Union Budget 2025: ಕಾರಾಗೃಹಗಳ ಆಧುನೀಕರಣಕ್ಕೆ 300 ಕೋಟಿ ರೂ ಮೀಸಲು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಜೈಲುಗಳನ್ನು ನವೀಕರಿಸಲು ಮತ್ತು ಸುಧಾರಿಸಲು ಹಣವನ್ನು ಘೋಷಿಸಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಕಾರಾಗೃಹಗಳ ಆಧುನೀಕರಣಕ್ಕಾಗಿ 300 ಕೋಟಿ ರೂಪಾಯಿಗಳ ಬಜೆಟ್‌ ಮೀಸಲಿಡುವುದಾಗಿ ಕೇಂದ್ರ ಸರ್ಕಾರವು ಶನಿವಾರ ಘೋಷಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ಅಷ್ಟೇ ಹಣವನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ನಂತರ ಅದನ್ನು 75 ಕೋಟಿ ರೂ.ಗೆ ಪರಿಷ್ಕರಿಸಲಾಯಿತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಜೈಲುಗಳನ್ನು ನವೀಕರಿಸಲು ಮತ್ತು ಸುಧಾರಿಸಲು ಹಣವನ್ನು ಘೋಷಿಸಲಾಗಿದೆ. ಜೈಲು ಸೌಲಭ್ಯಗಳು ಮತ್ತು ಸೇವೆಗಳನ್ನು ಆಧುನೀಕರಿಸುವಲ್ಲಿ ಹಣವನ್ನು ಹೂಡಿಕೆ ಮಾಡಲು ಸರ್ಕಾರ ಯೋಜಿಸಿದೆ.

2024-25ನೇ ಆರ್ಥಿಕ ವರ್ಷದಲ್ಲಿ ಜೈಲುಗಳ ಆಧುನೀಕರಣಕ್ಕಾಗಿ ಸರ್ಕಾರವು ಆರಂಭದಲ್ಲಿ 300 ಕೋಟಿ ರೂ.ಗಳನ್ನು ಒದಗಿಸಿತ್ತು. ಆದರೆ, ನಂತರ ಅದನ್ನು 75 ಕೋಟಿ ರೂ.ಗೆ ಪರಿಷ್ಕರಿಸಲಾಯಿತು. 2023-24ರಲ್ಲಿ ಕಾರಾಗೃಹಗಳ ಆಧುನೀಕರಣಕ್ಕೆ 86.95 ಕೋಟಿ ರೂ. ನೀಡಲಾಗಿತ್ತು.

ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಜೈಲುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ನ್ಯಾಯವನ್ನು ಕಾಪಾಡಲು ಮತ್ತು ಅಪರಾಧಿಗಳಿಗೆ ಪುನರ್ವಸತಿ ಕಲ್ಪಿಸಲು ಸುವ್ಯವಸ್ಥಿತ ಕಾರಾಗೃಹಗಳು ಅಗತ್ಯವಾಗಿದೆ.

Representational image
Union Budget 2025: ಮಧ್ಯಮ ವರ್ಗದವರು ಪ್ರಧಾನಿ ಮೋದಿ ಹೃದಯದಲ್ಲಿ ಸದಾ ಇರುತ್ತಾರೆ- ಅಮಿತ್ ಶಾ

2023ರ ಮೇನಲ್ಲಿ ಗೃಹ ಸಚಿವಾಲಯವು ಗಂಭೀರ ಅಪರಾಧಿಗಳಿಗಾಗಿ ಹೆಚ್ಚಿನ ಭದ್ರತೆ ಜೈಲುಗಳು, ಸಾಮಾನ್ಯ ಕೈದಿಗಳಿಗಾಗಿ ತೆರೆದ ಜೈಲುಗಳು ಮತ್ತು ಪುನರಾವರ್ತಿತ ಅಪರಾಧಿಗಳು ಮತ್ತು ಅಪಾಯಕಾರಿ ಎಂದು ಪರಿಗಣಿಸುವವರ ಅಪರಾಧ ಚಟುವಟಿಕೆಗಳಿಂದ ಸಮಾಜವನ್ನು ರಕ್ಷಿಸುವ ಗುರಿಯನ್ನು ಗುರಿಯೊಂದಿಗೆ ಪ್ರಸ್ತಾವಿತ 'ಮಾದರಿ ಕಾರಾಗೃಹ ಕಾಯ್ದೆ'ಯ ವಿಶ್ಲೇಷಣೆ ನಡೆಸಿದೆ.

ಕೈದಿಗಳಿಗೆ ಕಾನೂನು ನೆರವು, ಸನ್ನಡತೆಯನ್ನು ಉತ್ತೇಜಿಸಲು ಪೆರೋಲ್, ಫರ್ಲೋ (ತಾತ್ಕಾಲಿಕ) ಮತ್ತು ಅಕಾಲಿಕ ಬಿಡುಗಡೆ ಇತ್ಯಾದಿಗಳನ್ನು ಈ ಕಾಯ್ದೆಯು ಒಳಗೊಂಡಿರುತ್ತದೆ. ಇದು ಕೈದಿಗಳ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಸಮಾಜದಲ್ಲಿ ಅವರ ಪುನರ್ವಸತಿ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com