
ಮುಂಬೈ: ಭಾರತ ತಂಡದ ಏಕದಿನ ಕ್ರಿಕೆಟ್ ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ತಮ್ಮ ಹೊಸ ಲಂಬೋರ್ಗಿನಿ ಕಾರಿನಲ್ಲಿ ಮುಂಬೈ ನಗರವನ್ನು ಸುತ್ತಾಡಿದ್ದಾರೆ.
ಐಪಿಎಲ್ ನಂತರ ಟೆಸ್ಟ್ ಮತ್ತು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿದಾಯ ಹೇಳಿ ವಿರಾಮ ಪಡೆದುಕೊಂಡಿರುವ ರೋಹಿತ್ ಶರ್ಮಾ, ಮುಂಬೈ ರಸ್ತೆಗಳಲ್ಲಿ ತನ್ನ Blu Eleos Metallic ಬಣ್ಣದ ಹೊಸ ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸಿದ್ದಾರೆ.
ಇತ್ತೀಚಿಗೆ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳ ಕಡೆಗೆ ಥಂಬ್ಸ್ ಅಪ್ (thumbs up) ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟಿಗೆ ವಿದಾಯ ಹೇಳುವ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಂತಹ ವರದಿಗಳನ್ನು ನಿರಾಕರಿಸಿದ್ದು, ಬಿಸಿಸಿಐ ಅಂತಹ ವದಂತಿಗಳನ್ನು ತಳ್ಳಿಹಾಕಿದೆ.
Advertisement