ಮಹಾ ಕುಂಭ ಮೇಳ: ಫೆಬ್ರವರಿ 7 ರಂದು 25,000 ಬುಡಕಟ್ಟು ಭಕ್ತರಿಂದ ಸಂಗಮದಲ್ಲಿ ಪುಣ್ಯ ಸ್ನಾನ- RSS
ಮಹಾಕುಂಭ ನಗರ: ಸುಮಾರು 25,000 ಬುಡಕಟ್ಟು ಸಮುದಾಯದ ಭಕ್ತರು ಪ್ರಯಾಗ್ ರಾಜ್ ಗೆ ತೆರಳಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಅಲ್ಲದೇ ತಮ್ಮ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ರಕ್ಷಿಸುವ ಪ್ರತಿಜ್ಞೆ ಕೈಗೊಳ್ಳಲಿದ್ದಾರೆ ಎಂದು ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಬುಧವಾರ ಹೇಳಿದೆ.
ವನವಾಸಿ ಕಲ್ಯಾಣ ಆಶ್ರಮವು ಫೆಬ್ರವರಿ 6 ರಿಂದ ಫೆಬ್ರವರಿ 10 ರವರೆಗೆ ಮಹಾಕುಂಭದಲ್ಲಿ ಬುಡಕಟ್ಟು ಸಮುದಾಯಗಳ ಭಕ್ತರ “ಮಹಾ ಸಭೆ' ಆಯೋಜಿಸಿದೆ ಎಂದು ಸೇವಾ ಪ್ರಕಲ್ಪ ಸಂಸ್ಥಾನ ತಿಳಿಸಿದೆ. ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಂತ ಹಳೆಯ ಅಂಗಸಂಸ್ಥೆಗಳಲ್ಲಿ ಒಂದಾಗಿದೆ.
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ವನವಾಸಿ ಕಲ್ಯಾಣ ಆಶ್ರಮದಿಂದ ಫೆಬ್ರವರಿ 6 ರಿಂದ ಫೆಬ್ರವರಿ 10 ರವರೆಗೆ ಬೃಹತ್ ಬುಡಕಟ್ಟು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸೇವಾ ಪ್ರಕಲ್ಪ ಸಂಸ್ಥಾನದ ಕಾರ್ಯದರ್ಶಿ ಸಲೀಲ್ ನೇಮಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಐತಿಹಾಸಿ ಕಾರ್ಯಕ್ರಮದಲ್ಲಿ ದೇಶಾದ್ಯಂತ ಸುಮಾರು 25,000 ಬುಡಕಟ್ಟು ಭಕ್ತರು ಪಾಲ್ಗೊಳ್ಳಲಿದ್ದು, ತಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳಲಿದ್ದಾರೆ. ಬುಡಕಟ್ಟು ಸ್ವಾಮೀಜಿಗಳು ಮತ್ತು ಭಕ್ತರಿಂದ ಫೆಬ್ರವರಿ 7 ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಸಂಗಮಕ್ಕೆ ತೆರಳಿ ಪುಣ್ಯ ಸ್ನಾನ ಮಾಡಲಿದ್ದಾರೆ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ತಿಳಿಸಿದೆ.
ದೇಶದ ವಿವಿಧ ಬುಡಕಟ್ಟುಗಳ 150 ತಂಡಗಳು ಇದರಲ್ಲಿ ಪಾಲ್ಗೊಂಡು ತಮ್ಮ ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತ ಪ್ರದರ್ಶಿಸುವ ಮೂಲಕ ಇಡೀ ಜಗತ್ತಿಗೆ 'ತು ಮೇನ್ ಏಕ್ ರಕ್ತ್' (ನೀವು ಮತ್ತು ನಾನು ಒಂದೇ ರಕ್ತ) ಎಂಬ ಸಂದೇಶವನ್ನು ರವಾನಿಸಲಿದ್ದಾರೆ" ಎಂದು ಆರ್‌ಎಸ್‌ಎಸ್ ಸಂಸ್ಥೆ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ