
ಪಾಟ್ನಾ: 12 ವರ್ಷಗಳ ಹಿಂದೆ ಮುಸ್ಲಿಂ ಟೋಫಿ ಧರಿಸಲು ನಿರಾಕರಿಸಿದ್ದ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಇದೀಗ, ತಾವು ಕೂಡಾ ಮುಸ್ಲಿಂ ಟೋಫಿ ಧರಿಸಲು ನಿರಾಕರಿಸಿದ್ದಾರೆ.
ಬಿಹಾರ ರಾಜ್ಯ ಮದರಸಾ ಶಿಕ್ಷಣ ಮಂಡಳಿಯ ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ಅವರಿಗೆ ಮುಸ್ಲಿಮರು ಸಾಮಾನ್ಯವಾಗಿ ಧರಿಸುವ ಟೋಫಿ ನೀಡಲಾಯಿತು. ಆದರೆ ಅದನ್ನು ಸ್ವೀಕರಿಸದ ನಿತೀಶ್ ಕುಮಾರ್, ನಗು ನಗುತ್ತಾಲೇ ಅದನ್ನು ಎರಡೂ ಕೈಗಳಿಂದ ಹಿಂದಕ್ಕೆ ತಳ್ಳಿದರು.
ಕೊನೆಗೆ ತಮ್ಮದೇ ಪಕ್ಷದ ಸಹೋದ್ಯೋಗಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಮ್ಮದ್ ಜಮಾ ಖಾನ್ ಅವರ ತಲೆಯ ಮೇಲೆ ಇರಿಸಿದರು. ಸುದ್ದಿಸಂಸ್ಥೆ ANI ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
12 ವರ್ಷಗಳ ಹಿಂದೆ ನರೇಂದ್ರ ಮೋದಿ ಇನ್ನೂ ಪ್ರಧಾನಿಯಾಗದಿದ್ದಾಗ ಅವರನ್ನು ನಿತೀಶ್ ಕುಮಾರ್ ಗೇಲಿ ಮಾಡಿದ್ದರು. ಇದು ಕೋಮು ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದರು. ಇದೀಗ ಅವರೇ ಮುಸ್ಲಿಂ ಟೋಫಿ ಹಾಕಿಸಿಕೊಳ್ಳಲು ನಿರಾಕರಿಸಿರುವುದು ಬದಲಾದ ರಾಜಕೀಯಕ್ಕೆ ತಕ್ಕಂತೆ ಅವರ ಬದಲಾವಣೆಯನ್ನು ಗುರುತಿಸುತ್ತದೆ.
2013ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಹಿಂದೂಗಳು ತಿಲಕವನ್ನು ಮುಸ್ಲಿಂರು ಟೋಫಿ ಧರಿಸಬೇಕು ಎಂದು ಒತ್ತಾಯಿಸಿದ್ದರು.
2017 ರ ಹೊತ್ತಿಗೆ, ಮೋದಿ ಪ್ರಧಾನಿಯಾದ ಮೂರು ವರ್ಷಗಳ ನಂತರ, ನಿತೀಶ್ ಮತ್ತೆ ಎನ್ ಡಿಎಗೆ ಮರಳಿದ್ದರು. ಈ ನಡುವೆ 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಗೆದ್ದಿದ್ದರು.
2020 ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಗೆದ್ದ ನಂತರ 2023 ರಲ್ಲಿ ಮತ್ತೆ ಎನ್ ಡಿಎ ತೊರೆದಿದ್ದರು. ನಂತರ ಕಳೆದ ವರ್ಷ ಮರಳಿ ಬಿಜೆಪಿ ಜೊತೆಗೆ ಸರ್ಕಾರ ಮುನ್ನಡೆಸುತ್ತಿದ್ದಾರೆ. ಸದ್ಯಕ್ಕೆ, ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ಒಟ್ಟಾಗಿ ಹೋರಾಡುತ್ತಿವೆ.
Advertisement