
ಮಧುಬಾನಿ: ಇನ್ನೂ 40 ರಿಂದ 50 ವರ್ಷ ನಾವೇ ಅಧಿಕಾರದಲ್ಲಿ ಇರ್ತೀವಿ ಅಂತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಾಗ್ಗೆ ಹೇಳ್ತಾನೆ ಇರ್ತಾರೆ. ಈ ಹೇಳಿಕೆ ಹಿನ್ನೆಲೆಯಲ್ಲಿ ಮತ ಕಳ್ಳತನದ ಬಗ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ 'ಮತದಾರರ ಅಧಿಕಾರ ಯಾತ್ರೆ' ನಡೆಸುತ್ತಿರುವ ರಾಹುಲ್ ಗಾಂಧಿ ಮಂಗಳವಾರ ಮಧುಬಾನಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುವಾಗ ಅಮಿತ್ ಶಾ ಹೇಳಿಕೆಯನ್ನು ಪ್ರಸ್ತಾಪಿಸುವ ಮೂಲಕ 'ಮತ ಕಳ್ಳತನದ ಆರೋಪ ಮಾಡಿದರು.
ಅಮಿತ್ ಶಾ ಹೋದಲ್ಲಿ ಬಂದಲ್ಲಿ ಇನ್ನೂ 40 ರಿಂದ 50 ವರ್ಷ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತದೆ ಅಂತಾ ಹೇಳ್ತಾ ಇರ್ತಾರೆ. ಹೀಗಾಗಿ ಅವರು ಹೇಗೆ ಅಷ್ಟು ವರ್ಷಗಳ ಕಾಲ ಅಧಿಕಾರದಲ್ಲಿ ಇರ್ತಾರೆ ಎಂದು ನನ್ನಲ್ಲಿ ಅನಿಸಿತು. ಇದೊಂದು ವಿಚಿತ್ರ ಹೇಳಿಕೆಯಾಗಿತ್ತು. ಇಂದು ಅವರು ಮತ ಕಳ್ಳತನ ಮಾಡ್ತಾರೆ ಎಂಬ ಸತ್ಯ ದೇಶದ ಮುಂದೆ ಹೊರಬಿದ್ದಿದೆ ಎಂದರು.
ಮತ ಕಳ್ಳತನ ಮೊದಲಿಗೆ ಗುಜರಾತಿನಲ್ಲಿ ಪ್ರಾರಂಭವಾಯಿತು. ತದನಂತರ 2014ರಲ್ಲಿ ಅದು ರಾಷ್ಟ್ರಮಟ್ಟಕ್ಕೆ ಬಂದಿತು. ಹೀಗೆ ಇತರ ರಾಜ್ಯಗಳಿಗೂ ವ್ಯಾಪಿಸಿತು. ನಾನು ಸುಳ್ಳು ಹೇಳುವುದಿಲ್ಲ, ನನ್ನ ಬಳಿ ಸಾಕ್ಷ್ಯಗಳು ಇದ್ದಾಗ ಮಾತ್ರ ಈ ವಿಷಯಗಳನ್ನು ಹೇಳುತ್ತೇನೆ ಎಂದು ಅವರು ತಿಳಿಸಿದರು.
Advertisement