ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

'ಸಂಚಾರಿ ಸಾಥಿ' ಆ್ಯಪ್ ನ್ನು ಕಡ್ಡಾಯವಾಗಿ ಅಳವಡಿಸುವಂತೆ ಎಲ್ಲ ಮೊಬೈಲ್ ಫೋನ್ ತಯಾರಕ ಕಂಪನಿಗಳಿಗೆ ಈ ಹಿಂದೆಯೇ ಕೇಂದ್ರ ಸರ್ಕಾರ ಆದೇಶಿಸಿತ್ತು.
Sanchar Saathi app
ಸಂಚಾರಿ ಸಾಥಿ ಆ್ಯಪ್ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೇಶದಲ್ಲಿ ಮಾರಾಟವಾಗುವ ಎಲ್ಲ ಸ್ಮಾರ್ಟ್ ಫೋನ್ ಗಳಲ್ಲಿ 'ಸಂಚಾರಿ ಸಾಥಿ' ಸೈಬರ್ ಭದ್ರತಾ ಆ್ಯಪ್ ನ ಪೂರ್ವ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿರುವುದು ಮೋದಿ ಸರ್ಕಾರದ ವಿರುದ್ಧ ಮಧ್ಯಮ ವರ್ಗದ ಜನರಿಗೆ ದೊರೆತ ಅಪರೂಪದ ಗೆಲುವು ಆಗಿದೆ.

ಭಾರತದಲ್ಲಿ ಮಾರಾಟವಾಗುವ ಎಲ್ಲ ಮೊಬೈಲ್ ಗಳಲ್ಲಿ ಮತ್ತು ಈಗಾಗಲೇ ಬಳಕೆಯಲ್ಲಿರುವ ಮೊಬೈಲ್ ಗಳಲ್ಲಿ ಸಾಫ್ಟ್ ವೇರ್ ನವೀಕರಣದ ಮೂಲಕ 'ಸಂಚಾರಿ ಸಾಥಿ' ಆ್ಯಪ್ ನ್ನು ಕಡ್ಡಾಯವಾಗಿ ಅಳವಡಿಸುವಂತೆ ಎಲ್ಲ ಮೊಬೈಲ್ ಫೋನ್ ತಯಾರಕ ಕಂಪನಿಗಳಿಗೆ ಈ ಹಿಂದೆಯೇ ಕೇಂದ್ರ ಸರ್ಕಾರ ಆದೇಶಿಸಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಸಾಮಾನ್ಯವಾಗಿ ಸರ್ವಾಧಿಕಾರಿ ಆಡಳಿತಗಳು ತಮ್ಮ ನಾಗರಿಕರ ಮೇಲೆ ಗೂಢಚಾರಿಕೆ ಮಾಡುತ್ತವೆ.ಆದರೆ ಪ್ರಜಾಪ್ರಭುತ್ವ ರಾಷ್ಟ್ರಗಳು ಅಂತಹ ಕ್ರಮವನ್ನು ಪರಿಗಣಿಸುತ್ತವೆ ಎಂದು ಯೋಚಿಸುವುದು ತುಂಬಾ ಕಷ್ಟ. ಸಂಚಾರ್ ಸಾಥಿ ಆ್ಯಪ್ ಜನವರಿಯಿಂದಲೂ ಇತ್ತು. ಆದರೆ ಸರ್ಕಾರ ಇದ್ದಕ್ಕಿದ್ದಂತೆ ಅದನ್ನು ಬಳಸುವಂತೆ ನಾಗರಿಕರನ್ನು ಒತ್ತಾಯಿಸಲು ಏಕೆ ನಿರ್ಧರಿಸಿತು ಎಂಬುದನ್ನು ಕಂಡುಹಿಡಿಯುವುದು ಕಷ್ಟಕರವಾಗಿತ್ತು .ಇನ್ನೂ ಕೆಟ್ಟದಾಗಿ, ಅದು ಗೌಪ್ಯತೆಯ ಮಾರ್ಗವನ್ನು ಆರಿಸಿಕೊಂಡಿತು.

ಈ ರೀತಿಯ ಯಾವುದೇ ಕ್ರಮಕ್ಕೆ ಮುಂಚಿತವಾಗಿ ನಡೆಯಬೇಕಾದ ಸಮಾಲೋಚನೆ ನಡೆದಿರಲಿಲ್ಲ. ಅಲ್ಲದೇ ಪಾರದರ್ಶಕತೆಯ ಸಂಪೂರ್ಣ ಕೊರತೆ ಇತ್ತು. ಆದೇಶ ಸೆಲ್ ಫೋನ್ ತಯಾರಕರಿಗೆ ಹೋಗಿತ್ತು, ಅಷ್ಟೇ. ಯಾವುದೇ ಸಾರ್ವಜನಿಕ ಪ್ರಕಟಣೆ ಮಾಡಿರಲಿಲ್ಲ. ಫೋನ್‌ಗಳಲ್ಲಿ ಈ ಆ್ಯಪ್ ಹೊಂದಿರಬೇಕು ಎಂದು ಜನರಿಗೆ ಯಾವುದೇ ಆದೇಶ ನೀಡಿರಲಿಲ್ಲ.

ಈ ಸೂಚನೆ ಹೊರಡುವ ಮೊದಲು ನಾವು ಖರೀದಿಸಿದ ಫೋನ್ ಗಳಲ್ಲಿ ಸಾಫ್ಟ್ ವೇರ್ ನವೀಕರಣದ ಮೂಲಕ 'ಸಂಚಾರಿ ಸಾಥಿ' ಆ್ಯಪ್ ನ್ನು ಕಡ್ಡಾಯವಾಗಿ ಅಳವಡಿಸುವಂತೆ ಎಲ್ಲ ಫೋನ್ ತಯಾರಕ ಕಂಪನಿಗಳಿಗೆ ಆದೇಶಿಸಲಾಗಿತ್ತು

Sanchar Saathi app
ಸಂಚಾರ್ ಸಾಥಿ ಆ್ಯಪ್ ನಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಕಡ್ಡಾಯ ಆದೇಶ ವಾಪಸ್: ಸಚಿವ ಸಿಂಧಿಯಾ; Video

ರಹಸ್ಯವಾಗಿ ಮಾಡಲಾದ ಇಂತಹ ಕ್ರಮವನ್ನು ಯಾರು ಸಮರ್ಥಿಸಿಕೊಳ್ಳಲು ಸಾಧ್ಯ? ಇಷ್ಟೆಲ್ಲಾ ವಿವಾದಗಳ ಹಿನ್ನೆಲೆಯಲ್ಲಿ ಈ ಆ್ಯಪ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಇದು ಮಧ್ಯಮ ವರ್ಗದ ಜನರಿಗೆ ದೊರೆತ ಅಪರೂಪದ ಗೆಲುವುವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com