹಿಡಿಯುತ್ತಿರುತ್ತಾನೆ. ಯುವತಿಯರು ಹೆಜ್ಜೆ ಹಾಕಿದ್ದಂತೆ ಆತನು ಕೂಡಾ ಹೆಜ್ಜೆ ಹಾಕುತ್ತಾನೆ. ಸ್ವಲ್ಪವೂ ಹೆಚ್ಚು ಕಡಿಮೆ ಆಗದಂತೆ ಥೇಟ್ ಅವರಂತೆಯೇ ಡ್ಯಾನ್ಸ್ ಮಾಡಿದ್ದಾನೆ.
ಇದು ನೆಟ್ಟಿಗರನ್ನು ಆಕರ್ಷಿಸಿದ್ದು, ಬಹುತೇಕ ನೆಟ್ಟಿಗರು ಫಿದಾ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸ್ಯುಜೊ ಫಿಲ್ಮ್ ಖಾತೆಯಿಂದ ಹಂಚಿಕೊಂಡಿರುವ ವೀಡಿಯೊ ಈಗಾಗಲೇ ಸುಮಾರು 8 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ. ಯುವತಿಯರಿಗಿಂತ ಕ್ಯಾಮರಾ ಮ್ಯಾನ್ ಚೆನ್ನಾಗಿ ನೃತ್ಯ ಮಾಡಿರುವುದಾಗಿ ಬಹುತೇಕ ಮಂದಿ ಹೇಳಿದ್ದಾರೆ.
ಇನ್ನೂ ಕೆಲವರು ಇಡೀ ಡ್ಯಾನ್ಸ್ ಶೋ ಅನ್ನು ಕ್ಯಾಮರಾ ಮ್ಯಾನ್ ಕದ್ದಿರುವುದಾಗಿ ಹೇಳುತ್ತಿದ್ದಾರೆ. ಕ್ಯಾಮರಾ ಮ್ಯಾನ್ ಪ್ರದರ್ಶನ ಮತ್ತೊಂದು ಲೆವೆಲ್ ನಲ್ಲಿದ್ದು, ಯುವತಿಯರಿಂಗ ಚೆನ್ನಾಗಿದೆ ಎಂದು ಮತ್ತೋರ್ವರು ಬರೆದುಕೊಂಡಿದ್ದಾರೆ.
Advertisement