ಉತ್ತರಾಖಂಡ್ ನಂತರ ಗುಜರಾತ್ ನಲ್ಲಿ UCC ಜಾರಿಗೆ ಕ್ರಮ!

ಈ ಮಾಹಿತಿಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಧಿಕೃತವಾಗಿ ಘೋಷಿಸಿದ್ದು, ಪ್ರಧಾನಿ ನರೇಂದ್ರ ಮೋದಿ "ಎಲ್ಲರಿಗೂ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತಾರೆ" ಮತ್ತು ಯುಸಿಸಿ ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.
Bhupendra patel
ಭೂಪೇಂದ್ರ ಪಟೇಲ್online desk
Updated on

ಅಹ್ಮದಾಬಾದ್: ಉತ್ತರಾಖಂಡದ ನಂತರ, ಗುಜರಾತ್ ರಾಜ್ಯ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸಜ್ಜಾಗಿದ್ದು, ಕರಡು ಮಾರ್ಗಸೂಚಿಗಳನ್ನು ತಯಾರಿಸಲು ಐದು ಸದಸ್ಯರ ಸಮಿತಿಯನ್ನು ರಚಿಸಿದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರಂಜನಾ ದೇಸಾಯಿ ಅಧ್ಯಕ್ಷತೆಯ ಈ ಸಮಿತಿಯು 45 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ಕೇಳಲಾಗಿದೆ.

ಈ ಮಾಹಿತಿಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಧಿಕೃತವಾಗಿ ಘೋಷಿಸಿದ್ದು, ಪ್ರಧಾನಿ ನರೇಂದ್ರ ಮೋದಿ "ಎಲ್ಲರಿಗೂ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತಾರೆ" ಮತ್ತು ಯುಸಿಸಿ ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.

ರಂಜನಾ ದೇಸಾಯಿ ಅವರಲ್ಲದೆ, ಸಮಿತಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಸಿಎಲ್ ಮೀನಾ, ಹಿರಿಯ ವಕೀಲೆ ಆರ್‌ಸಿ ಕೊಡೇಕರ್, ಮಾಜಿ ಉಪಕುಲಪತಿ ದಕ್ಷೇಶ್ ಠಾಕರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಗೀತಾಬೆನ್ ಶ್ರಾಫ್ ಇದ್ದಾರೆ.

ಬಿಜೆಪಿಯ ಪ್ರಮುಖ ಭರವಸೆಗಳಲ್ಲಿ ಒಂದಾದ ಏಕರೂಪ ನಾಗರಿಕ ಸಂಹಿತೆಯು ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಇತ್ಯಾದಿ ವಿಷಯಗಳಲ್ಲಿ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಕಾನೂನನ್ನು ಒದಗಿಸುವ ಉದ್ದೇಶ ಹೊಂದಿದೆ.

ಗುಜರಾತ್‌ನ ಬಿಜೆಪಿ ಸರ್ಕಾರ ಈ ಕಲ್ಪನೆಯೊಂದಿಗೆ ಬಹಳ ಸಮಯದಿಂದ ಕೆಲಸ ಮಾಡುತ್ತಿದೆ. 2022 ರಲ್ಲಿ, ರಾಜ್ಯದಲ್ಲಿ ನಾಗರಿಕ ಸಂಹಿತೆಯ ಕಾರ್ಯಸಾಧ್ಯತೆ ಮತ್ತು ಅಗತ್ಯವನ್ನು ಅನ್ವೇಷಿಸಲು ಸರ್ಕಾರ ಒಂದು ಸಮಿತಿಯನ್ನು ಸ್ಥಾಪಿಸಿತ್ತು. ಸಮಿತಿಯ ಪಾತ್ರವು ಅಂತಹ ಸಂಹಿತೆಯ ಅಗತ್ಯವನ್ನು ಪರಿಶೀಲಿಸುವುದಕ್ಕೆ ಸೀಮಿತವಾಗಿತ್ತು.

Bhupendra patel
ಬಹುಸಂಖ್ಯಾತರ ಅಪೇಕ್ಷೆಯಂತೆ ಈ ದೇಶ ನಡೆಯುತ್ತೆ; UCC ಶೀಘ್ರದಲ್ಲೇ ಜಾರಿ: VHP ಕಾರ್ಯಕ್ರಮದಲ್ಲಿ ಜಡ್ಜ್ ಶೇಖರ್ ಯಾದವ್

ಕಳೆದ ತಿಂಗಳು, ಉತ್ತರಾಖಂಡ್ ಭಾರತ ಸ್ವಾತಂತ್ರ್ಯ ಪಡೆದ ನಂತರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಯಿತು. ಇದು ಜನವರಿ 27 ರಿಂದ ಜಾರಿಗೆ ಬಂದಿದೆ.

ಉತ್ತರಾಖಂಡ ನಾಗರಿಕ ಸಂಹಿತೆಯು ಎಲ್ಲಾ ವಿವಾಹಗಳಿಗೆ ಮತ್ತು ಲಿವ್-ಇನ್ ಸಂಬಂಧಗಳಿಗೆ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ. ಅದರ ಪ್ರಮುಖ ನಿಬಂಧನೆಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕುಗಳು, ವಿಚ್ಛೇದನಕ್ಕೆ ಸಮಾನ ಆಧಾರಗಳು ಮತ್ತು ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಕಾನೂನುಬದ್ಧತೆ ಸೇರಿವೆ.

ಪುಷ್ಕರ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದ ನೋಂದಣಿಯನ್ನು ಸುಗಮಗೊಳಿಸಲು ಆನ್‌ಲೈನ್ ಪೋರ್ಟಲ್ ನ್ನು ಪರಿಚಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com