

ಹೈದರಾಬಾದ್: ಗೋಟ್ ಇಂಡಿಯಾ ಪ್ರವಾಸದ(GOAT India tour event) ಭಾಗವಾಗಿ ಭಾರತಕ್ಕೆ ಬಂದಿರುವ ಫುಟ್‌ಬಾಲ್ ದಂತಕಥೆ ಲಿಯೋನಲ್ ಮೆಸ್ಸಿ ಕಾಲಿಡುತ್ತಿದ್ದಂತೆ, ಮುತ್ತಿನ ನಗರಿ ಹೈದರಾಬಾದ್ ಫುಟ್‌ಬಾಲ್ ಜ್ವರಕ್ಕೆ ಸಾಕ್ಷಿಯಾಯಿತು.
ಕೋಲ್ಕತ್ತಾದಿಂದ ತನ್ನ ಬಹು ನಿರೀಕ್ಷಿತ ಭಾರತ ಭೇಟಿಯನ್ನು ಪ್ರಾರಂಭಿಸಿದ ನಂತರ, ವಿಶ್ವ ಶ್ರೇಷ್ಠ ಪುಟ್ ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾರೀ ಉತ್ಸಾಹ ಮತ್ತು ಬಿಗಿ ಭದ್ರತೆಯ ನಡುವೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ಬಳಿಕ ಮೆಸ್ಸಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜೊತೆಗೆ ಸ್ನೇಹಪರ ಪಂದ್ಯವನ್ನಾಡಿದರು. ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಒಂದನ್ನು ಬಾರಿಸಿದರು. ಮೆಸ್ಸಿ ಮತ್ತು ರೇವಂತ್ ರೆಡ್ಡಿ ಸ್ವಲ್ಪ ಸಮಯದವರೆಗೆ ಪಾಸ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಲೇ ಗಮನ ಸೆಳೆದರು.
ರೆಡ್ಡಿ ಅಪರ್ಣಾ ಆಲ್ ಸ್ಟಾರ್ಸ್ ವಿರುದ್ಧ 4-0 ಅಂತರದಲ್ಲಿ ಜಯಗಳಿಸುವ ಮೂಲಕ RR9ತಂಡಕ್ಕೆ ನಾಲ್ಕನೇ ಗೋಲು ಗಳಿಸಿದರು. ಬಳಿಕ ಭಾರಿ ಹರ್ಷೋದ್ಗಾರಗಳ ನಡುವೆ ಸ್ಟೇಡಿಯಂ ಒಂದು ಸುತ್ತು ಹಾಕಿದ ಮೆಸ್ಸಿ, ಫೋಟೋಗಳಿಗೆ ಫೋಸ್ ನೀಡಿದರು. ಪ್ರೇಕ್ಷಕರತ್ತ ಕೈಬೀಸಿದರು.
ಇದೇ ವೇಳೆ ಲಿನೋನೆಲ್ ಮೆಸ್ಸಿ ಅವರನ್ನು ಭೇಟಿಯಾದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಅರ್ಜೇಂಟೈನಾ ಪುಟ್ ಬಾಲ್ ಜೆರ್ಸಿಯನ್ನು ಮೆಸ್ಸಿ ನೀಡಿದ್ದಾರೆ. ತದನಂತರ ಮೂವರು ಕ್ರೀಡಾಂಗಣದಿಂದ ತೆರಳಿದರು. ಈ ಮೂಲಕ ಕಾರ್ಯಕ್ರಮ ಅಂತ್ಯವಾಯಿತು.
ಇದಕ್ಕೂ ಮುನ್ನಾ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ಮೆಸ್ಸಿಯನ್ನು ಬರಮಾಡಿಕೊಂಡರು. ಇಂದು ರಾತ್ರಿ ಅವರು ರಾಯಲ್ ಫಲಕ್ನುಮಾ ಅರಮನೆಯಲ್ಲಿ ಕಳೆಯಲಿದ್ದಾರೆ. ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಿರುವ CCI ಕಾರ್ಯಕ್ರಮದಲ್ಲಿ ಮೆಸ್ಸಿ ಪಾಲ್ಗೊಳ್ಳಲಿದ್ದಾರೆ.
Advertisement