
ಫತೇಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಪಂಭಿಪುರ ಬಳಿ ಮಂಗಳವಾರ ಬೆಳಗ್ಗೆ ನಿಂತಿದ್ದ ಗೂಡ್ಸ್ ರೈಲಿಗೆ ಮತ್ತೊಂದು ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಗಾರ್ಡ್ ಕೋಚ್ ಮತ್ತು ಎಂಜಿನ್ ಹಳಿ ತಪ್ಪಿ ಇಬ್ಬರು ಭಾರತೀಯ ರೈಲ್ವೆ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಿಂದಾಗಿ ಮೇಲಿನ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಹಾನಿಗೊಳಗಾದ ವಿಭಾಗವನ್ನು ತೆರವುಗೊಳಿಸಲು ಮತ್ತು ರೈಲು ಸಂಚಾರವನ್ನು ಪುನರಾರಂಭಿಸಲು ರಕ್ಷಣಾ ಮತ್ತು ಪುನಃಸ್ಥಾಪನೆ ಕಾರ್ಯಾಚರಣೆಗಳು ಪ್ರಸ್ತುತ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದ (CSC) ವೈದ್ಯ ಸುಭಾಷ್ ದುಬೆ, ಇಬ್ಬರು ಗಾಯಾಳುಗಳನ್ನು ಕರೆತರಲಾಯಿತು. ಅವರು ಬೆಳಗ್ಗೆ 7 ಗಂಟೆ ಸುಮಾರಿಗೆ ನಮ್ಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದು ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಿದ್ದೇವೆ ಎಂದರು.
ಗಾಯಗೊಂಡವರನ್ನು ಅನುಜ್ ರಾಜ್ (28ವ) ಮತ್ತು ಶಿವಶಂಕರ್ ಯಾದವ್ (35ವ) ಎಂದು ಗುರುತಿಸಲಾಗಿದೆ. ರೈಲ್ವೆ ಅಧಿಕಾರಿಗಳು ಹಾನಿ ಬಗ್ಗೆ ನಿರ್ಣಯಿಸುತ್ತಿದ್ದಾರೆ.
Advertisement