

ಮುಸ್ಲಿಂ ಯುವಕನೊಬ್ಬ ತನ್ನ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದ ವಿವಾಹಿತ ಹಿಂದೂ ಮಹಿಳೆಯ ಶಿರಚ್ಛೇದ ಮಾಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ. ಆಕೆಯನ್ನು ಕೊಂದ ನಂತರ ದೇಹವನ್ನು ಛಿದ್ರಗೊಳಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ. ಆರೋಪಿಯನ್ನು ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ 27 ವರ್ಷದ ಬಿಲಾಲ್ ಎಂದು ಗುರುತಿಸಲಾಗಿದೆ.
ಟ್ಯಾಕ್ಸಿ ಚಾಲಕನಾಗಿದ್ದ ಬಿಲಾಲ್ ನಕುರ್‌ನಲ್ಲಿ ವಾಸಿಸುತ್ತಿದ್ದು 30 ವರ್ಷದ ಉಮಾ ಜೊತೆ ಗಂಗೋತ್ರಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದನು. ಡಿಸೆಂಬರ್ 7ರಂದು ಹರಿಯಾಣದ ಯಮುನಾನಗರದಲ್ಲಿ ಪೊಲೀಸರು ಉಮಾಳ ಶಿರಚ್ಛೇದಿತ ಶವವನ್ನು ವಶಪಡಿಸಿಕೊಂಡಿದ್ದರು. ಉಮಾ ಈಗಾಗಲೇ ವಿವಾಹಿತಳಾಗಿದ್ದು, 8 ವರ್ಷದ ಮಗನಿದ್ದಾನೆ. ಎರಡು ವರ್ಷಗಳ ಕಾಲ ಉಮಾ ಜೊತೆ ಬಿಲಾಲ್ ಲಿವ್-ಇನ್ ಸಂಬಂಧದಲ್ಲಿದ್ದನು. ಈ ಮಧ್ಯೆ ಬಿಲಾಲ್ ಗೆ ಮತ್ತೊಬ್ಬರ ಜೊತೆ ವಿವಾಹ ನಿಶ್ಚಯವಾಗಿತ್ತು. ಆ ನಂತರ ಬಿಲಾಲ್ ಉಮಾಳನ್ನು ಕೊಲ್ಲಲು ಯೋಜನೆ ರೂಪಿಸಿದ್ದನು. ಡಿಸೆಂಬರ್ 6ರಂದು ಡ್ರೈವ್‌ಗೆ ಹೋಗುವ ನೆಪದಲ್ಲಿ ಉಮಾಳನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದನು. ಹತ್ನಿಕುಂಡ್ ಬ್ಯಾರೇಜ್‌ನಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ಸಂಪರ್ಕಿಸುವ ಸೇತುವೆಯ ಮೂಲಕ ಹರಿಯಾಣಕ್ಕೆ ಪ್ರವೇಶಿಸಿದನು.
ಪ್ರತಾಪ್‌ನಗರದ ಬಹದ್ದೂರ್‌ಪುರ ಗ್ರಾಮದ ಗಡಿಯಲ್ಲಿರುವ ಕಾಡಿನಲ್ಲಿ ಕಾರನ್ನು ನಿಲ್ಲಿಸಿ ಕಾರಿನ ಹಿಂದಿನ ಸೀಟಿನಲ್ಲಿ ಹೋಗಿ ಕುಳಿತುಕೊಂಡಿದ್ದಾನೆ. ಉಮಾ ಮುಂದಿನ ಸೀಟಿನಲ್ಲಿ ಕುಳಿತಿದ್ದಾಗ ಬಿಲಾಲ್ ಇದ್ದಕ್ಕಿದ್ದಂತೆ ತನ್ನ ಸೀಟ್ ಬೆಲ್ಟ್‌ನಿಂದ ಆಕೆಯ ಕತ್ತು ಹಿಸುಕಿದ್ದಾನೆ. ಈ ವೇಳೆ ಉಮಾ ತನ್ನ ಜೀವ ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದಾಳೆ. ಆದರೆ ಪ್ರಯೋಜನವಾಗಲಿಲ್ಲ. ನಂತರ ಬಿಲಾಲ್ ಪೋಪ್ಲರ್ ನರ್ಸರಿ ಬಳಿ ಉಮಾ ಅವರ ದೇಹವನ್ನು ಕಾರಿನಿಂದ ಹೊರತೆಗೆದು ಮಾಂಸ ಕತ್ತರಿಸುವ ಚಾಕುವಿನಿಂದ ಅವರ ತಲೆಯನ್ನು ದೇಹದಿಂದ ಕತ್ತರಿಸಿದನು. ನಂತರ ಅವನು ದೇಹದ ಗುರುತು ಮರೆಮಾಚಲು ಅದರ ಬಟ್ಟೆಗಳನ್ನು ತೆಗೆದು, ತಲೆಯೊಂದಿಗೆ ಒಂದು ಚೀಲದಲ್ಲಿ ಇರಿಸಿ, ಮುಂದೆ ಸಾಗಿದನು. ಬಿಲಾಲ್ ಉಮಾಳ ಮುಂಡವನ್ನು ಹಿಂದೆ ಬಿಟ್ಟು, ಅವಳ ತಲೆ ಮತ್ತು ಬಟ್ಟೆಗಳನ್ನು ಹರಿಯಾಣ-ಹಿಮಾಚಲ ಗಡಿಯಲ್ಲಿರುವ ಕಾಲೇಸರ್ ಕಾಡಿನಲ್ಲಿರುವ ಲಾಲ್‌ಧಾಂಗ್ ಕಂದಕಕ್ಕೆ ಎಸೆದಿದ್ದನು.
ಬಿಲಾಲ್‌ಳ ಮದುವೆ ಡಿಸೆಂಬರ್ 14ರಂದು ನಿಗದಿಯಾಗಿತ್ತು
ನಂತರ, ಅವನು ಪರ್ಯಾಯ ಮಾರ್ಗವನ್ನು ತೆಗೆದುಕೊಂಡು ಹತ್ನಿಕುಂಡ್ ಬ್ಯಾರೇಜ್ ಸೇತುವೆಯ ಮೂಲಕ ಮನೆಗೆ ಮರಳಿದ್ದಾನೆ. ಬಿಲಾಲ್ ಉಮಾಳ ಫೋನ್ ಸಂಖ್ಯೆಯನ್ನು ಅಳಿಸಿಹಾಕಿದ್ದನು. ಅವಳೊಂದಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ತನ್ನ ಫೋನ್‌ನಿಂದ ತೆಗೆದುಹಾಕಿದನು. ನಂತರ ಡಿಸೆಂಬರ್ 14 ರಂದು ನಿಗದಿಯಾಗಿದ್ದ ತನ್ನ ಮದುವೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದನು. ಆದರೆ ಮದುವೆ ಕಾರ್ಯಕ್ರಮ ನಡೆಯುವ ಮೊದಲೇ ಪೊಲೀಸರು ಅವನನ್ನು ಪತ್ತೆಹಚ್ಚಿದರು. ಶವ ಪತ್ತೆಯಾದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಬಿಲಾಲ್‌ನ ಕಾರನ್ನು ತೋರಿಸಿದವು. ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಡಿಸೆಂಬರ್ 13 ರಂದು ಬಿಲಾಲ್‌ನ ಮನೆಗೆ ಬಂದು ಬಿಲಾಲ್‌ನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
Advertisement