
ಮುಂಬೈ: ಇಂಗ್ಲೆಂಡ್ ನ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಭಾನುವಾರ ಮುಂಬೈಗೆ ಭೇಟಿ ನೀಡಿದ್ದು, ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದಾರೆ. ದಕ್ಷಿಣ ಮುಂಬೈನ ಪಾರ್ಸಿ ಜಿಮ್ಖಾನಾಗೆ ಭೇಟಿ ನೀಡಿದ ರಿಷಿ ಸುನಕ್, ಕ್ರಿಕೆಟ್ ಆಟವನ್ನು ಆನಂದಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುನಕ್, ಟೆನಿಸ್ ಬಾಲ್ ಕ್ರಿಕೆಟ್ ಆಟವಿಲ್ಲದೆ ಮುಂಬೈನ ಯಾವುದೇ ಪ್ರವಾಸ ಪೂರ್ಣವಾಗುವುದಿಲ್ಲ ಎಂದಿದ್ದಾರೆ.
ಪಾರ್ಸಿ ಜಿಮ್ಖಾನಾ ಕ್ಲಬ್ ವಾರ್ಷಿಕೋತ್ಸವದಲ್ಲಿ ನಿಮ್ಮೆಲ್ಲರೊಂದಿಗೆ ಇರಲು ಸಂತೋಷವಾಗಿದೆ. ಎಂತಹ ಅಸಾಧಾರಣ ಸಾಧನೆ. ತುಂಬಾ ಇತಿಹಾಸ ಮತ್ತು ಹಲವಾರು ರೋಚಕ ಸಂಗತಿಗಳು ಬರಲಿವೆ. ಮತ್ತಷ್ಟು ಭೇಟಿಗಳಿಗಾಗಿ ಎದುರು ನೋಡುತ್ತಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಐಕಾನಿಕ್ ಪಾರ್ಸಿ ಜಿಮ್ಖಾನಾವನ್ನು ಫೆಬ್ರವರಿ 25, 1885 ರಂದು ಸ್ಥಾಪಿಸಲಾಯಿತು. ಸರ್ ಜಮ್ಸೆಟ್ಜಿ ಜೆಜೀಭೋಯ್ ಅದರ ಸಂಸ್ಥಾಪಕ ಅಧ್ಯಕ್ಷರಾದರೆ, ಜಮ್ಸೆಟ್ಜಿ ಟಾಟಾ ಅದರ ಅಧ್ಯಕ್ಷರಾಗಿದ್ದರು.ಇದನ್ನು 1887 ರಲ್ಲಿ ಸುಂದರವಾದ ಮರೈನ್ ಡ್ರೈವ್ ಗೆ ಸ್ಥಳಾಂತರಿಸಲಾಯಿತು.
Advertisement