ಕೇಂದ್ರ ಬಜೆಟ್‌: ಇ-ಕೋರ್ಟ್‌ ಹಂತ IIIಕ್ಕೆ 1,500 ಕೋಟಿ ರೂ ಹಂಚಿಕೆ

ರಾಷ್ಟ್ರೀಯ ಇ-ಆಡಳಿತ ಯೋಜನೆಯ ಭಾಗವಾಗಿ, ಭಾರತೀಯ ನ್ಯಾಯಾಂಗದ ಐಸಿಟಿ ಸಕ್ರಿಯಗೊಳಿಸುವಿಕೆಗಾಗಿ ಇ-ಕೋರ್ಟ್‌ಗಳ ಯೋಜನೆಯು 2007 ರಿಂದ ಅನುಷ್ಠಾನದಲ್ಲಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ದೇಶದಲ್ಲಿ ಡಿಜಿಟಲ್, ಆನ್‌ಲೈನ್ ಮತ್ತು ಕಾಗದರಹಿತ ಕೆಳ ನ್ಯಾಯಾಲಯಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಮೂರನೇ ಹಂತದ ಇ-ಕೋರ್ಟ್‌ಗಳಿಗೆ ಕೇಂದ್ರ ಬಜೆಟ್‌ನಲ್ಲಿ 1,500 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.

ಇಂದು ಲೋಕಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನ್ಯಾಯ ವಿತರಣೆ ಮತ್ತು ಕಾನೂನು ಸುಧಾರಣೆಗಾಗಿ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಇ-ಕೋರ್ಟ್‌ ಹಂತ IIIಕ್ಕೆ ಹಣ ಹಂಚಿಕೆ ಮಾಡಲಾಗಿದೆ ಎಂದರು.

ರಾಷ್ಟ್ರೀಯ ಇ-ಆಡಳಿತ ಯೋಜನೆಯ ಭಾಗವಾಗಿ, ಭಾರತೀಯ ನ್ಯಾಯಾಂಗದ ಐಸಿಟಿ ಸಕ್ರಿಯಗೊಳಿಸುವಿಕೆಗಾಗಿ ಇ-ಕೋರ್ಟ್‌ಗಳ ಯೋಜನೆಯು 2007 ರಿಂದ ಅನುಷ್ಠಾನದಲ್ಲಿದೆ. ಈ ಯೋಜನೆಯ ಎರಡನೇ ಹಂತವು 2023 ರಲ್ಲಿ ಮುಕ್ತಾಯಗೊಂಡಿತು.

ನಿರ್ಮಲಾ ಸೀತಾರಾಮನ್
ಬಜೆಟ್‌ನಲ್ಲಿ ಕೇವಲ 574 ಕೋಟಿ ರೂ ಹಂಚಿಕೆ; ಈ ವರ್ಷವೂ ಜನಗಣತಿ ಅನುಮಾನ

2023 ರಿಂದ ಪ್ರಾರಂಭವಾಗಿರುವ ಇ-ಕೋರ್ಟ್‌ಗಳ ಯೋಜನೆಯ ಮೂರನೇ ಹಂತವು, ಪರಂಪರೆಯ ದಾಖಲೆಗಳು ಸೇರಿದಂತೆ ಸಂಪೂರ್ಣ ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣದ ಮೂಲಕ ಡಿಜಿಟಲ್, ಆನ್‌ಲೈನ್ ಮತ್ತು ಕಾಗದರಹಿತ ನ್ಯಾಯಾಲಯಗಳತ್ತ ಸಾಗುವ ಗುರಿಯನ್ನು ಹೊಂದಿದೆ.

ಮೂರನೇ ಹಂತದ ಮುಖ್ಯ ಉದ್ದೇಶವೆಂದರೆ ನ್ಯಾಯಾಂಗಕ್ಕಾಗಿ ಏಕೀಕೃತ ತಂತ್ರಜ್ಞಾನ ವೇದಿಕೆಯನ್ನು ರಚಿಸುವುದು, ಇದು ನ್ಯಾಯಾಲಯಗಳು, ದಾವೆದಾರರು ಮತ್ತು ಇತರ ಅರ್ಜಿದಾರರ ನಡುವೆ ತಡೆರಹಿತ ಮತ್ತು ಕಾಗದರಹಿತ ಇಂಟರ್ಫೇಸ್ ಅನ್ನು ಒದಗಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com