'ಸುಮ್ನೆ ಕುತ್ಕೋ': ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದ ಮಾಜಿ ಪ್ರಧಾನಿ ಪುತ್ರನ ವಿರುದ್ಧ ಖರ್ಗೆ ಕೆಂಡಾಮಂಡಲ

ಖರ್ಗೆ ಅವರು ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿದ್ದಾಗ, ನೀರಜ್‌ ಶೇಖರ್‌ ಪದೇ ಪದೇ ಅಡ್ಡಿಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ರಾಜ್ಯಸಭೆಯಲ್ಲಿ ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪದೇಪದೇ ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ, ಬಿಜೆಪಿ ಸಂಸದ ನೀರಜ್ ಶೇಖರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಖರ್ಗೆ ಅವರು ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿದ್ದಾಗ, ನೀರಜ್‌ ಶೇಖರ್‌ ಪದೇ ಪದೇ ಅಡ್ಡಿಪಡಿಸಿದರು. ಇದರಿಂದ ಕೆರಳಿದ ಮಲ್ಲಿಕಾರ್ಜುನ ಖರ್ಗೆ, 'ತೇರಾ ಬಾಪ್‌ ಮೇರಾ ಸಾಥಿ ತಾ..'(ನಿನ್ನ ತಂದೆ ನನ್ನ ಗೆಳೆಯರಾಗಿದ್ದರು) ಎಂದು ಏರುಧ್ವನಿಯಲ್ಲಿ ಗುಡುಗಿದರು.

"ನಿನ್ನ ಅಪ್ಪ(ಮಾಜಿ ಪ್ರಧಾನಿ ಚಂದ್ರಶೇಖರ್‌) ನನ್ನ ಸಮಕಾಲೀನರು. ನಾನು ನಿನ್ನನ್ನು ಬಾಲ್ಯದಲ್ಲಿ ನೋಡಿದ್ದೇನೆ. ನನ್ನ ಭಾಷಣಕ್ಕೆ ಅಡ್ಡಿಪಡಿಸದೇ ಸುಮ್ಮನೆ ಕುಳಿತಿಕೋ.." ಎಂದು ನೀರಜ್‌ ಶೇಖರ್‌ ಅವರನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಸಿಟ್ಟಿನಲ್ಲಿ ಹೇಳಿದರು.

ಖರ್ಗೆ ಅವರ ಆಕ್ರೋಶ ಸದನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು, ಸಭಾಪತಿ ಜಗದೀಪ್ ಧಂಕರ್ ಅವರು ಮಧ್ಯಪ್ರವೇಶಿಸಿ ಎರಡೂ ಕಡೆಯವರು ಶಾಂತವಾಗಿರುವಂತೆ ಕೇಳಿಕೊಂಡರು.

"ಚಂದ್ರಶೇಖರ್ ಜೀ ಈ ದೇಶ ಕಂಡ ಅತ್ಯಂತ ಎತ್ತರದ ನಾಯಕರಲ್ಲಿ ಒಬ್ಬರು. ದೇಶದಲ್ಲಿ ಚಂದ್ರಶೇಖರ ಜೀ ಅವರ ಬಗ್ಗೆ ಅಪಾರ ಗೌರವ ಇದೆ". .ಮಾಜಿ ಪ್ರಧಾನಿಯ ಬಗೆಗಿನ ತಮ್ಮ ಉಲ್ಲೇಖವನ್ನು ಹಿಂಪಡೆಯಿರಿ.." ಎಂದು ಜಗದೀಪ್‌ ಧನ್ಕರ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಿದರು.

ಆದರೆ ತಮ್ಮ ಮಾತನ್ನು ಹಿಂಪಡೆಯಲು ನಿರಾಕರಿಸಿದ ಮಲ್ಲಿಕಾರ್ಜುನ ಖರ್ಗೆ, "ನಾನು ಕೂಡ ಚಂದ್ರಶೇಖರ್‌ ಅವರನ್ನು ಗೌರವಿಸುತ್ತೇನೆ. ನಾವಿಬ್ಬರೂ ಒಟ್ಟಿಗೆ ಜೈಲಿನಲ್ಲಿ ಕಾಲ ಕಳೆದಿದ್ದೇವೆ. ಅಲ್ಲದೇ ನನಗೆ ನೀರಜ್‌ ಶೇಖರ್‌ ಮೇಲೂ ಮಮಕಾರವಿದೆ. ನಾವಿಬ್ಬರೂ ಸದನದ ಹೊರಗೆ ಆಪ್ತವಾಗಿ ಭೇಟಿಯಾಗುತ್ತೇವೆ. ನನ್ನ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕೆ ನಾನು ಅವರನ್ನು ಗದರಿದೆ.." ಎಂದು ಸ್ಪಷ್ಟಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ
900 ಇಲಿಗಳನ್ನು ತಿಂದ ನಂತರ ಬೆಕ್ಕು ಹಜ್‌ ಯಾತ್ರೆಗೆ ಹೋಯ್ತು: ಗಾದೆ ಮೂಲಕ ಬಜೆಟ್​ ಟೀಕಿಸಿದ ಖರ್ಗೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com