40 ಸೆಕೆಂಡ್ ನಲ್ಲಿ ಎಲ್ಲವೂ ಭಸ್ಮ; 25 ಜನರ ಸಾವಿಗೆ ಕಾರಣವಾದ ಗೋವಾ ನೈಟ್‌ಕ್ಲಬ್ ಅಗ್ನಿ ಅವಘಡದ ಭಯಾನಕ ಕ್ಷಣ, Video

ಉತ್ತರ ಗೋವಾದ ಅರ್ಪೋರದಲ್ಲಿರುವ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್‌ ಸ್ಫೋಟ ಮತ್ತು ಅಗ್ನಿ ಅವಘಡದಲ್ಲಿ ಒಟ್ಟು 25 ಮಂದಿ ಮೃತಪಟ್ಟು, ಆರು ಜನರು ಗಾಯಗೊಂಡಿದ್ದಾರೆ.
Goa nightclub fire
ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ
Updated on

ಪಣಜಿ: 25 ಜನರ ಸಾವಿಗೆ ಕಾರಣವಾದ ಗೋವಾದ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದ ರೋಚಕ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಣ್ಣ ಪ್ರಮಾಣದಲ್ಲಿ ಆರಂಭವಾದ ಬೆಂಕಿಯ ಸಣ್ಣ ಕಿಡಿ ಕೆಲವೇ ಕ್ಷಣಗಳಲ್ಲಿ ಇಡೀ ವೇದಿಕೆಯನ್ನು ಆಕ್ರಮಿಸಿಕೊಂಡ ದೃಶ್ಯ ಇದಾಗಿದೆ.

ಉತ್ತರ ಗೋವಾದ ಅರ್ಪೋರದಲ್ಲಿರುವ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್‌ ಸ್ಫೋಟ ಮತ್ತು ಅಗ್ನಿ ಅವಘಡದಲ್ಲಿ ಒಟ್ಟು 25 ಮಂದಿ ಮೃತಪಟ್ಟು, ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಣಜಿ ಸಮೀಪ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್‌) ದಾಖಲಿಸಲಾಗಿದೆ. ಮೃತರ ಗುರುತು ಪತ್ತೆಗೆ ಪೊಲೀಸರು ಗೋವಾ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ. ಶವಗಳನ್ನು ಶವಾಗರದಲ್ಲಿ ಇರಿಸಲಾಗಿದೆ.

ಮಧ್ಯರಾತ್ರಿಯ ನಂತರ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘದ ನಂತರ 14 ಸಿಬ್ಬಂದಿ ಸದಸ್ಯರು ಮತ್ತು ನಾಲ್ವರು ಪ್ರವಾಸಿಗರು ಸೇರಿದಂತೆ 25 ಜನರು ಸಾವನ್ನಪ್ಪಿದ್ದರು. ಕಳೆದ ವರ್ಷ ಪ್ರಾರಂಭವಾದ ಈ ಕ್ಲಬ್, ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದಲ್ಲಿದ್ದು, ಇದು ಜನಪ್ರಿಯ ಪಾರ್ಟಿ ಸ್ಥಳವಾಗಿದ್ದು ವೀಕೆಂಡ್ ಬರುತ್ತಲೇ ಸಾವಿರಾರು ಜನರು ಈ ಕ್ಲಬ್ ಧಾವಿಸುತ್ತಾರೆ ಎಂದು ಹೇಳಲಾಗಿದೆ.

Goa nightclub fire
Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

40 ಸೆಕೆಂಡ್ ನಲ್ಲಿ ಎಲ್ಲವೂ ಭಸ್ಮ

ಗೋವಾದ 'ಬಿರ್ಚ್ ಬೈ ರೋಮಿಯೋ ಲೇನ್' ನಲ್ಲಿ ನಿನ್ನೆ ರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದಾಗ, ಸುಮಾರು 100 ಪ್ರವಾಸಿಗರು ಹೆಚ್ಚು ಪ್ರಚಾರ ಪಡೆದ 'ಬಾಲಿವುಡ್ ಬ್ಯಾಂಗರ್ ನೈಟ್' ಶೋವನ್ನು ಆನಂದಿಸುತ್ತಿದ್ದರು. ಈ ವೇಳೆ ಛಾವಣಿಯಲ್ಲಿ ಲೈಟ್ ಸಮೀಪ ಸಣ್ಣದಾಗಿ ಆರಂಭವಾದ ಬೆಂಕಿ ಬಳಿಕ ನೋಡ ನೋಡುತ್ತಲೇ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಟ್ಟಡ ಆವರಿಸಿಕೊಂಡಿತು. ಕೇವಲ 40 ಸೆಕೆಂಡ್ ನಲ್ಲಿ ಬೆಂಕಿ ಇಡೀ ವೇದಿಕೆಗೆ ವ್ಯಾಪಿಸಿತು. ನೋಡ ನೋಡುತ್ತಲೇ ವೇದಿಕೆ ಮೇಲಿದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಯಿತು.

ಮೆಹಬೂಬಾ ಸಾಂಗ್ ಗೆ ಸೊಂಟ ಕುಣಿಸುತ್ತಿದ್ದ ಡ್ಯಾನ್ಸರ್

ಇನ್ನು ಈ ದುರಂತ ಸಂಭವಿಸುವ ವೇಳೆ ಶೋಲೆಯ ಚಾರ್ಟ್‌ಬಸ್ಟರ್ 'ಮೆಹಬೂಬಾ ಓ ಮೆಹಬೂಬಾ' ಹಾಡಿನ ತಾಳಕ್ಕೆ ನರ್ತಕಿ ತನ್ನ ಸೊಂಟ ಕುಣಿಸುತ್ತಿದ್ದರು. ಆಕೆಯನ್ನು ಸಂಗೀತಗಾರರು ಸುತ್ತುವರೆದಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುತ್ತದೆ.

ನರ್ತಕಿಯ ಎಚ್ಚರಿಸಿದ ಪ್ರೇಕ್ಷಕರು

ಇದೇ ಸಂದರ್ಭದಲ್ಲಿ ನೈಟ್ ಕ್ಲಬ್ ನ ಮೇಲ್ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಲೇ ಅದು ವ್ಯಾಪಿಸಿದೆ. ಈ ವೇಳೆ ಅಲ್ಲಿಯೇ ಕೀಬೋರ್ಡ್ ಬಳಿ ಇದ್ದ ಲ್ಯಾಪ್ ಟಾಪ್ ಮೇಲೆ ಬೆಂಕಿಯ ಕಿಡಿಗಳು ಬಿದ್ದಿದ್ದು, ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಎಚ್ಚೆತ್ತು ಲ್ಯಾಪ್ ಟಾಪ್ ತೆಗೆದುಕೊಂಡಿದ್ದಾರೆ. ಅಷ್ಟು ಹೊತ್ತಿಗಾಗಲೇ ಬೆಂಕಿ ಇಡೀ ಮೇಲ್ಟಾವಣಿ ಆಕ್ರಮಿಸಿಕೊಂಡು ನೈಟ್ ಕ್ಲಬ್ ತುಂಬಾ ಹೊಗೆ ಆವರಿಸಿಕೊಂಡಿತ್ತು. ಈ ವೇಳೆ ಸಿಬ್ಬಂದಿ ಕ್ಲಬ್ ನಲ್ಲಿದ್ದವರೆಲ್ಲರನ್ನೂ ಹೊರಗೆ ಕಳುಹಿಸುವ ಕಾರ್ಯ ಮಾಡಿದ್ದಾರೆ. ಸಂಗೀತಗಾರರು ತಮ್ಮ ವಾದ್ಯಗಳನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಓಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Goa nightclub fire
ಗೋವಾ ನೈಟ್ ಕ್ಲಬ್​ ಅಗ್ನಿ ದುರಂತ: ಪ್ರಧಾನಿ ಮೋದಿ, ರಾಷ್ಟ್ರಪತಿ ಸಂತಾಪ; ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ

25 ಜನರ ಸಾವು

ಬಳಿಕ ಮುಂದಿನ ಕೆಲವೇ ನಿಮಿಷಗಳಲ್ಲಿ, ಬೆಂಕಿಯು ಇಡೀ ನೈಟ್‌ಕ್ಲಬ್ ಅನ್ನು ಆವರಿಸಿದ್ದು, ಅಲ್ಲಿದ್ದ 25 ಜನರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಪಣಜಿ ಬಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಣ ಉಳಿಸಿಕೊಳ್ಳಲು ಪರದಾಟ

ಪ್ರತ್ಯಕ್ಷದರ್ಶಿಗಳು ಮತ್ತು ಅಗ್ನಿಶಾಮಕ ದಳದವರ ಪ್ರಕಾರ, ಬೆಂಕಿ ಹೊತ್ತಿಕೊಂಡ ನಂತರ ಕಿರಿದಾದ ಪ್ರವೇಶ-ನಿರ್ಗಮನ ದ್ವಾರವು ಗೊಂದಲ ಹೆಚ್ಚಿಸಿತು. ಅನೇಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ, ಕೆಲವು ಪ್ರವಾಸಿಗರು ಕೆಳಮಹಡಿಯ ಅಡುಗೆಮನೆಗೆ ಓಡಿಹೋಗಿ ಸಿಬ್ಬಂದಿಯೊಂದಿಗೆ ಅಲ್ಲಿ ಸಿಕ್ಕಿಹಾಕಿಕೊಂಡರು.

ಕಿರಿದಾದ ಪ್ರವೇಶದ್ವಾರವು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚು ಸವಾಲಿನದ್ದಾಗಿ ಮಾಡಿತು. ನೈಟ್‌ಕ್ಲಬ್‌ಗೆ ಹೋಗುವ ಮಾರ್ಗಗಳು ಅಗ್ನಿಶಾಮಕ ವಾಹನಗಳು ಹಾದುಹೋಗುವಷ್ಟು ಅಗಲವಾಗಿರಲಿಲ್ಲ ಎಂದು ಅಗ್ನಿಶಾಮಕ ದಳದವರು ಹೇಳಿದ್ದಾರೆ. ಆದ್ದರಿಂದ, ಅಗ್ನಿಶಾಮಕ ವಾಹನಗಳನ್ನು ಸುಮಾರು 400 ಮೀಟರ್ ದೂರದಲ್ಲಿ ನಿಲ್ಲಿಸಲಾಗಿತ್ತು. ಇದು ರಕ್ಷಣಾ ಕಾರ್ಯಾಚರಣೆಯನ್ನು ಸಂಕೀರ್ಣಗೊಳಿಸಿತು. ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಅನೇಕರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದರೆ, ಇತರರು ಗಂಭೀರ ಸುಟ್ಟಗಾಯಗಳಿಗೆ ಒಳಗಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com