

ಮುಂಬೈ: ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ಅಜಿತ್ ಪವಾರ್ ನೇತೃತ್ವದ NCPಯೊಂದಿಗೆ NCP(SP) ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಯೊಂದಿಗೆ ಕೈಜೋಡಿಸಿದಂತೆ ಆಗುತ್ತದೆ ಎಂದು ಶಿವಸೇನಾ (UBT) ನಾಯಕ ಸಂಜಯ್ ರಾವತ್ ಗುರುವಾರ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, NCP(SP)ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದು, ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ಎರಡು ಪ್ರತಿಸ್ಪರ್ಧಿ ಬಣಗಳ ನಡುವಿನ ಒಪ್ಪಂದ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದರು.
ಅಜಿತ್ ಪವಾರ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಯೊಂದಿಗೆ ಕೈಜೋಡಿಸದಂತೆ ಆಗುತ್ತದೆ. ಅಜಿತ್ ಪವಾರ್ ಬಿಜೆಪಿಯ ಏಜೆಂಟ್, ಅವರೊಂದಿಗಿನ ಯಾವುದೇ ಒಪ್ಪಂದ ಎಂದರೆ ಅದು ಬಿಜೆಪಿಯನ್ನು ಬಲಪಡಿಸುತ್ತದೆ ಎಂದರು.
ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ಕೈಜೋಡಿಸುವ ಕುರಿತು ಎನ್‌ಸಿಪಿ ಮತ್ತು ಎನ್‌ಸಿಪಿ (NCP(SP) ಮಾತುಕತೆ ನಡೆಸಿವೆ. ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಎರಡು ಮಹಾಯುತಿ ಮಿತ್ರಪಕ್ಷಗಳ ನಡುವೆ ಸೌಹಾರ್ದ ಹೋರಾಟ ನಡೆಯಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ವಾರದ ಆರಂಭದಲ್ಲಿ ಹೇಳಿದ್ದರು.
ಆಡಳಿತಾರೂಢ ಮಹಾಯುತಿಯು ಬಿಜೆಪಿ ಮತ್ತು ಎನ್‌ಸಿಪಿ ಜೊತೆಗೆ, ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸಹ ಮಿತ್ರಪಕ್ಷವಾಗಿದೆ. ಉದ್ಧವ್ ಠಾಕ್ರೆ ಅವರ ಸೇನಾ (UBT) ಮತ್ತು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮೈತ್ರಿ ಬಗ್ಗೆ ಪವಾರ್ ಸಕಾರಾತ್ಮಕವಾಗಿದ್ದಾರೆ. ನಾಸಿಕ್ ಮತ್ತು ಥಾಣೆಯಲ್ಲಿ NCP (SP) ಸೇನಾ (UBT) ಮತ್ತು MNS ಮೈತ್ರಿ ಮಾಡಿಕೊಳ್ಳಲಿವೆ ಎಂದು ಅವರು ಹೇಳಿದರು.
ರಾಜ್ಯದ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಜನವರಿ 15 ರಂದು ಚುನಾವಣೆ ನಡೆಯಲಿದ್ದು, ಒಂದು ದಿನದ ನಂತರ ಮತ ಎಣಿಕೆ ನಡೆಯಲಿದೆ.
Advertisement