ಬ್ರೈನ್ ಸ್ಟ್ರೋಕ್: ರಾಮ ಮಂದಿರದ ಪ್ರಧಾನ ಅರ್ಚಕರ ಆರೋಗ್ಯ ಸ್ಥಿತಿ ಗಂಭೀರ!

85 ವರ್ಷದ ಮಹಂತ್ ಸತ್ಯೇಂದ್ರ ದಾಸ್ ಅವರನ್ನು ಪ್ರಾಥಮಿಕ ಚಿಕಿತ್ಸೆಯ ನಂತರ ಭಾನುವಾರ SGPGI ಗೆ ಸ್ಥಳಾಂತರಿಸಲಾಯಿತು. ಸತ್ಯೇಂದ್ರ ದಾಸ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ.
Mahant Satyendra Das
ಮಹಂತ್ ಸತ್ಯೇಂದ್ರ ದಾಸ್
Updated on

ಅಯೋಧ್ಯೆ: ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕರು ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದು, ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯಲ್ಲಿ (ಎಸ್‌ಜಿಪಿಜಿಐ) ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ.

85 ವರ್ಷದ ಮಹಂತ್ ಸತ್ಯೇಂದ್ರ ದಾಸ್ ಅವರನ್ನು ಪ್ರಾಥಮಿಕ ಚಿಕಿತ್ಸೆಯ ನಂತರ ಭಾನುವಾರ SGPGI ಗೆ ಸ್ಥಳಾಂತರಿಸಲಾಯಿತು. ಸತ್ಯೇಂದ್ರ ದಾಸ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿದ್ದು, ಪ್ರಸ್ತುತ ನ್ಯೂರಾಲಜಿ ವಾರ್ಡ್ HDU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು SGPGI ಆಸ್ಪತ್ರೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಸತ್ಯೇಂದ್ರ ದಾಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ನಿಗಾವಣೆಯಲ್ಲಿದ್ದಾರೆ ಎಂದು ಆಸ್ಪತ್ರೆ ಮಾಹಿತಿ ಹಂಚಿಕೊಂಡಿದೆ.

Mahant Satyendra Das
ಅಯೋಧ್ಯೆ ರಾಮಮಂದಿರ: ರಾಮಲಲ್ಲಾ 'ಪ್ರಾಣ ಪ್ರತಿಷ್ಠೆ'ಗೆ ಒಂದು ವರ್ಷ

ದಾಸ್ ಅವರು ಡಿಸೆಂಬರ್ 6, 1992 ರಂದು ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕ ರಾಮ ಮಂದಿರದ ಅರ್ಚಕರಾಗಿದ್ದರು. ಅಯೋಧ್ಯೆಯ ಹೊಸ ರಾಮ ಮಂದಿರದ ಪ್ರಧಾನ ಅರ್ಚಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com