ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿರುವ ಥರ್ಡ್ ವೇವ್ ಕಾಫಿಯಲ್ಲಿ ಬ್ರಿಟಿಷ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಕಾಫಿ ಸವಿಯುತ್ತಿರುವ ಫೋಟೋಗಳು ವೈರಲ್ ಆಗಿವೆ.
ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಕೌಂಟರ್ ನಲ್ಲಿ ಆರ್ಡರ್ ಮಾಡುತ್ತಿರುವ ಮತ್ತು ಕೆಫೆಯಲ್ಲಿದ್ದ ಜನರೊಂದಿಗೆ ಖುಷಿಯಿಂದ ಸೆಲ್ಫಿಗೂ ಪೋಸ್ ಕೊಟ್ಟಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಯಾವಾಗಲೂ ಫಾರ್ಮಲ್‌ಗಳತ್ತ ಒಲವು ಹೊಂದಿರುವ ರಿಷಿ ಸುನಕ್ ಅವರು ಎಂದಿನಂತೆ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಅಕ್ಷತಾ ಮೂರ್ತಿ ಅವರು ಕುರ್ತಾವನ್ನು ಧರಿಸಿದ್ದರು.
ಇದಕ್ಕು ಮುನ್ನ ರಿಷಿ ಸುನಕ್, ಪತ್ನಿ ಅಕ್ಷತಾ, ಮತ್ತು ಅತ್ತೆ ಸುಧಾ ಮೂರ್ತಿ ಹಾಗೂ ಮಾವ ನಾರಾಯಣ ಮೂರ್ತಿ ಅವರೊಂದಿಗೆ ಜಯನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ಆರ್ಶೀವಾದ ಪಡೆದಿದ್ದರು.
ರಿಷಿ ಸುನಕ್ ಅವರು 2022 ರಿಂದ 2024 ರವರೆಗೆ ಬ್ರಿಟನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
Advertisement