
ಬೆಂಗಳೂರು: ನಟ ಪ್ರಕಾಶ್ ರಾಜ್ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡುತ್ತಿರುವ ರೀತಿಯ AI ಫೋಟೋ ವೈರಲ್ ಆಗಿದ್ದ ಬೆನ್ನಲ್ಲೇ ಬಹುಭಾಷಾ ನಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈಗ ಮತ್ತೊಮ್ಮೆ ಪ್ರಕಾಶ್ ರಾಜ್ ಕುಂಭಮೇಳದ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ಕಾರಣ ಅವರು ನೀಡಿರುವ ಹೇಳಿಕೆ. ಈಗ ಮತ್ತೊಮ್ಮೆ ಪ್ರಕಾಶ್ ರಾಜ್ ಕುಂಭಮೇಳದ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ಕಾರಣ ಅವರು ನೀಡಿರುವ ಹೇಳಿಕೆ.
ಜನರು ಕುಂಭಮೇಳಕ್ಕೆ ಹೋಗುವುದರ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕುಂಭಮೇಳಕ್ಕೆ ಹೋದ್ರೆ ತಪ್ಪೇನಿದೆ? ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಕುಂಭ ಮೇಳ ಎನ್ನುವುದು ಪುಣ್ಯ ಸ್ಥಾನ. ಹಲವರಿಗೆ ಅದರ ಮೇಲೆ ನಂಬಿಕೆ ಇದೆ, ನಂಬಿಕೆ ಇದ್ದವರು ಹೋಗುತ್ತಾರೆ. ಅವರವರ ನಂಬಿಕೆ ಅವರವರಿಗೆ. ನಂಬಿಕೆಯನ್ನು ಪ್ರಶ್ನೆ ಮಾಡಲು ನಾನು ಯಾರು? ಎಂದು ಹೇಳಿರುವ ಪ್ರಕಾಶ್ ರಾಜ್, ನನಗೆ ವೈಯಕ್ತಿಕವಾಗಿ ದೇವರ ಮೇಲೆ ನಂಬಿಕೆ ಇಲ್ಲ. ನಾನು ದೇವರು ಇಲ್ಲದೇ ಬದುಕುತ್ತೇನೆ ಆದರೆ ಮನುಷ್ಯರು ಇಲ್ಲದೇ ಬದುಕುವುದಿಲ್ಲ. ಸಮಸ್ಯೆಗಳು ಬಂದಲ್ಲಿ ನಮಗೆ ಮನುಷ್ಯರು ಬೇಕು ಎಂದು ನಾನು ನಂಬುತ್ತೇನೆ. ಹಾಗೆಂದ ಮಾತ್ರಕ್ಕೆ ಬೇರೆಯವರ ನಂಬಿಕೆಗಳನ್ನು ಪ್ರಶ್ನೆ ಮಾಡುವುದಿಲ್ಲ. ಒಬ್ಬರ ಮನಸ್ಸಿಗೆ ಶಾಂತಿ, ಚೈತನ್ಯ ಕೊಡುತ್ತದೆ ಎಂತಾದರೆ ಅವರು ಕುಂಭಮೇಳಕ್ಕೆ ಹೋದರೆ ತಪ್ಪೇನೂ ಇಲ್ಲ. ಆದರೆ ಈ ವಿಷಯಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು, ಸುಳ್ಳು ಸುದ್ದಿ ಹರಿಬಿಡುವುದನ್ನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.
ನನ್ನ ಪತ್ನಿ ದೇವಸ್ಥಾನಕ್ಕೆ ಹೋಗುತ್ತಾಳೆ. ಅದನ್ನು ನಾನು ಎಂದಿಗೂ ಬೇಡ ಎಂದಿಲ್ಲ. ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎನ್ನುವುದು ನನ್ನ ಆಸೆ. ನಾನು ಸದಾ ಹಿಂದೂ ಧರ್ಮದ ವಿರುದ್ಧ ಮಾತ್ರ ಮಾತನಾಡುತ್ತೇನೆ ಎನ್ನುವುದು ಸರಿಯಲ್ಲ. ಎಲ್ಲಾ ಧರ್ಮಗಳ ಬಗ್ಗೆಯೂ ಮಾತನಾಡಿದ್ದೇನೆ, ಆದರೆ ಬೇರೆಯದ್ದು ಹೈಲೈಟ್ ಆಗುವುದಿಲ್ಲ ಎಂದು ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement