ನಾವು ಭಿಕ್ಷುಕರಲ್ಲ; ಕೇಂದ್ರ ಹಣ ನಿಲ್ಲಿಸಿದರೂ ಉದ್ಯೋಗ ಸೃಷ್ಟಿಸುತ್ತೇವೆ: ಉದ್ಯೋಗ ಖಾತ್ರಿ ಯೋಜನೆಗೆ ಗಾಂಧಿ ಹೆಸರು ಘೋಷಿಸಿದ ದೀದಿ!

ಅವರು MNREGA ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ ಎಂದು ನನಗೆ ನಾಚಿಕೆಯಾಗುತ್ತದೆ, ಏಕೆಂದರೆ ನಾನು ಕೂಡ ಈ ದೇಶಕ್ಕೆ ಸೇರಿದ್ದೇನೆ.
Narendra Modi- Mamata Banarjee (file photo)
ಮೋದಿ- ಮಮತಾ ಬ್ಯಾನರ್ಜಿonline desk
Updated on

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪಶ್ಚಿಮ ಬಂಗಾಳದ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮವನ್ನು ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ.

20 ವರ್ಷಗಳ ಹಳೆಯ MNREGA ವನ್ನು VB-G RAM G ಯೋಜನೆಯೊಂದಿಗೆ ಬದಲಾಯಿಸಲು ಪ್ರಯತ್ನಿಸುತ್ತಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಮಮತಾ ಬ್ಯಾನರ್ಜಿ ಟೀಕಿಸಿದ್ದು, ಈ ನಿರ್ಧಾರವನ್ನು ಘೋಷಿಸಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ವ್ಯಾಪಾರ ಮತ್ತು ಕೈಗಾರಿಕಾ ಸಮಾವೇಶದಲ್ಲಿ ಮಾತನಾಡಿದ ಬ್ಯಾನರ್ಜಿ, ಕೆಲವು ರಾಜಕೀಯ ಪಕ್ಷಗಳು "ನಮ್ಮ ರಾಷ್ಟ್ರೀಯ ಐಕಾನ್‌ಗಳಿಗೆ ಗೌರವ ತೋರಿಸಲು ವಿಫಲವಾದರೆ, ನಾವು ಅದನ್ನು ಮಾಡುತ್ತೇವೆ" ಎಂದು ನೇರವಾಗಿ ಬಿಜೆಪಿಯನ್ನು ಹೆಸರಿಸದೆ ಹೇಳಿದರು.

ಲೋಕಸಭೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 (MGNREGA) ನ್ನು ಬದಲಾಯಿಸಲು ಪ್ರಯತ್ನಿಸುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಮಸೂದೆಯನ್ನು ಅಂಗೀಕರಿಸಿದ ನಂತರ ಅವರ ಘೋಷಣೆ ಹೊರಬಿದ್ದಿದೆ.

"ಅವರು NREGA ಕಾರ್ಯಕ್ರಮದಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ ಎಂದು ನನಗೆ ನಾಚಿಕೆಯಾಗುತ್ತದೆ, ಏಕೆಂದರೆ ನಾನು ಕೂಡ ಈ ದೇಶಕ್ಕೆ ಸೇರಿದ್ದೇನೆ.ನಾವು ಈಗ ರಾಷ್ಟ್ರಪಿತನನ್ನೂ ಸಹ ಮರೆತುಬಿಡುತ್ತಿದ್ದೇವೆ" ಎಂದು ಬ್ಯಾನರ್ಜಿ ಧನ ಧಾನ್ಯ ಸಭಾಂಗಣದಲ್ಲಿ ವ್ಯಾಪಾರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ನಾವು ಈಗ ನಮ್ಮ ರಾಜ್ಯದ ಕರ್ಮಶ್ರೀ ಯೋಜನೆಯನ್ನು ಮಹಾತ್ಮ ಗಾಂಧಿಯವರ ಹೆಸರಲ್ಲಿ ಮರುನಾಮಕರಣ ಮಾಡುತ್ತೇವೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

'ಕರ್ಮಶ್ರೀ' ಯೋಜನೆಯಡಿಯಲ್ಲಿ, ಸರ್ಕಾರ ಫಲಾನುಭವಿಗಳಿಗೆ 75 ದಿನಗಳವರೆಗೆ ಕೆಲಸ ನೀಡುವುದಾಗಿ ಹೇಳಿಕೊಂಡಿದೆ. ಆದರೆ ಬ್ಯಾನರ್ಜಿ ಕೇಂದ್ರ MGNREGS ಅಡಿಯಲ್ಲಿ ಹಣವನ್ನು ನಿರ್ಬಂಧಿಸುತ್ತಿದೆ ಎಂದು ಬಣ್ಣಿಸಿದ್ದಾರೆ.

Narendra Modi- Mamata Banarjee (file photo)
MANREGA-VBGRAMG: NDA ಮೈತ್ರಿಯಲ್ಲಿ ಬಿರುಕು; BJP ನಿರ್ಧಾರದ ಬಗ್ಗೆ TDP ಅಸಮಾಧಾನ; ಇದು ಕೇವಲ ಹೆಸರಿನ ವಿಷಯವಲ್ಲ!

ಭವಿಷ್ಯದಲ್ಲಿ 'ಕರ್ಮಶ್ರೀ' ಅಡಿಯಲ್ಲಿ ಕೆಲಸದ ದಿನಗಳ ಸಂಖ್ಯೆಯನ್ನು 100 ಕ್ಕೆ ಹೆಚ್ಚಿಸುವ ಗುರಿಯನ್ನು ರಾಜ್ಯ ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು. "ನಾವು ಈಗಾಗಲೇ 'ಕರ್ಮಶ್ರೀ' ಅಡಿಯಲ್ಲಿ ಸಾಕಷ್ಟು ಕೆಲಸದ ದಿನಗಳನ್ನು ಸೃಷ್ಟಿಸಿದ್ದೇವೆ, ಅದನ್ನು ನಾವು ನಮ್ಮ ಸ್ವಂತ ಸಂಪನ್ಮೂಲಗಳಿಂದ ನಡೆಸುತ್ತಿದ್ದೇವೆ. ಕೇಂದ್ರದ ಹಣವನ್ನು ನಿಲ್ಲಿಸಿದರೂ, ಜನರಿಗೆ ಕೆಲಸ ಸಿಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಾವು ಭಿಕ್ಷುಕರಲ್ಲ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com