
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ 2025ರಲ್ಲಿ ಮಿತ್ರ ಪಕ್ಷ ಜೆಡಿಯು ಆಡಳಿತ ಹೊಂದಿರುವ ಬಿಹಾರ ರಾಜ್ಯಕ್ಕೆ ಮಹಾಪೂರ ಕೊಡುಗೆ ಘೋಷಿಸಲಾಗಿದೆ.
ಮಖಾನಾ ಮಂಡಳಿ, ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮತ್ತು ಮಿಥಿಲಾಂಚಲ್ ಪ್ರದೇಶದಲ್ಲಿ ಪಶ್ಚಿಮ ಕೋಶಿ ಕಾಲುವೆ ಯೋಜನೆಗೆ ಆರ್ಥಿಕ ನೆರವು ಸೇರಿ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
2025 ರ ಬಜೆಟ್‌ನಲ್ಲಿ ಬಿಹಾರಕ್ಕೆ ಹಲವಾರು ಯೋಜನೆಗಳ ಘೋಷಣೆಯು ಉದ್ಯಮಿಗಳು ಮತ್ತು ನಾಗರಿಕರನ್ನು ಸಂತೋಷಪಡಿಸಿದರೆ, ಸಾಮಾಜಿಕ ಮಾಧ್ಯಮಗಳು ಮೀಮ್‌ಗಳಿಂದ ತುಂಬಿ ಹೋಗಿವೆ. ಅಂತಹ ಕೆಲವೊಂದು ಹಾಸ್ಯದ ಮೀಮ್ಸ್ ಗಳು ಮೀಮ್ಸ್ ಗಳು ಇಂತಿವೆ.
2025-26ರ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು. ಅಲ್ಲದೇ, ಐಐಟಿ ಪಾಟ್ನಾದಲ್ಲಿ ಹಾಸ್ಟೆಲ್ ಮತ್ತು ಇತರ ಮೂಲಸೌಕರ್ಯ ಸಾಮರ್ಥ್ಯದ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದಾರೆ.
ಪೂರ್ವೋದಯ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶವನ್ನು ಒಳಗೊಂಡ ಪೂರ್ವ ಪ್ರದೇಶದ ರಾಜ್ಯಗಳ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
Advertisement