ರಾಯಭಾರಿ ಕಚೇರಿ ಬಳಿ ಭದ್ರತಾ ಉಲ್ಲಂಘನೆ: ಆರೋಪ ಸರಿಯಲ್ಲ, ವಿಯನ್ನಾ ಒಪ್ಪಂದಕ್ಕೆ ಬದ್ಧ; ಬಾಂಗ್ಲಾದೇಶಕ್ಕೆ ಭಾರತ ತಿರುಗೇಟು

ಡಿಸೆಂಬರ್ 20ರಂದು ಬಾಂಗ್ಲಾದೇಶದ ಮಯ್ಮನ್ಸಿಂಗ್ ಜಿಲ್ಲೆಯಲ್ಲಿ ದೀಪು ಚಂದ್ರ ದಾಸ್ ಎಂಬವರ ಹತ್ಯೆಯನ್ನು ಖಂಡಿಸಿ ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಸುಮಾರು 20–25 ಮಂದಿ ಯುವಕರು ಕೆಲಕಾಲ ಬಾಂಗ್ಲಾದೇಶ ರಾಯಭಾರಿ ಎದುರು ಪ್ರತಿಭಟನೆ ನಡೆಸಿದ್ದರು.
MEA spokesperson Randhir Jaiswal
ರಣಧೀರ್ ಜೈಸ್ವಾಲ್
Updated on

ನವದೆಹಲಿ: ನವದೆಹಲಿಯಲ್ಲಿರುವ ಬಾಂಗ್ಲಾದೇಶ ರಾಯಭಾರಿ ಎದುರು ನಡೆದ ಪ್ರತಿಭಟನೆಗೆ ಸಂಬಂಧಿಸಿ ಬಾಂಗ್ಲಾದೇಶ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಹಾಗೂ ಆರೋಪವನ್ನು ಭಾರತ ನಿರಾಕರಿಸಿದ್ದು, ಆರೋಪ ತಪ್ಪಾಗಿದ್ದು, ದಾರಿತಪ್ಪಿಸುವ ಪ್ರಚಾರವಾಗಿದೆ ಎಂದು ಹೇಳಿದೆ.

ಡಿಸೆಂಬರ್ 20ರಂದು ಬಾಂಗ್ಲಾದೇಶದ ಮಯ್ಮನ್ಸಿಂಗ್ ಜಿಲ್ಲೆಯಲ್ಲಿ ದೀಪು ಚಂದ್ರ ದಾಸ್ ಎಂಬವರ ಹತ್ಯೆಯನ್ನು ಖಂಡಿಸಿ ಹಾಗೂ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಸುಮಾರು 20–25 ಮಂದಿ ಯುವಕರು ಕೆಲಕಾಲ ಬಾಂಗ್ಲಾದೇಶ ರಾಯಭಾರಿ ಎದುರು ಪ್ರತಿಭಟನೆ ನಡೆಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ. ತೌಹೀದ್ ಹೊಸೈನ್ ಅವರು, ಬಾಂಗ್ಲಾದೇಶ ರಾಯಭಾರಿ ಕಚೇರಿ ಬಳಿ ಭದ್ರತಾ ಉಲ್ಲಂಘನೆಯಾಗಿದ್ದು, ಅತ್ಯಂತ ಭದ್ರತಾ ವಲಯದಲ್ಲಿರುವ ಹೈಕಮಿಷನ್ ಬಳಿ 25–30 ಮಂದಿ ಹೇಗೆ ತಲುಪಿದರು ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದ್ದರು.

ಬಾಂಗ್ಲಾದೇಶ ಸರ್ಕಾರಿ ಸುದ್ದಿ ಸಂಸ್ಥೆ ಬಿಎಸ್‌ಎಸ್ ವರದಿ ಪ್ರಕಾರ, ಆ ಪ್ರತಿಭಟನಾಕಾರರು ಕೇವಲ ಹತ್ಯೆ ವಿರುದ್ಧ ಘೋಷಣೆ ಕೂಗಲಿಲ್ಲ, “ಇತರೆ ಹೇಳಿಕೆಗಳನ್ನೂ ನೀಡಿದ್ದಾರೆ. ಬಾಂಗ್ಲಾದೇಶದ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ತಪ್ಪುದಾರಿ ತಪ್ಪಿಸುವವುಗಳಲ್ಲ ಎಂದು ತಿಳಿಸಿದ್ದರು.

ಭಾರತೀಯ ಪತ್ರಿಕಾ ಪ್ರಕಟಣೆಗೆ ಪ್ರತಿಕ್ರಿಯಿಸದೇ ಇರಲು ಸಾಧ್ಯವಿಲ್ಲ. ಎರಡು ದೇಶಗಳೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಪರ್ಕದಲ್ಲಿವೆ. ಪರಿಸ್ಥಿತಿ ಹದಗೆಟ್ಟರೆ ನಮ್ಮ ರಾಯಭಾರಿ ಅಧಿಕಾರಿಗಳ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದ್ದರು. ಇದೇ ವೇಳೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಭಾರತ ಮೇಲೆ ಭರವಸೆ ಇದೆ ಎಂದು ಹೇಳಿದ್ದರು.

MEA spokesperson Randhir Jaiswal
ಬಾಂಗ್ಲಾದೇಶ: ಹಿಂದೂಗಳ ವಿರುದ್ಧ ಮತ್ತೆ ಭುಗಿಲೆದ್ದ ಹಿಂಸಾಚಾರ; ಹಲ್ಲೆ, ಬೆಂಕಿ ಹಚ್ಚಿ ವ್ಯಕ್ತಿಯ ಕೊಲೆ!

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಬಾಂಗ್ಲಾದೇಶ ರಾಯಭಾರ ಕಚೇರಿ ಆವರಣ ಪ್ರವೇಶಿಸಲು ಅಥವಾ ಭದ್ರತಾ ಬೇಲಿಯನ್ನು ದಾಟಲು ಯಾವುದೇ ಪ್ರಯತ್ನ ನಡೆದಿಲ್ಲ. ಪೊಲೀಸರು ಕೆಲವೇ ನಿಮಿಷಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ದೃಶ್ಯ ಸಾಕ್ಷ್ಯಗಳು ಸಾರ್ವಜನಿಕವಾಗಿ ಲಭ್ಯವಿವೆ. ವಿಯನ್ನಾ ಒಪ್ಪಂದದಂತೆ ಭಾರತವು ವಿದೇಶಿ ರಾಜತಾಂತ್ರಿಕ ಕಚೇರಿಗಳ ಭದ್ರತೆಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಬಾಂಗ್ಲಾದೇಶ ಮಾಧ್ಯಮಗಳ ವರದಿಗಳನ್ನು ನಿರಾಕರಿಸಿರುವ ಅವರು, ಈ ವರದಿಗಳು ತಪ್ಪಾಗಿದ್ದು, ದಾರಿತಪ್ಪಿಸುವ ಪ್ರಚಾರ ಎಂದು ಟೀಕಿಸಿದ್ದಾರೆ.

ಬಾಂಗ್ಲಾದೇಶ ರಾಯಭಾರಿ ಕಚೇರಿ ಬಳಿಭದ್ರತೆಯಲ್ಲಿ ಯಾವುದೇ ಉಲ್ಲಂಘನೆ ಅಥವಾ ರಾಜತಾಂತ್ರಿಕ ಕಚೇರಿಗೆ ಅಪಾಯ ಸಂಭವಿಸಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಆದರೆ ಭಾರತದ ಹೇಳಿಕೆಯನ್ನು ಬಾಂಗ್ಲಾದೇಶ ತೀವ್ರವಾಗಿ ಖಂಡಿಸಿದ್ದು, ಈ ವಿಷಯವನ್ನು “ಅತಿಸರಳವಾಗಿ” ಪರಿಗಣಿಸಲಾಗಿದೆ ಎಂದು ಆರೋಪಿಸಿದೆ.

ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹದಿ ಎಂಬುವವರನ್ನು ಮುಸುಕುಧಾರಿ ವ್ಯಕ್ತಿಗಳು ಡಿಸೆಂಬರ್ 12ರಂದು ಢಾಕಾದ ಬಿಜಯ್​ನಗರ್ ಬಳಿ ತಲೆಗೆ ಗುಂಡಿಕ್ಕಿದ್ದರು. ಸಿಂಗಾಪುರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತಾರೂ ಚಿಕಿತ್ಸೆ ಫಲಕಾರಿಯಾಗದೇ ಆತ ಡಿ. 18ರಂದು ನಿಧನವೊಂದಿದ್ದ. ಅದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದ ವೇಳೆ ಢಾಕಾದಲ್ಲಿ ಪ್ರಮುಖ ಪತ್ರಿಕಾ ಕಚೇರಿಗಳನ್ನೂ ಧ್ವಂಸಗೊಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡೈಲಿ ಸ್ಟಾರ್ ಸಂಪಾದಕ ಮಹ್ಫುಜ್ ಅನಾಮ್ ಅವರು, ಮೊದಲು ಪ್ರಥಮ್ ಹಲೋ ಮತ್ತು ಡೇಲಿ ಸ್ಟಾರ್ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ನಾವು ಮಾಡಿರುವ ಅಪರಾಧವೇನು? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com