
ಪಾಟ್ನಾ: ಬಿಹಾರದಲ್ಲಿ ಪಕ್ಷದ ಬೂತ್ ಮಟ್ಟದ ಏಜೆಂಟ್‌ಗಳು(ಬಿಎಲ್‌ಎ) ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಸಮಯದಲ್ಲಿ ಅಕ್ರಮಗಳ ವಿರುದ್ಧ 89 ಲಕ್ಷ ದೂರುಗಳನ್ನು ದಾಖಲಿಸಿದ್ದಾರೆ. ಆದರೆ ಅವೆಲ್ಲವನ್ನೂ ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಭಾನುವಾರ ಹೇಳಿದ್ದಾರೆ.
ಈ ಅಕ್ರಮಗಳು ಚುನಾವಣಾ ಆಯೋಗದ ಉದ್ದೇಶದ ಬಗ್ಗೆಯೇ ಅನುಮಾನ ಮೂಡಿಸುತ್ತಿವೆ. ಸಂಪೂರ್ಣ ಎಸ್ಐಆರ್ ಪ್ರಕ್ರಿಯೆಯನ್ನು ಮತ್ತೆ ನಡೆಸಬೇಕೆಂದು ಪವನ್ ಖೇರಾ ಒತ್ತಾಯಿಸಿದರು.
ಆದಾಗ್ಯೂ, ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿ, ಇಲ್ಲಿಯವರೆಗೆ, ಬಿಹಾರದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಅಧಿಕಾರ ನೀಡಿದ ಯಾವುದೇ ಬಿಎಲ್‌ಎ, ಕೈಬಿಟ್ಟ ಮತದಾರರ ಬಗ್ಗೆ ಯಾವುದೇ ಅರ್ಜಿ ಅಥವಾ ಆಕ್ಷೇಪಣೆಯನ್ನು ಸಲ್ಲಿಸಿಲ್ಲ ಎಂದು ಪ್ರತಿಪಾದಿಸಿದೆ.
"ಯಾವುದೇ ರಾಜಕೀಯ ಪಕ್ಷದಿಂದ ಯಾವುದೇ ದೂರುಗಳು ಬರುತ್ತಿಲ್ಲ ಎಂದು ಇಸಿ ತನ್ನ ಮೂಲಗಳ ಮೂಲಕ ಸುದ್ದಿಗಳನ್ನು ಹರಡುತ್ತಲೇ ಇದೆ. ಸತ್ಯವೆಂದರೆ ಎಸ್‌ಐಆರ್‌ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ 89 ಲಕ್ಷ ದೂರುಗಳನ್ನು ಇಸಿಗೆ ಸಲ್ಲಿಸಿದೆ" ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ನಮ್ಮ ಬಿಎಲ್‌ಎಗಳು ದೂರುಗಳನ್ನು ಸಲ್ಲಿಸಲು ಹೋದಾಗ, ಅವರ ದೂರುಗಳನ್ನು ಇಸಿ ತಿರಸ್ಕರಿಸಿದೆ. ದೂರುಗಳನ್ನು ವ್ಯಕ್ತಿಗಳಿಂದ ಮಾತ್ರ ಸ್ವೀಕರಿಸಬಹುದು, ರಾಜಕೀಯ ಪಕ್ಷಗಳಿಂದ ಅಲ್ಲ ಎಂದು ಇಸಿ ನಮ್ಮ ಬಿಎಲ್‌ಎಗಳಿಗೆ ಸ್ಪಷ್ಟವಾಗಿ ತಿಳಿಸಿದೆ" ಎಂದು ಖೇರಾ ಆರೋಪಿಸಿದದಾರೆ.
"ನಮ್ಮ ಬಿಎಲ್‌ಒಗಳು, ಪಟ್ಟಿಯಿಂದ ಕೈಬಿಟ್ಟ ಮತದಾರರಿಗೆ ಸಂಬಂಧಿಸಿದ ದೂರುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಎಲ್ಲಾ ಅವಕಾಶಗಳನ್ನು ಬಳಸಿಕೊಂಡಿದ್ದಾರೆ ಮತ್ತು ಎಲ್ಲಾ ಅರ್ಜಿಗಳನ್ನು ಸಂಬಂಧಪಟ್ಟ ಜಿಲ್ಲಾ ಚುನಾವಣಾ ಅಧಿಕಾರಿಗೆ(ಡಿಇಒ) ಸಲ್ಲಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
Advertisement