
ನವದೆಹಲಿ: ಸ್ಪೈಸ್ ಜೆಟ್ (SpiceJet)ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಯನ್ನು 5 ವರ್ಷಗಳ ಕಾಲ ವಿಮಾನ ಹಾರಾಟ ನಿಷೇಧ ಪಟ್ಟಿಯಲ್ಲಿ ಇರಿಸಲಾಗಿದೆ.
ಇದೇ ವರ್ಷದ ಜುಲೈ 26 ರಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು.
ಈ ಸಂಬಂಧ ತನಿಖೆ ನಡೆಸಿದ ಆಂತರಿಕ ಸಮಿತಿಯು ನಾಲ್ವರು ಸ್ಪೈಸ್ ಜೆಟ್ ಉದ್ಯೋಗಿಗಳ ಮೇಲೆ ಹಿರಿಯ ಸೇನಾ ಅಧಿಕಾರಿಯೊಬ್ಬರು "ಘೋರವಾಗಿ ಹಲ್ಲೆ" ನಡೆಸಿದ್ದು, ಅವರು ತಪ್ಪಿತಸ್ಥರೆಂದು ಘೋಷಿಸಿದ್ದಾರೆ.
ಸ್ಪೈಸ್‌ಜೆಟ್ ಅಧಿಕಾರಿ ರಿತೇಶ್ ಕುಮಾರ್ ಸಿಂಗ್ ಅವರನ್ನು ಕನಿಷ್ಠ ಐದು ವರ್ಷಗಳ ಕಾಲ ವಿಮಾನಯಾನ ಸಂಸ್ಥೆಯ ನಿಷೇಧಿತರ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ನಿಷೇಧಿತ ವ್ಯಕ್ತಿ 5 ವರ್ಷಗಳ ಸ್ಪೈಸ್ ಜೆಟ್ ನ ಯಾವುದೇ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಹಾರಾಟ ಮಾಡಲು ಸಾಧ್ಯವಾಗುವುದಿಲ್ಲ.
ಸಮಿತಿಯು ತನ್ನ ವರದಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (DGCA) ಸಲ್ಲಿಸಿದ್ದು, ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ಹಂಚಿಕೊಂಡಿದೆ. ಆದರೆ, ಅವುಗಳು ಕೂಡಾ ಇದೇ ರೀತಿಯ ನಿಷೇಧ ಹೇರುತ್ತವೆಯೇ ಅಥವಾ ಇಲ್ಲವೇ ಎಂಬುದು ಆ ಸಂಸ್ಥೆಗಳ ನಿರ್ಧಾರಕ್ಕೆ ಬಿಡಲಾಗಿದೆ.
Advertisement