
ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ನಡೆದ ದಾಳಿಯ ನಂತರ ಅವರಿಗೆ ನೀಡಲಾಗಿದ್ದ Z ವರ್ಗದ CRPF ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ರೇಖಾ ಗುಪ್ತ ಅವರಿಗೆ ನೀಡಿದ್ದ 'ಝಡ್' ಶ್ರೇಣಿಯ ಸಿಆರ್‌ಪಿಎಫ್ ವಿಐಪಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದ್ದು, ದೆಹಲಿ ಪೊಲೀಸರೇ ಸಿಎಂ ಅವರಿಗೆ ಭದ್ರತೆ ಒದಗಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ರೇಖಾ ಗುಪ್ತಾ ಅವರ ಮೇಲೆ ಆಗಸ್ಟ್ 20 ರಂದು ಬೆಳಿಗ್ಗೆ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಅವರ ಕ್ಯಾಂಪ್ ಕಚೇರಿಯಲ್ಲಿ 'ಜನ ಸಂವಾದ' ಕಾರ್ಯಕ್ರಮದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದ, ಈ ಹಲ್ಲೆಯನ್ನು "ರೇಖಾ ಅವರನ್ನು ಕೊಲ್ಲಲು ಯೋಜಿತ ಪಿತೂರಿ"ಯ ಭಾಗ ಎಂದು ಅವರ ಕಚೇರಿ ಹೇಳಿದೆ. ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ರಾಜ್‌ಕೋಟ್ ನಿವಾಸಿ ಸಕರಿಯಾ ರಾಜೇಶ್‌ಭಾಯಿ ಖಿಮ್ಜಿಭಾಯಿ (41) ಎಂಬುವವನನ್ನು ಬಂಧಿಸಿ, ಎಫ್ಐಆರ್ ದಾಖಲಿಸಿದ್ದರು.
ಗುಪ್ತಾ ಹಾಗೂ ಅವರ ಅಧಿಕೃತ ನಿವಾಸದಲ್ಲಿ ಅರೆಸೈನಿಕ ಪಡೆಯ ವಿಐಪಿ ಸೆಕ್ಯೂರಿಟಿ ಗ್ರೂಪ್ (ವಿಎಸ್‌ಜಿ) ಅನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯದ ಸೂಚನೆಗೆಯ ಮೇರೆಗೆ ದೆಹಲಿ ಸಿಎಂ ಅವರ ಭದ್ರತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವಹಿಸಿಕೊಂಡಿತ್ತು.
Advertisement