'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ಸಂಸತ್ತಿನಲ್ಲಿ ಪ್ರದರ್ಶನ

ಪತ್ರಿಕಾ ಪ್ರಕಟಣೆ ಪ್ರಕಾರ, ಚಿತ್ರ ಪ್ರದರ್ಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸತ್ತಿನ ಸದಸ್ಯರು ಮತ್ತು ಸಾಂಸ್ಕೃತಿಕ ವಲಯಗಳ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.
'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ಚಿತ್ರದ ಸ್ಟಿಲ್
'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ಚಿತ್ರದ ಸ್ಟಿಲ್
Updated on

ನವದೆಹಲಿ: ಚಲನಚಿತ್ರ ವಿತರಣಾ ಕಂಪನಿ ಗೀಕ್ ಪಿಕ್ಚರ್ಸ್ 1993ರ ಜಪಾನೀಸ್-ಭಾರತೀಯ ಆನಿಮೇಟೆಡ್ ಚಿತ್ರ 'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ'ದ ವಿಶೇಷ ಪ್ರದರ್ಶನವನ್ನು ಫೆಬ್ರುವರಿ 15 ರಂದು ಸಂಸತ್ತಿನಲ್ಲಿ ಆಯೋಜಿಸಲು ಸಿದ್ಧವಾಗಿದೆ ಎಂದು ಭಾನುವಾರ ತಿಳಿಸಿದೆ.

ಪತ್ರಿಕಾ ಪ್ರಕಟಣೆ ಪ್ರಕಾರ, ಚಿತ್ರ ಪ್ರದರ್ಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸತ್ತಿನ ಸದಸ್ಯರು ಮತ್ತು ಸಾಂಸ್ಕೃತಿಕ ವಲಯಗಳ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.

'ಚಿತ್ರ ಪ್ರದರ್ಶನಕ್ಕೆ ಭಾರತದ ಸಂಸತ್ತು ಅವಕಾಶ ನೀಡುತ್ತಿರುವುದಕ್ಕೆ ನಾವು ಆಳವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ಕೆಲಸವನ್ನು ಇಂತಹ ಗೌರವಾನ್ವಿತ ಮತ್ತು ಪ್ರಮುಖ ಮಟ್ಟದಲ್ಲಿ ಗುರುತಿಸುವುದು ಒಂದು ದೊಡ್ಡ ಗೌರವವಾಗಿದೆ. ಈ ಪ್ರದರ್ಶನವು ಕೇವಲ ಚಿತ್ರದ ಪ್ರದರ್ಶನವಲ್ಲ. ಬದಲಿಗೆ, ನಮ್ಮ ಶ್ರೀಮಂತ ಪರಂಪರೆ ಮತ್ತು ರಾಮಾಯಣದ ಕಥೆಯ ಆಚರಣೆಯಾಗಿದೆ. ಇದು ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಿದೆ' ಎಂದು ಗೀಕ್ ಪಿಕ್ಚರ್ಸ್‌ನ ಸಹ-ಸಂಸ್ಥಾಪಕ ಅರ್ಜುನ್ ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ಭಾರತದಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಅದರ ಮೂಲ ಇಂಗ್ಲಿಷ್ ಆವೃತ್ತಿಯೊಂದಿಗೆ ಜನವರಿ 24 ರಂದು 4K ಸ್ವರೂಪದಲ್ಲಿ ಬಿಡುಗಡೆಯಾಯಿತು.

'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ಚಿತ್ರದ ಸ್ಟಿಲ್
ರಾಮಾಯಣ, ಮಹಾಭಾರತ ಅರೇಬಿಕ್ ಗೆ ಅನುವಾದ: ಭೇಟಿಯಾದ ಪ್ರಧಾನಿ ಮೋದಿ

ಈ ಅನಿಮೇಟೆಡ್ ಚಿತ್ರವನ್ನು ಮೂಲತಃ 2024ರ ಅಕ್ಟೋಬರ್ 18ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದಾಗ್ಯೂ, ದೇಶದಾದ್ಯಂತ ಹೆಚ್ಚಿನ ಪ್ರೇಕ್ಷಕರಿಗೆ ಚಿತ್ರವನ್ನು ತಲುಪಿಸಲೆಂದು ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಯಿತು. ನಂತರ ಜನವರಿ 24ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಎಎ ಫಿಲ್ಮ್ಸ್ ಮತ್ತು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಈ ಚಿತ್ರವನ್ನು ವಿತರಿಸುತ್ತಿದೆ.

'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ಚಿತ್ರವನ್ನು ಯುಗೋ ಸಾಕೋ, ರಾಮ್ ಮೋಹನ್ ಮತ್ತು ಕೊಯಿಚಿ ಸಸಾಕಿ ನಿರ್ದೇಶಿಸಿದ್ದಾರೆ.

'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ಚಿತ್ರವನ್ನು 1993ರಲ್ಲಿ 24ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಭಾರತದಲ್ಲಿ ಪ್ರದರ್ಶಿಸಲಾಯಿತು. ಆದರೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ.

2000ರ ದಶಕದ ಆರಂಭದಲ್ಲಿ ಟಿವಿ ಚಾನೆಲ್‌ಗಳಲ್ಲಿ ಮರುಪ್ರಸಾರವಾದ ನಂತರ ಇದು ಭಾರತೀಯ ಪ್ರೇಕ್ಷಕರಲ್ಲಿ ಜನಪ್ರಿಯವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com