
ನವದೆಹಲಿ: ಇತ್ತೀಚೆಗೆ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದ ದಾಳಿಯ ನಂತರ ದೆಹಲಿ ಪೊಲೀಸರು ಅವರ ಭದ್ರತಾ ವ್ಯವಸ್ಥೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದ್ದಾರೆ.
40 ಸಿಬ್ಬಂದಿಯನ್ನು ಶಾಶ್ವತವಾಗಿ ಸಿಎಂ ಭದ್ರತೆಗೆ ನಿಯೋಜಿಸಲಾಗಿದೆ ಮತ್ತು ಅವರ ಯಾವುದೇ ಕಾರ್ಯಕ್ರಮಗಳಿಗೆ ಭೇಟಿ ನೀಡುವ ಮೊದಲು ಸಂದರ್ಶಕರ ತೀವ್ರ ತಪಾಸಣೆಗೆ ಒಳಪಡಿಸಲು ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಆರಂಭದಲ್ಲಿ, ಕೇಂದ್ರ ಗೃಹ ಸಚಿವಾಲಯವು ದೆಹಲಿ ಮುಖ್ಯಮಂತ್ರಿಗೆ Z- ಶ್ರೇಣಿಯ CRPF ಭದ್ರತೆ ನೀಡಲು ನಿರ್ದೇಶನ ನೀಡಿತ್ತು. ಆದರೆ ಈಗ Z ಶ್ರೇಣಿಯ CRPF ಭದ್ರತೆ ಹಿಂತೆಗೆದುಕೊಳ್ಳಲಾಗಿದೆ. ಬದಲಾಗಿ, ದೆಹಲಿ ಪೊಲೀಸರು ಅವರ ರಕ್ಷಣೆಯನ್ನು ವಹಿಸಿಕೊಂಡಿದ್ದಾರೆ ಮತ್ತು ಹೆಚ್ಚುವರಿ ನಿಯೋಜನೆಯೊಂದಿಗೆ Z+ ಭದ್ರತೆ ನೀಡಿದ್ದಾರೆ.
"ಮುಖ್ಯಮಂತ್ರಿಗಳ ಕಾವಲು ಕಾಯಲು 40 ಕ್ಕೂ ಹೆಚ್ಚು ಸಿಬ್ಬಂದಿ ಯಾವಾಗಲೂ ಇರುತ್ತಾರೆ. ದೆಹಲಿ ಸಿಎಂಗಾಗಿ ಬಲವಾದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅವರ ಎಲ್ಲಾ ಕಾರ್ಯಕ್ರಮಗಳಲ್ಲಿ ಕಠಿಣ ತಪಾಸಣೆ ಕೈಗೊಳ್ಳಲಾಗುವುದು" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 20 ರಂದು ಬೆಳಗ್ಗೆ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ದೆಹಲಿ ಸಿಎಂ ಕ್ಯಾಂಪ್ ಕಚೇರಿಯಲ್ಲಿ 'ಜನ ಸಂವಾದ' ಕಾರ್ಯಕ್ರಮದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ, ರೇಖಾ ಗುಪ್ತಾ ಅವರ ಹಲ್ಲೆ ನಡೆಸಿದ್ದರು. ಈ ಹಲ್ಲೆಯನ್ನು "ರೇಖಾ ಅವರನ್ನು ಕೊಲ್ಲಲು ಯೋಜಿತ ಪಿತೂರಿ"ಯ ಭಾಗ ಎಂದು ಅವರ ಕಚೇರಿ ಹೇಳಿದೆ. ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ರಾಜ್‌ಕೋಟ್ ನಿವಾಸಿ ಸಕರಿಯಾ ರಾಜೇಶ್‌ಭಾಯಿ ಖಿಮ್ಜಿಭಾಯಿ(41) ಎಂಬಾತನನ್ನು ಬಂಧಿಸಿ, ಎಫ್ಐಆರ್ ದಾಖಲಿಸಲಾಗಿದೆ.
Advertisement