ಮಹಾರಾಷ್ಟ್ರ: 82 ಲಕ್ಷ ರೂ ಬಹುಮಾನ ಘೋಷಿಸಲಾಗಿದ್ದ 11 ನಕ್ಸಲೀಯರ ಶರಣಾಗತಿ!

ಸುಕ್ಮಾ ಪೊಲೀಸ್ ಮಹಾನಿರ್ದೇಶಕ ರಶ್ಮಿ ಶುಕ್ಲಾ ಅವರ ಮುಂದೆ ನಕ್ಸಲೀಯರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
Casual Images
ಸಾಂದರ್ಭಿಕ ಚಿತ್ರ
Updated on

ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ 82 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ 11 ಹಿರಿಯ ನಕ್ಸಲೀಯರು ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ.

ಸುಕ್ಮಾ ಪೊಲೀಸ್ ಮಹಾನಿರ್ದೇಶಕ ರಶ್ಮಿ ಶುಕ್ಲಾ ಅವರ ಮುಂದೆ ನಕ್ಸಲೀಯರು ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಪಿ ಮುಂದೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದಾಗ ಅವರಲ್ಲಿ ನಾಲ್ವರು ಸಮವಸ್ತ್ರದಲ್ಲಿದ್ದರು. ರಾಜ್ಯ ಸರ್ಕಾರವು ಅವರಿಗೆ 82 ಲಕ್ಷ ರೂ. ಬಹುಮಾನವನ್ನು ಘೋಷಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಸಂಖ್ಯೆಯ ನಕ್ಸಲೀಯರು ಪೊಳ್ಳು ನಕ್ಸಲ್ ಸಿದ್ಧಾಂತದಿಂದ ಭ್ರಮನಿರಸನಗೊಂಡಿದ್ದು, ಜನರ ವಿರುದ್ಧ ಬುದ್ದಿಹೀನ ಹಿಂಸಾಚಾರದಿಂದ ಹತಾಶೆಗೊಂಡಿದ್ದಾರೆ. 2005 ರಿಂದ ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿದ ಶರಣಾಗತಿ ಮತ್ತು ಪುನರ್ವಸತಿ ನೀತಿಗೆ ಆಕರ್ಷಿತರಾಗಿದ್ದಾರೆ ಎಂದು ಹೇಳಲಾಗಿದೆ.

Casual Images
Chhattisgarh: ತಲೆಗೆ 1 ಕೋಟಿ ರೂ ಬಹುಮಾನ ಘೋಷಿಸಲಾದ ಹಿರಿಯ ನಕ್ಸಲ್ ನಾಯಕ ಸೇರಿದಂತೆ 10 ನಕ್ಸಲೀಯರು ಎನ್ ಕೌಂಟರ್ ನಲ್ಲಿ ಹತ್ಯೆ!

ಗಡ್ಚಿರೋಲಿ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಸಂಘಟಿತ ಪ್ರಯತ್ನದಿಂದಾಗಿ ಜಿಲ್ಲೆಯಲ್ಲಿ ಈ ವರ್ಷ 112 ನಕ್ಸಲೀಯರು ಶರಣಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com