ಕೆಲಸದ ಸಮಯ ವಾರಕ್ಕೆ 70 ಅಥವಾ 90 ಗಂಟೆಗೆ ಹೆಚ್ಚಿಸುವ ಪ್ರಸ್ತಾಪವಿಲ್ಲ: ಕೇಂದ್ರ

"ವಾರಕ್ಕೆ ಗರಿಷ್ಠ ಕೆಲಸದ ಸಮಯವನ್ನು 70 ಅಥವಾ 90 ಗಂಟೆಗಳವರೆಗೆ ಹೆಚ್ಚಿಸುವ ಯಾವುದೇ ಪ್ರಸ್ತಾಪವು ಸರ್ಕಾರದ ಮುಂದೆ ಇಲ್ಲ"
ಕೆಲಸದ ಸಮಯ
ಕೆಲಸದ ಸಮಯ
Updated on

ನವದೆಹಲಿ: ವಾರಕ್ಕೆ ಗರಿಷ್ಠ ಕೆಲಸದ ಸಮಯವನ್ನು 70 ಅಥವಾ 90 ಗಂಟೆಗಳವರೆಗೆ ಹೆಚ್ಚಿಸುವ ಯಾವುದೇ ಪ್ರಸ್ತಾಪವನ್ನು ಪರಿಗಣಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ.

ಇತ್ತೀಚೆಗೆ, ಕೆಲವು ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರು ಗರಿಷ್ಠ ಕೆಲಸದ ಸಮಯವನ್ನು ವಾರಕ್ಕೆ 70 ಅಥವಾ 90 ಗಂಟೆಗಳವರೆಗೆ ಹೆಚ್ಚಿಸಬೇಕು ಎಂಬ ಪ್ರಸ್ತಾಪ ಮಾಡಿದ್ದರು.

"ವಾರಕ್ಕೆ ಗರಿಷ್ಠ ಕೆಲಸದ ಸಮಯವನ್ನು 70 ಅಥವಾ 90 ಗಂಟೆಗಳವರೆಗೆ ಹೆಚ್ಚಿಸುವ ಯಾವುದೇ ಪ್ರಸ್ತಾಪವು ಸರ್ಕಾರದ ಮುಂದೆ ಇಲ್ಲ" ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ಕೆಲಸದ ಸಮಯ
ವಾರಕ್ಕೆ 60 ಗಂಟೆಗಿಂತ ಹೆಚ್ಚು ಕೆಲಸ 'ವ್ಯತಿರಿಕ್ತ' ಪರಿಣಾಮ ಬೀರಬಹುದು: 2024-25ರ ಆರ್ಥಿಕ ಸಮೀಕ್ಷೆ ಎಚ್ಚರಿಕೆ

ಕಾರ್ಮಿಕ ವಿಷಯ ಸಮಕಾಲೀನ ಪಟ್ಟಿಯಲ್ಲಿರುವುದರಿಂದ, ಕಾರ್ಮಿಕ ಕಾನೂನುಗಳ ಜಾರಿಯನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಅವರವರ ವ್ಯಾಪ್ತಿಯಲ್ಲಿ ಮಾಡುತ್ತವೆ ಎಂದು ಅವರು ಸದನಕ್ಕೆ ತಿಳಿಸಿದರು.

ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳ ಪ್ರಕಾರ, ಕೆಲಸದ ಸಮಯ ಮತ್ತು ಅಧಿಕಾವಧಿ ಸೇರಿದಂತೆ ಕೆಲಸದ ಪರಿಸ್ಥಿತಿಗಳನ್ನು 1948 ರ ಕಾರ್ಖಾನೆ ಕಾಯ್ದೆ ಮತ್ತು ಆಯಾ ರಾಜ್ಯ ಸರ್ಕಾರಗಳ ಅಂಗಡಿಗಳು ಮತ್ತು ಕಂಪನಿಗಳ ಕಾಯ್ದೆಯ ನಿಬಂಧನೆಗಳ ಮೂಲಕ ನಿಯಂತ್ರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com