

ಲಖನೌ: 14 ವರ್ಷದ ಬಾಲಕಿ ಮೇಲೆ ಆಕೆಯ ಸ್ನೇಹಿತನ ತಂದೆ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ವೆಸಗಿರುವ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.
ಬಾಲಕಿ ಸ್ನೇಹಿತ ತನ್ನ ಮನೆಗೆ ಆಹ್ವಾನಿಸಿದ್ದ, ಬಳಿಕ ಆಕೆಯ ತಂದೆ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಯಲು ಕೊಟ್ಟು ತನ್ನ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರವೆಸಗಿದ್ದಾರೆ. 12 ದಿನಗಳಿಂದ ಕಾಣೆಯಾಗಿದ್ದ ಬಾಲಕಿ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ನವೆಂಬರ್ 13 ರಿಂದ ನವೆಂಬರ್ 25 ರವರೆಗೆ ಬಾಲಕಿ ಕಾಣೆಯಾಗಿದ್ದಳು. ಆಕೆಯ ಕುಟುಂಬ ಹತ್ತಿರದ ಪ್ರದೇಶಗಳಲ್ಲಿ ಆಕೆಗಾಗಿ ಹುಡುಕಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಮರುದಿನ, ಅವರು ಪಿಲ್ಖುವಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ನವೆಂಬರ್ 25 ರಂದು, ಗಾಂಧಿ ಬಜಾರ್‌ನಲ್ಲಿರುವ ಮನೆಯೊಳಗೆ ಬಾಲಕಿಯೊಬ್ಬಳು ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಆಕೆಯ ಸಂಬಂಧಿಕರು ಬಂದಾಗ ಗುರುತಿಸಿದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆಸ್ಪತ್ರೆಯಲ್ಲಿ ಆಕೆಗೆ ಪ್ರಜ್ಞೆ ಮರಳಿ ಕಳೆದ 12 ದಿನಗಳ ಘಟನೆಗಳ ಬಗ್ಗೆ ಪೊಲೀಸರಿಗೆ ವಿವರಗಳನ್ನು ನೀಡಿದ್ದಾಳೆ. ನವೆಂಬರ್ 13 ರಂದು ತನ್ನ ಸ್ನೇಹಿತ ತನ್ನನ್ನು ಮನೆಗೆ ಆಹ್ವಾನಿಸಿ ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯವನ್ನು ನೀಡಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ಅದನ್ನು ಕುಡಿದ ಸ್ವಲ್ಪ ಸಮಯದ ನಂತರ ತಾನು ಪ್ರಜ್ಞೆ ಕಳೆದುಕೊಂಡೆ ಎಂದು ಆಕೆ ಹೇಳಿದ್ದಾಳೆ. ಎಚ್ಚರವಾದಾಗ, ತಾನು ಒಂದು ಕೋಣೆಯಲ್ಲಿ ಬಂಧಿಯಾಗಿದ್ದೆ. ಕೋಣೆಯೊಳಗೆ ತನ್ನ ಸ್ನೇಹಿತನ ತಂದೆ ಮತ್ತು ಆತನ ಇಬ್ಬರು ಸಹಚರರಿದ್ದರು. ಆ ವ್ಯಕ್ತಿಗಳು ತನಗೆ ಬೆದರಿಕೆ ಹಾಕಿದ್ದರು ಪದೇ ಪದೇ ಮಾದಕ ದ್ರವ್ಯ ನೀಡುತ್ತಿದ್ದರು ಮತ್ತು ಹೊರಗೆ ಹೋಗದಂತೆ ತಡೆದಿದ್ದರು ಎಂದು ಹೇಳಿದ್ದಾಳೆ. ಪೊಲೀಸರು ಪ್ರಜ್ಞಾ, ಆಶಿಶ್, ಹೇಮಂತ್ ಮತ್ತು ನರೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆಯ ಸ್ನೇಹಿತನ ತಂದೆ ಮತ್ತು ಇತರ ಇಬ್ಬರು ಪುರುಷರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಶಂಕಿತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
Advertisement