ಲವರ್ ಜೊತೆ ಸೇರಿ ಗಂಡನನ್ನು ಕೊಂದು, ಮೃತದೇಹವನ್ನು 'ಗ್ರೈಂಡರ್' ನಲ್ಲಿ ರುಬ್ಬಿ, ಚರಂಡಿಗೆ ಎಸದ ಪತ್ನಿ!

ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳನ್ನು ರೂಬಿ ಮತ್ತು ಗೌರವ್ ಎಂದು ಗುರುತಿಸಲಾಗಿದ್ದು, ಅವರನ್ನು ಡಿಸೆಂಬರ್ 20 ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ
Police have recovered the grinder used to cut the body, along with other tools and arrested accused
ಆರೋಪಿಗಳನ್ನು ಬಂಧಿಸಿ, ಕೊಲೆಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು
Updated on

ಸಂಭಾಲ್: ಉತ್ತರ ಪ್ರದೇಶದಲ್ಲಿ ಕನಸಿನಲ್ಲೂ ಬೆಚ್ಚಿ ಬೀಳಿಸುವ ಭಯಾನಕ ಘಟನೆಯೊಂದು ನಡೆದಿದೆ. ಲವರ್ ಜೊತೆಗೆ ಸೇರಿದ ಮಹಿಳೆಯೊಬ್ಬಳು, ತನ್ನ ಗಂಡನನ್ನು ಹತ್ಯೆಗೈದಿದ್ದು, ಬಳಿಕ ಮೃತದೇಹವನ್ನು ಗ್ರೈಂಡರ್ ನಲ್ಲಿ ರುಬ್ಬಿ, ಚರಂಡಿಗೆ ಎಸೆದಿದ್ದಾರೆ.

ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳನ್ನು ರೂಬಿ ಮತ್ತು ಗೌರವ್ ಎಂದು ಗುರುತಿಸಲಾಗಿದ್ದು, ಅವರನ್ನು ಡಿಸೆಂಬರ್ 20 ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಕೆ ಬಿಷ್ಣೋಯ್ ತಿಳಿಸಿದ್ದಾರೆ.

ಪ್ರಕರಣ ಬೇದಿಸಿದ್ದು ಹೇಗೆ?

ಪೊಲೀಸರ ಪ್ರಕಾರ, ಚಂದೌಸಿ ಪ್ರದೇಶದ ಮೊಹಲ್ಲಾ ಚುನ್ನಿ ನಿವಾಸಿ ರೂಬಿ ನವೆಂಬರ್ 18 ರಂದು ದೂರು ನೀಡಿದ್ದು, ತನ್ನ ಪತಿ ರಾಹುಲ್ (38) ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಕೆಲವು ದಿನಗಳ ನಂತರ, ಡಿಸೆಂಬರ್ 15 ರಂದು ಈದ್ಗಾ ಪ್ರದೇಶದ ಬಳಿಯ ಚರಂಡಿಯಿಂದ ವಿಕೃತ ರೀತಿಯ ಮೃತ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಲೆ, ಕೈ ಮತ್ತು ಕಾಲು ಇಲ್ಲದ ಮೃತದೇಹ ಪತ್ತೆಯಾಗಿದೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಫೋರೆನ್ಸಿಕ್ ತಂಡವು ವಿವರವಾದ ಪರೀಕ್ಷೆಯನ್ನು ನಡೆಸಿದೆ. ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಯಿತು ಎಂದು ಎಸ್ಪಿ ಹೇಳಿದರು.

ತನಿಖೆ ವೇಳೆ ರೂಬಿ ಪಾತ್ರ ಬಯಲು: ತನಿಖೆಯ ವೇಳೆ, ದೇಹದ ಮೇಲೆ ರಾಹುಲ್ ಎಂದು ಬರೆದಿರುವುದು ಪೊಲೀಸರಿಗೆ ಗೊತ್ತಾಗಿದೆ. ಸಮೀಪದ ಪೊಲೀಸ್ ಠಾಣೆಗಳಲ್ಲಿ ಕಾಣೆಯಾದವರ ವರದಿ ಮತ್ತು ತಾಂತ್ರಿಕ ವಿಶ್ಲೇಷಣೆಯನ್ನು ಪರಿಶೀಲಿಸಿದಾಗ ರಾಹುಲ್ ಅವರ ಮೊಬೈಲ್ ಫೋನ್ ನವೆಂಬರ್ 18 ರಿಂದ ಸ್ವಿಚ್ ಆಫ್ ಆಗಿತ್ತು ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ವೇಳೆ ರೂಬಿ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಯಿತು. ವಿಚಾರಣೆ ವೇಳೆ, ರಾಹುಲ್ ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ದ ನಂತರ ಪ್ರಿಯಕರ ಗೌರವ್ ಸಹಾಯದಿಂದ ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಎಸ್ಪಿ ತಿಳಿಸಿದ್ದಾರೆ.

ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ: ಆರೋಪಿಗಳು ರಾಹುಲ್ ಗೆ ಕಬ್ಬಿಣದ ರಾಡ್ ನಿಂದ ಹೊಡೆದ ನಂತರ ಆತ ಮೃತಪಟ್ಟಿದ್ದಾನೆ. ನಂತರ ಅವರು ಗ್ರೈಂಡರ್ ತಂದು ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದು, ದೇಹದ ಒಂದು ಭಾಗವನ್ನು ಚರಂಡಿಗೆ ಎಸೆಯಲಾಗಿತ್ತು, ಉಳಿದ ಭಾಗಗಳನ್ನು ರಾಜ್‌ಘಾಟ್‌ಗೆ ತೆಗೆದುಕೊಂಡು ಹೋಗಿ ಗಂಗಾ ನದಿಗೆ ಎಸೆಯಲಾಗಿತ್ತು ಎಂದು ಎಸ್ ಪಿ ಮಾಹಿತಿ ನೀಡಿದರು.

Police have recovered the grinder used to cut the body, along with other tools and arrested accused
ಸೊಸೆ ಜೊತೆ ತಂದೆ ಅಕ್ರಮ ಸಂಬಂಧ: ಮಗನ ಕೊಲೆ ಆರೋಪ; ತಂದೆ ಮಾಜಿ DGP ಮುಸ್ತಫಾ, ತಾಯಿ, ಪತ್ನಿ ವಿರುದ್ಧ FIR!

ಮೃತದೇಹವನ್ನು ಕತ್ತರಿಸಲು ಬಳಸಿದ ಗ್ರೈಂಡರ್, ಕಬ್ಬಿಣದ ರಾಡ್ ಮತ್ತು ಹಲ್ಲೆಗೆ ಬಳಸಿದ ಇತರ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತರ ಡಿಎನ್‌ಎ ಮಾದರಿಗಳನ್ನು ಸಹ ಸಂರಕ್ಷಿಸಲಾಗಿದೆ ಮತ್ತು ಖಚಿತವಾಗಿ ಗುರುತನ್ನು ಪತ್ತೆ ಹಚ್ಚಲು ಮತ್ತು ಪ್ರಕರಣವನ್ನು ಬಲಪಡಿಸಲು ಅವರ ಮಕ್ಕಳೊಂದಿಗೆ ಹೊಂದಿಸಲಾಗುವುದು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com