
ನವದೆಹಲಿ: ಹಿಂಸಾಚಾರ ಪೀಡಿದ ಮಣಿಪುರ ರಾಜ್ಯಕ್ಕೆ ಭೇಟಿ ನೀಡದೆ, ವಿದೇಶ ಪ್ರವಾಸಕ್ಕೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಶುಕ್ರವಾರ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿ ಮೋದಿಯವರು ಹಿಂಸಾಚಾರ ಪೀಡಿತ ಮಣಿಪುರ ರಾಜ್ಯವನ್ನು ನಿರ್ಲಕ್ಷಿಸಿದ್ದಾರೆ, ಮಣಿಪುರಕ್ಕೆ ಭೇಟಿ ನೀಡದೆ ಜಪಾನ್ ಹಾಗೂ ಚೀನಾಗೆ ತೆರಳಿದ್ದಾರೆಂದು ಕಿಡಿಕಾರಿದ್ದಾರೆ.
ಮಣಿಪುರದ ಜನರು ತಮಗಾಗಿರುವ ಗಾಯ ಗುಣಪಡಿಸಿಕೊಳ್ಳಲು ಪ್ರಧಾನಮಂತ್ರಿಗಳ ಭೇಟಿಗಾಗಿ ಕಾಯುತ್ತಿದ್ದರು, ಮೋದಿಯವರು ವಿದೇಶಕ್ಕೆ ಹಾರುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ಆಗಾಗ್ಗೆ ವಿಮಾನಗಳಲ್ಲಿ ಓಡಾಡುವ ಹಾಗೂ ಸುಳ್ಳುವ ಹೇಳುವ ಪ್ರಧಾನಿ ಈ ಬಾರಿ ಜಪಾನ್ ಹಾಗೂ ಚೀನಾ ಭೇಟಿಗೆ ತೆರಳಿದ್ದಾರೆ.
ಮೋದಿಯವರ ಚೀನಾ ಭೇಟಿ ಭಾರತಕ್ಕೆ ಮಹತ್ವದ ಕ್ಷಣವಾಗಿದೆ. ಭಾರತ ಮತ್ತು ಅಮೆರಿಕಾ ಸಂಬಂಧ ಕ್ಷೀಣಿಸುತ್ತಿದ್ದು, ಇದರ ಲಾಭ ಪಡೆಯಲು ಚೀನಾ ಪ್ರಯತ್ನಿಸುತ್ತಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ಹಾಗೂ ಚೀನಾ ನಡುವಿನ ಒಪ್ಪಂದವನ್ನು ನಮ್ಮ ಸೇನೆ ಬಹಿರಂಗಪಡಿಸಿತ್ತು. ಆದರೆ, ಮೋದಿಯವರು ಅದನ್ನು ಮರೆತಿದ್ದಾರೆ ಎನಿಸುತ್ತಿದೆ.
ಜೂನ್ 19, 2020 ರಂದು ಪ್ರಧಾನ ಮಂತ್ರಿಗಳು "ನಾ ಕೋಯಿ ಹಮಾರಿ ಸೀಮಾ ಮೇ ಘುಸ್ ಆಯಾ ಹೈ, ನ ಹೈ ಕೋಯಿ ಘುಸಾ ಹುವಾ ಹೈ" (ಯಾರೂ ನಮ್ಮ ಗಡಿಯನ್ನು ಪ್ರವೇಶಿಸಿಲ್ಲ) ಎಂದು ಹೇಳಿದ್ದರು. ಈ ಹೇಳಿಗೆ ನಮ್ಮ ಸಾಮರ್ಥ್ಯವನ್ನು ತೀವ್ರವಾಗಿ ದುರ್ಬಗೊಳಿಸಿತ್ತು. ಪರಿಸ್ಥಿತಿಯನ್ನು ಪುನಃಸ್ಥಾಪಿಸಲು ವಿಫಲವಾದರೂ ಮೋದಿಯವರ ಈ ಭೇಟಿ ಕ್ಲೀನ್ ಚಿಟ್ ನೀಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ವಿದೇಶ ಪ್ರವಾಸಕ್ಕೆ ತೆರಳಿದ್ದರೂ, ಮೇ 2023 ರ ಘಟನೆಗಳಿಂದ ಬಳಲುತ್ತಿರುವ ಮಣಿಪುರದ ಜನರು ಇನ್ನೂ ಅವರ ಆಗಮನಕ್ಕಾಗಿ ಕಾಯುತ್ತಿದ್ದಾರೆ, ಮೋದಿಯವರು ರಾಜ್ಯ ನಾಯಕರು, ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಅಥವಾ ಸಾರ್ವಜನಿಕರೊಂದಿಗೆ ಸಂವಹನ ನಡೆಸಲು ಸಿದ್ಧರಿಲ್ಲ. ಅವರು ಮಣಿಪುರವನ್ನು ಸಂಪೂರ್ಣವಾಗಿ ಅದರ ಪಾಡಿಗೆ ಬಿಟ್ಟುಬಿಟ್ಟಿದ್ದಾರೆ. ಗೃಹ ಸಚಿವರ ವೈಫಲ್ಯಕ್ಕೆ ಮಣಿಪುರ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement