ಮುಂದಿನ ವಾರ ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ಸಚಿವೆ ನಿರ್ಮಲಾ ಸೀತಾರಾಮನ್

ಇದು ಜಾರಿಗೆ ಬಂದಾಗ, ಹೊಸ ಆದಾಯ ತೆರಿಗೆ ಮಸೂದೆಯು ಆದಾಯ ತೆರಿಗೆ ಲೆಕ್ಕಾಚಾರ ಮತ್ತು ಸಲ್ಲಿಸುವಿಕೆಯನ್ನು ಸರಳಗೊಳಿಸುತ್ತದೆ.
ಮುಂದಿನ ವಾರ ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ಸಚಿವೆ ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಸ್ತುತ ಕಾನೂನುಗಳನ್ನು ಸರಳೀಕರಿಸಲು ಪ್ರಯತ್ನಿಸುವ ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಶನಿವಾರ ಕೇಂದ್ರ ಬಜೆಟ್ 2025 ನ್ನು ಮಂಡಿಸುತ್ತಾ ಘೋಷಿಸಿದ್ದಾರೆ.

ಹೊಸ ಆದಾಯ ತೆರಿಗೆ ಮಸೂದೆಯು ಪ್ರಸ್ತುತ ಆದಾಯ ತೆರಿಗೆ ಕಾನೂನನ್ನು ಸರಳೀಕರಿಸುತ್ತದೆ, ಹೊಸ ಆದಾಯ ತೆರಿಗೆ ಮಸೂದೆಯು ಕಾನೂನುಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಮಾಡಲು ಮತ್ತು ಪುಟಗಳ ಸಂಖ್ಯೆಯನ್ನು ಸುಮಾರು ಶೇಕಡಾ 60ರಷ್ಟು ಕಡಿಮೆಗೊಳಿಸಲು ಪ್ರಯತ್ನಿಸುತ್ತದೆ.

'ಮೊದಲು ನಂಬಿಕೆ ಇಡಿ, ನಂತರ ಪರಿಶೀಲಿಸಿ' ಎಂಬ ಪರಿಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸರ್ಕಾರ ಮುಂದಿನ ವಾರ ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇದು ಜಾರಿಗೆ ಬಂದಾಗ, ಹೊಸ ಆದಾಯ ತೆರಿಗೆ ಮಸೂದೆಯು ಆದಾಯ ತೆರಿಗೆ ಲೆಕ್ಕಾಚಾರ ಮತ್ತು ಸಲ್ಲಿಸುವಿಕೆಯನ್ನು ಸರಳಗೊಳಿಸುತ್ತದೆ. 2025 ರ ಕೇಂದ್ರ ಬಜೆಟ್‌ನ ಮೊದಲಾರ್ಧವು ಜನವರಿ 31 ರಿಂದ ಫೆಬ್ರವರಿ 13 ರವರೆಗೆ ನಿಗದಿಯಾಗಿದೆ.

ಮುಂದಿನ ವಾರ ಸಂಸತ್ತಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ಸಚಿವೆ ನಿರ್ಮಲಾ ಸೀತಾರಾಮನ್
Union Budget 2025 Highlights: 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ಇಲ್ಲ; ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ

ಲೋಕಸಭಾ ಚುನಾವಣೆಯ ನಂತರ ಕಳೆದ ವರ್ಷ ಜುಲೈ 2024 ರ ಬಜೆಟ್ ಘೋಷಣೆಯಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರು ದಶಕಗಳಷ್ಟು ಹಳೆಯದಾದ 1961 ರ ಆದಾಯ ತೆರಿಗೆ ಕಾಯ್ದೆಯ - 23 ಅಧ್ಯಾಯಗಳು ಮತ್ತು 298 ವಿಭಾಗಗಳ - ಸಮಗ್ರ ಪರಿಶೀಲನೆಯನ್ನು ಆರು ತಿಂಗಳೊಳಗೆ ಘೋಷಿಸಿದ್ದರು.

ಹೊಸ ಆದಾಯ ತೆರಿಗೆ ಮಸೂದೆಯು ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯ ತಿದ್ದುಪಡಿಯಲ್ಲ. ಸಂಪೂರ್ಣ ಹೊಸದಾಗಿದ್ದು, ಅಸ್ತಿತ್ವದಲ್ಲಿರುವ ಕಾಯ್ದೆಗೆ ತಿದ್ದುಪಡಿಯಲ್ಲ. ಪ್ರಸ್ತುತ, ಕರಡು ಕಾನೂನನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com