ಅಖ್ಲಾಕ್ ಹತ್ಯೆ ಪ್ರಕರಣ: ಆರೋಪಿಗಳ ವಿರುದ್ಧದ ಪ್ರಕರಣ ಹಿಂಪಡೆಯಲು ಮುಂದಾಗಿದ್ದ ಯುಪಿ ಸರ್ಕಾರಕ್ಕೆ ಭಾರಿ ಹಿನ್ನಡೆ; ಕೋರ್ಟ್ ಹೇಳಿದ್ದೇನು?

ಪ್ರಕರಣದ ದೈನಂದಿನ ವಿಚಾರಣೆಗೆ ನ್ಯಾಯಾಲಯ ನಿರ್ದೇಶನ ನೀಡಿತು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.
Mohammad Akhlaq
ಅಖ್ಲಾಕ್online desk
Updated on

ಲಖನೌ: 2015 ರಲ್ಲಿ ನಡೆದ ಮೊಹಮ್ಮದ್ ಅಖ್ಲಾಕ್ ಹತ್ಯೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕರಣವನ್ನು ಹಿಂತೆಗೆದುಕೊಳ್ಳಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.

14 ಮಂದಿ ಬದುಕುಳಿದ ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿ ಸಿಆರ್‌ಪಿಸಿ ಸೆಕ್ಷನ್ 321 ರ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸೌರಭ್ ದ್ವಿವೇದಿ ವಜಾಗೊಳಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.

ಪ್ರಕರಣದ ದೈನಂದಿನ ವಿಚಾರಣೆಗೆ ನ್ಯಾಯಾಲಯ ನಿರ್ದೇಶನ ನೀಡಿತು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.

ಉತ್ತರ ಪ್ರದೇಶದ ದಾದ್ರಿಯಲ್ಲಿ ಐವತ್ತು ವರ್ಷದ ಮೊಹಮ್ಮದ್ ಅಖ್ಲಾಕ್ ಅವರನ್ನು ಸ್ಥಳೀಯ ಬಿಜೆಪಿ ನಾಯಕನ ಮಗ ಸೇರಿದಂತೆ ಅವರ ನೆರೆಹೊರೆಯವರು ಕ್ರೂರವಾಗಿ ಹೊಡೆದು ಕೊಂದುದ್ದರು ಎಂಬ ಆರೋಪ ಕೇಳಿಬಂದಿದೆ.

ಮುಸ್ಲಿಮರ ವಿರುದ್ಧ ಹಿಂದುತ್ವ ಗುಂಪು ಹಿಂಸಾಚಾರದಲ್ಲಿ ಹೆಚ್ಚಳವನ್ನು ಖಂಡಿಸಲು "ನನ್ನ ಹೆಸರಿನಲ್ಲಿ ಅಲ್ಲ" ಎಂಬ ಘೋಷಣೆಗಳನ್ನು ಒಳಗೊಂಡ ದೇಶಾದ್ಯಂತ ಪ್ರತಿಭಟನೆಗಳಿಗೆ ಈ ಗುಂಪು ಹತ್ಯೆ ಕಾರಣವಾಯಿತು.

ಗುಂಪು ಹಲ್ಲೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ಕೋರಿ ರಾಜ್ಯ ಸರ್ಕಾರ ಅಕ್ಟೋಬರ್ 15 ರಂದು ನ್ಯಾಯಾಲಯದಲ್ಲಿ ಹಿಂಪಡೆಯುವ ಅರ್ಜಿಯನ್ನು ಸಲ್ಲಿಸಿತು.

ಏತನ್ಮಧ್ಯೆ, ಅಖ್ಲಾಕ್ ಅವರ ಪತ್ನಿ ಉತ್ತರ ಪ್ರದೇಶ ಸರ್ಕಾರ ಆರೋಪಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯುವ ನಿರ್ಧಾರ ಮತ್ತು ಗೌತಮ್ ಬುದ್ಧ ನಗರ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಟರ್ ಸಲ್ಲಿಸಿದ ವಾಪಸಾತಿ ಅರ್ಜಿಯ ವಿರುದ್ಧ ಅಹ್ಲಾಖ್ ಅವರ ಪತ್ನಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

Mohammad Akhlaq
ದಾದ್ರಿ ಪ್ರಕರಣ: ಅಖ್ಲಾಕ್ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ

ಅಹ್ಲಾಖ್ ಅವರು ಹಸುವನ್ನು ಕೊಂದು ಅದರ ಮಾಂಸವನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ್ದಾರೆ ಎಂದು ಸ್ಥಳೀಯ ದೇವಾಲಯದಿಂದ ಬಂದ ಘೋಷಣೆಯ ನಂತರ ಸೆಪ್ಟೆಂಬರ್ 18, 2015 ರಂದು, ದಾದ್ರಿಯ ಬಿಸಾಡಾ ಗ್ರಾಮದಲ್ಲಿರುವ ಅಖ್ಲಾಕ್ ಅವರ ಮನೆಯ ಹೊರಗೆ ಗುಂಪೊಂದು ಜಮಾಯಿಸಿತ್ತು. ಸ್ಥಳೀಯ ಬಿಜೆಪಿ ನಾಯಕನ ಮಗ ವಿಶಾಲ್ ರಾಣಾ ಮತ್ತು ಸೋದರಸಂಬಂಧಿ ಶಿವಂ ನೇತೃತ್ವದ ಗುಂಪೊಂದು ಅಖ್ಲಾಕ್ ಮತ್ತು ಅವರ ಮಗ ಡ್ಯಾನಿಶ್ ಅವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಪ್ರಜ್ಞೆ ತಪ್ಪುವವರೆಗೂ ಹಲ್ಲೆ ಮಾಡಿತು.

ಅಖ್ಲಾಕ್ ನೋಯ್ಡಾ ಆಸ್ಪತ್ರೆಯಲ್ಲಿ ನಿಧನರಾದರೆ, ಡ್ಯಾನಿಶ್ ತಲೆಗೆ ತೀವ್ರವಾದ ಗಾಯಗಳಾಗಿ ಮತ್ತು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಬದುಕುಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com