ಹಿಂದೂ ಮಹಿಳೆಯರ ಮೇಲೆ '3 ಮಕ್ಕಳ ಸಿದ್ಧಾಂತ'ದ ಹೊರೆ ಹೇರಬೇಡಿ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ

ಇದು ಸಂಪೂರ್ಣವಾಗಿ ಕುಟುಂಬದ ವಿಷಯ. ಕೌಟುಂಬಿಕ ವಿಷಯಗಳಲ್ಲಿ ನೀವು ಹಸ್ತಕ್ಷೇಪ ಮಾಡುವ ಅಗತ್ಯವೇನು? ಭಾರತೀಯ ಮಹಿಳೆಯರಿಗೆ ಅವರದ್ದೇ ಆದ ಆದ್ಯತೆಗಳಿವೆ.
Mohan Bhagwat-Asaduddin Owaisi
ಮೋಹನ್ ಭಾಗವತ್-ಅಸಾದುದ್ದೀನ್ ಓವೈಸಿ
Updated on

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಭಾರತದ ಜನನ ಪ್ರಮಾಣ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಭಾರತೀಯ ಮಹಿಳೆಯರೂ ಅದರಲ್ಲೂ ಹಿಂದೂ ಹೆಣ್ಣುಮಕ್ಕಳು 'ಮೂರು ಮಕ್ಕಳನ್ನು' ಹೊಂದಬೇಕೆಂದು ಪ್ರತಿಪಾದಿಸಿದ್ದಾರೆ. ಇದಕ್ಕಾಗಿ ಭಾಗವತ್ ಟೀಕೆಗಳನ್ನು ಸಹ ಎದುರಿಸುತ್ತಿದ್ದಾರೆ. ಮೂರು ಮಕ್ಕಳನ್ನು ಹೇರುವ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಇದು ಮಹಿಳೆಯರ ಮೇಲೆ ಹೊರೆಯಾಗುತ್ತದೆ ಎಂದು ಹೇಳಿದರು. ಕುಟುಂಬದ ಖಾಸಗಿ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದರು.

'ಆರ್‌ಎಸ್‌ಎಸ್ ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುವ ಸಂಘಟನೆಯಾಗಿದೆ. ಮುಸ್ಲಿಮರ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. 2011ರ ಜನಗಣತಿಯ ಪ್ರಕಾರ, ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ಈಗಾಗಲೇ ಕಡಿಮೆಯಾಗಿದೆ. ಇದು ಶೇಕಡಾ 14.23 ರಷ್ಟಿದ್ದರೆ, ಹಿಂದೂಗಳ ಸಂಖ್ಯೆ ಸುಮಾರು 80 ಪ್ರತಿಶತದಷ್ಟಿದೆ. ನಾವು ಯಾರೊಬ್ಬರ ಖಾಸಗಿ ಜೀವನದಲ್ಲಿ ಏಕೆ ಹಸ್ತಕ್ಷೇಪ ಮಾಡಬೇಕು ಎಂದು ಅಸಾದುದ್ದೀನ್ ಓವೈಸಿ ಹೇಳಿದರು. ಇದು ಸಂಪೂರ್ಣವಾಗಿ ಕುಟುಂಬದ ವಿಷಯ. ಕೌಟುಂಬಿಕ ವಿಷಯಗಳಲ್ಲಿ ನೀವು ಹಸ್ತಕ್ಷೇಪ ಮಾಡುವ ಅಗತ್ಯವೇನು? ಭಾರತೀಯ ಮಹಿಳೆಯರಿಗೆ ಅವರದ್ದೇ ಆದ ಆದ್ಯತೆಗಳಿವೆ. ಮೂರು ಮಕ್ಕಳನ್ನು ಸಮರ್ಥಿಸಿಕೊಳ್ಳುವುದು ಆರ್‌ಎಸ್‌ಎಸ್‌ನ ದ್ವಂದ್ವ ನೀತಿಯನ್ನು ಬಹಿರಂಗಪಡಿಸುತ್ತದೆ ಎಂದರು.

ಮೋದಿ ಸರ್ಕಾರದ ಮೇಲೆ ದಾಳಿ ಮಾಡಿದ ಓವೈಸಿ, ಯುವಕರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದರು. ನಮ್ಮ ಜನಸಂಖ್ಯೆಯ ಶೇಕಡಾ 60ರಷ್ಟು ಯುವ ಸಮೂಹವಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿವೆ. ನೀವು ಈ ವಿಷಯವನ್ನು ಚರ್ಚಿಸುತ್ತಿಲ್ಲ. ನೀವು ಮೂರು ಮಕ್ಕಳನ್ನು ಸಮರ್ಥಿಸುತ್ತಿದ್ದೀರಿ. ನೀವು ಭಾರತೀಯ ಮಹಿಳೆಯರ ಮೇಲೆ ಹೊರೆ ಹಾಕುತ್ತಿದ್ದೀರಿ ಎಂದು ಹೇಳಿದರು.

Mohan Bhagwat-Asaduddin Owaisi
ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan Bhagwat ಸ್ಪಷ್ಟನೆ

ಮೋಹನ್ ಭಾಗವತ್ ಹೇಳಿದ್ದೇನು?

ಮೋಹನ್ ಭಾಗವತ್ ಇತ್ತೀಚೆಗೆ ಮೂರು ಮಕ್ಕಳನ್ನು ಹೊಂದುವ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಕುಟುಂಬ ಯೋಜನೆ ಅತ್ಯಗತ್ಯ ವಿಷಯವಾಗಿದೆ ಎಂದು ಅವರು ನಂಬುತ್ತಾರೆ. ಆದರೆ ಅದನ್ನು ಸೀಮಿತ ಜನಸಂಖ್ಯಾ ನಿಯಂತ್ರಣದ ದೃಷ್ಟಿಕೋನದಿಂದ ಮಾತ್ರ ನೋಡಬಾರದು. ಇಂದಿನ ಕಾಲದ ಅಗತ್ಯಗಳನ್ನು ಪರಿಗಣಿಸಿ ಕುಟುಂಬವನ್ನು ಮೂರು ಮಕ್ಕಳಿಗೆ ಸೀಮಿತಗೊಳಿಸುವುದು ಸರಿಯಾದ ಹೆಜ್ಜೆಯಾಗಬಹುದು ಎಂದು ಭಾಗವತ್ ಹೇಳಿದರು. ಒಂದು ಕುಟುಂಬವು ಮೂರು ಮಕ್ಕಳನ್ನು ಹೊಂದಿರುವಾಗ, ಅದು ಕುಟುಂಬದ ಸಂತೋಷ ಮತ್ತು ಮಕ್ಕಳ ಆರೋಗ್ಯಕರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಬಹುದು ಎಂದು ಅವರು ವಾದಿಸುತ್ತಾರೆ. ಮೂರು ಮಕ್ಕಳ ಕಲ್ಪನೆಯು ಸಾಮಾಜಿಕ ಮತ್ತು ಆರ್ಥಿಕ ಜವಾಬ್ದಾರಿಗಳನ್ನು ಸಮತೋಲನಗೊಳಿಸುವುದರಿಂದ ಅದು ಸಹ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com