
ನವದೆಹಲಿ: ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಆರಂಭಿಸಿದ್ದು, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದೇ ವೇಳೆ ವಿಪಕ್ಷಗಳು ಗದ್ದಲ ಸೃಷ್ಟಿಸಿದ್ದು, ಸಮಾಜವಾದಿ ಪಕ್ಷದ ಸಂಸದರು ಸದನದಿಂದ ಹೊರ ನಡೆದಿದ್ದಾರೆ.
ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆಯೇ ಗದ್ದಲ ಸೃಷ್ಟಿಸಿದ ವಿಪಕ್ಷಗಳು, ಉತ್ತರಪ್ರದೇಶದ ಪ್ರಯಾಗ್ ರಾಜ್'ನ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ದುರಂತ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ಆದರೆ, ಇದಕ್ಕೆ ಸ್ಪೀಕರ್ ಅನುಮತಿ ನಿರಾಕಸಿದರು, ಬಳಿಕ ನಿರ್ಮಲಾ ಅವರು ಬಜೆಟ್ ಮಂಡನೆ ಮಾಡುತ್ತಿದ್ದಂತೆಯೇ ಕೆಂಡಾಮಂಡಲಗೊಂಡ ಸಮಾಜವಾದಿ ಪಕ್ಷದ ಸಂಸದರು, ಸದನದಿಂದ ಹೊರನಡೆದರು.
ಬಳಿಕ ಬಜೆಟ್ ನಿರ್ಮಲಾ ಅವರು ಬಜೆಟ್ ಮಂಡನೆ ಆರಂಭಿಸಿದರು. ಗೌರವಾನ್ವಿತ ಸ್ಪೀಕರ್, ನಾನು 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಪ್ರಸ್ತುತಪಡಿಸುತ್ತೇನೆ, ಅಭಿವೃದ್ದಿಯನ್ನು ಹೆಚ್ಚಿಸಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಯುವಜನತೆ, ದಲಿತರು, ಅನ್ನದಾತರು ಮತ್ತು ಮಹಿಳೆಯರನ್ನು ಉದ್ದೇಶವಾಗಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತಿದೆ ಎಂದು ಹೇಳಿದರು.
Advertisement